ಗದಗ

ಸಾಮೂಹಿಕ ಮದುವೆಯಿಂದ ಬಡವರಿಗೆ ಅನುಕೂಲ: ಶ್ರೀ

Published On :

ನರಗುಂದ:  ನವ ದಂಪತಿಗಳು ಕಷ್ಟ-ಸುಖಗಳನ್ನು  ಸಮನಾಗಿ ಹಂಚಿಕೊಂಡು ಜೋಡೆತ್ತಿನಂತೆ ಸಂಸಾರದ ಬಂಡಿ ಎಳೆಯಬೇಕು ಎಂದು ರಾಜಗುರು ಸಂಸ್ಥಾನ ಕಲ್ಮಠ ಚನ್ನಮ್ಮ ಕಿತ್ತೂರಿನ ಮಡಿವಾಲ ರಾಜಯೋಗಿಂದ್ರ ಶ್ರೀಗಳು ಹೇಳಿದರು.
ಭಾನುವಾರ ಪಟ್ಟಣದ ವಿರಕ್ತಮಠದ ಆವರಣದಲ್ಲಿ 144ನೇ ಲಿಂ. ಚನ್ನಬಸವ ಶ್ರೀಗಳ ಸ್ಮರಣೋತ್ಸವ ಹಾಗೂ ಅರಿವು ಆಚಾರ, ಪ್ರವಚನ ಕಾರ್ಯಕ್ರಮದ ಅಂಗವಾಗಿ 45 ಜೋಡಿಗಳ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಅಗತ್ಯ ವಸ್ತುಗಳು ಗಗನಕ್ಕೆ ಏರಿದ್ದರಿಂದ ಜನಸಾಮಾನ್ಯರು ಸಾಲ ಮಾಡಿ ಮದುವೆಗಳಂತಹ ಕಾರ್ಯಗಳನ್ನು ಮಾಡಬೇಕಿದೆ. ನಾಡಿನ ಮಠಾಧೀಶರು ಪ್ರತಿ ವರ್ಷ ತಮ್ಮ ಮಠದಿಂದ ಸಾಮೂಹಿಕ ವಿವಾಹಗಳನ್ನು ಮಾಡಿಕೊಡುತ್ತಿರುವುದು ಬಡವರಿಗೆ ಅನುಕೂಲವಾಗಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳು ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅಂಜದೆ ಜೀವನ ನಡೆಸಬೇಕು. ಹಿರಿಯರಿಗೆ ಗೌರವ ನೀಡಬೇಕು ಎಂದರು.
ನೇತೃತ್ವ ವಹಿಸಿದ್ದ ಅಂತೂರ-ಬೆಂತರಿನ ಕುಮಾರ ದೇವರ ಮಾತನಾಡಿ, ಮದುವೆಯಾಗುತ್ತಿರುವ ಯುವಕ-ಯುವತಿಯರು ಮುಂದಿನ ಜೀವನದಲ್ಲಿ ಉತ್ತಮ ಜೀವನ ಪದ್ಧತಿ ರೂಪಿಸಿಕೊಂಡು, ನೆಮ್ಮದಿ ಜೀವನ ನಡೆಸಲಿ. ಅದಕ್ಕೆ ಶ್ರೀಗಳ ಮಾರ್ಗದರ್ಶನ ಹಾಗೂ ಹಿರಿಯರ ಅನುಭವವನ್ನು ಕಾಲ ಕಾಲಕ್ಕೆ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಯನಾಳ ವಿರಕ್ತಮಠದ ಮಹಾಂತ ಶ್ರೀಗಳು, ವಿರಕ್ತಮಠದ ಚನ್ನಬಸವ ಶ್ರೀಗಳು, ಸಿಂಥನಕೇರಾ ವಿರಕ್ತಮಠದ ಹೊನ್ನಲಿಂಗ ಶ್ರೀಗಳು, ಬನಹಟ್ಟಿ ಶ್ರೀ ರುದ್ರಸ್ವಾಮಿ ಮಠದ ಸೊಲಬಯ್ಯ ಶ್ರೀಗಳು, ಕೊಂಗವಾಡ ಉಣ್ಣೆಮಠದ ಕಲಾವಲ್ಲಭ ಶಿವಾನಂದ ಶ್ರೀಗಳು, ಎಂ.ಬಿ.ಕುಲಕರ್ಣೆ, ಸಿದ್ದಲಿಂಗಪ್ಪ ಹೊಸಕೇರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.