ಗದಗ

ನಿವೃತ್ತ ನೌಕರರ ಸಭೆ: ಸಿದ್ದುಗೆ ಅಭಿನಂದನೆ

Published On :

ಗದಗ:  ಗದಗ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯು ಸಂಘದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಅಧ್ಯಕ್ಷತೆಯಲ್ಲಿ ಈಚೆಗೆ ಸಂಘದ ಕಟ್ಟಡದಲ್ಲಿ ನೆರವೇರಿತು.  ಸಭೆಯಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಸಿದ್ದರಾಮಯ್ಯ ಹಾಗೂ ಗದಗ ಜಿಲ್ಲೆಯಲ್ಲಿ ಶಾಸಕರಾಗಿ ಆಯ್ಕೆಯಾದ ಎಚ್.ಕೆ. ಪಾಟೀಲ, ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ ಹಾಗೂ ರಾಮಕೃಷ್ಣ ದೊಡ್ಡಮನಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು.  ಹೊಸ ಸರ್ಕಾರ ರಚನೆಯಾದ ತಕ್ಷಣ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಬೇಡಿಕೆಗಳಿಗೆ ಸ್ಪಂದಿಸಿ, ಜೀವ ವಿಮಾ ಯೋಜನೆ ಜತೆಗೆ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಮಾಸಿಕ ವೈದ್ಯಕೀಯ ಭತ್ಯೆ ನೀಡುವ ಕುರಿತು ನಿರ್ಣಯ ತೆಗೆದುಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಸಂಘದ ಬೇಡಿಕೆಯನ್ನು ಮನ್ನಿಸಿ ಸರ್ಕಾರವು ಈ ಬಾರಿ ಕಾರ್ಯನಿರತ ನೌಕರರ ಜತೆಗೆ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಒಂದೇ ಆದೇಶದಲ್ಲಿ ತುಟ್ಟಿ ಭತ್ಯೆ ನೀಡಿರುವುದನ್ನು ಸಭೆಯಲ್ಲಿ ಸ್ಮರಿಸಲಾಯಿತು. ಅಲ್ಲದೆ ಇದೇ ತಿಂಗಳ ವೇತನದಲ್ಲಿ ಕೂಡಿಸುವಂತೆ ವ್ಯವಸ್ಥೆ ಮಾಡಬೇಕೆಂದು ಎಲ್ಲ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಗದಗ ಜಿಲ್ಲಾ ಖಜಾನಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಯಿತು. ನಗರದ ಮೂಲಭೂತ ಸೌಲಭ್ಯಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವ ಕುರಿತು ಶಾಸಕರಲ್ಲಿ ಮನವಿ ಮಾಡಲು ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ರಾಜಶೇಖರ ಹಿರೇಮಠ, ವಿ.ಸಿ. ಮೆಣಸಗಿ, ಪಿ.ಆರ್. ಪಾಟೀಲ, ಸುಜಾತಾ ದೇಸಾಯಿ, ಸಿ.ಎಂ. ಅಂಗಡಿ, ವೈ.ಸಿ. ಚಳ್ಳಮರದ, ಬಿ.ವೈ. ಹುಣಸಿಮರದ ಹಾಗೂ ವಿ.ಎಸ್. ಪೂಜಾರರವರನ್ನು ಹೊಸ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು. ಆರ್.ಎಂ. ಸಿಂದಗಿಯವರನ್ನು ಜಿಲ್ಲಾ ಹಿರಿಯ ನಾಗರಿಕರ ಉಪಸಮಿತಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಬಿ.ಎಸ್. ನಾಯ್ಕರ, ಐ.ಕೆ. ಬಳುಚಗಿ, ವಿ.ಸಿ. ಹಂಚನಾಳ, ಎಚ್.ಎಸ್. ಪಾಟೀಲ, ಎನ್.ಜಿ. ಮುಳಗುಂದ, ಬಿ.ಬಿ. ಬಾವಿಕಟ್ಟಿ, ಎಂ.ಎಚ್. ಗುಂಜಾಳ, ಬಿ.ಎ. ವಸ್ತ್ರದ, ಪಿ.ಎಂ. ಜಿನಗಿ, ವಿ.ಎ. ಹೊಂಬಳ, ಎಂ.ಎಚ್. ಕುಲಕರ್ಣಿ, ಬಿ.ಎಂ. ಶೆಲವಡಿ, ಎಸ್.ಸಿ. ಚಪ್ಪನಮಠ, ಐ.ಬಿ. ಮರಿಬಸಣ್ಣವರ, ಬಿ.ಎಂ. ಮರಡೂರ, ಎಸ್.ಟಿ. ಬಾಕಳೆ, ಎಚ್.ಬಿ. ತಳವಾರ, ಎಂ.ಎಂ. ಮಾರನಬಸರಿ, ಎಸ್.ಐ. ಹೊನ್ನಗುಡಿ, ಟಿ.ಟಿ. ನಾರಾಯಣಪುರ, ಎಚ್.ಎಸ್. ಮಡಿವಾಳರ, ಸಿ.ವಿ. ಗಂಗಾವತಿ ಮುಂತಾದವರು ಉಪಸ್ಥಿತರಿದ್ದರು. ಬಿ.ಬಿ. ಹೂಗಾರ ಸ್ವಾಗತಿಸಿದರು. ರಾಜಶೇಖರ ಕರಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.