ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ, ರೋಣ, ಮೇ 13
15ನೇ ಶತಮಾನದ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ತಾಲೂಕಿನ ಅರಹುಣಸಿಯಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರ ಮೆರವಣಿಗೆ ಗ್ರಾಮದ ಗ್ರಾಮದೇವತೆ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಲ್ಲಮ್ಮನ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಭಾವಚಿತ್ರ ಹೊತ್ತ ಎತ್ತಿನ ಗಾಡಿ, ಜಾಂಜ್ಮೇಳ, ಕರಡಿ ಮಜಲು, ಭಜನೆ ಮೇಳ, ತಾಯಂದಿರ ಸೋಭಾನ ಪದಗಳು, ಕುಂಬದ ಆರುತಿ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾವೇರಿ ಲೋಕಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 15ನೇ ಶತಮಾನದಲ್ಲಿ ಧರ್ಮ ಸಂದೇಶ ಸಾರಿ ನಾಡಿಗೆ ಒಳಿತನ್ನು ಬಯಸಿ ಮಹಾಶಿವಶರಣೆಯಾಗಿದ್ದರು. ನಾವಿಂದು ಮಹಾನ್ ಶರಣ, ಶರಣೆಯರ ಜಯಂತಿಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವುದು ನಮ್ಮ ಮೂಲ ಸಂಸ್ಕೃತಿಯನ್ನು ಜೀವಂತವಾಗಿಡುವ ಕೆಲಸವಾಗಿದೆ ಎಂದರು.
ಕೇವಲ ಜಯಂತಿಗಳನ್ನು ಅದ್ದೂರಿಯಿಂದ ಆಚರಣೆ ಮಾಡಿದರೆ ಸಾಲದು, ಅಂತಹ ಮಹಾನ್ ಶರಣರ ತತ್ವ, ನೀತಿಗಳನ್ನು ನಾವು ಅಳವಡಿಸಿಕೊಂಡು ಜಿವನದಲ್ಲಿ ಒಳ್ಳೆಯ ಮಾರ್ಗ ಹಿಡಿದಾಗ ಮಾತ್ರ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಇಂದಿನ ಯುವಕರು ಶರಣರ ಸಂದೇಶ, ತತ್ವಗಳನ್ನು ಪಾಲಿಸಬೇಕು ಎಂದರು.
ಶಂಕರಗೌಡ ಗಿರಡ್ಡಿ ಮಾತನಾಡಿ, ಶರಣರ, ಸಂತರ ಜೀವನ ನಮ್ಮೆಲ್ಲರಿಗೂ ದಾರಿದೀಪ. ಕೇವಲ ಒಂದು ದಿನ ಎಲ್ಲರೂ ಸೇರಿ ಜಯಂತಿಗಳನ್ನು ಆಚರಣೆ ಮಾಡುವುದರಿಂದ ಇಡೀ ಸಮಾಜಗಳೇ ಸುಧಾರಿಸುತ್ತವೆ ಎಂದು ತಿಳಿದುಕೊಳ್ಳುವುದಲ್ಲ. ಜಯಂತಿ ಆಚರಣೆಗಳು ಮಹಾನ್ ವ್ಯಕ್ತಿ, ಸಾದು, ಸಂತರ, ಶರಣ, ಶರಣೆಯರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿದೇ ಎಲ್ಲ ಸಮುದಾಯದವರು ಒಂದು ಗೂಡಿ ಆಚರಿಸಬೇಕು. ಅಂದಾಗ ಶರಣರ ಜಯಂತಿಗಳಿಗೆ ಮಹತ್ವ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲನಗೌಡ ಪಾಟೀಲ, ಪಾಲಾಕ್ಷಗೌಡ ಕರಕನಗೌಡ್ರ, ಕಂಟೆಪ್ಪಗೌಡ ಕರಕನಗೌಡ್ರ, ರಮೇಶ ಪಲ್ಲೇದ, ಹನುಮಂತ, ವಿ.ಎಚ್. ತಿಮ್ಮರಡ್ಡಿ, ಎಸ್.ಕೆ.ತಿಮರಡ್ಡಿ, ಬಸನಗೌಡ ಮುದಿಗೌಡ್ರ, ಎಸ್.ಎಸ್. ಪಾಟೀಲ, ಅಮರೇಶಗೌಡ ಗರಡ್ಡಿ, ಚಿದಾನಂದಗೌಡ ಸುಳ್ಳದ, ರಾಚ್ಚಮ್ಮ ಹತ್ತಿಮಠ, ಗೌರಮ್ಮ ಪಾಟೀಲ, ಶಂಕರಗೌಡ ಗಿರಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಮುಖಂಡರ ಆಗ್ರಹ
ಗಜೇಂದ್ರಗಡ: ರೋಣ ಕ್ಷೇತ್ರದಲ್ಲಿ 3ನೇ ಬಾರಿಗೆ ಗೆಲುವು ಸಾಧಿಸಿ, ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಶಾಸಕ ಜಿ.ಎಸ್. ಪಾಟೀಲರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ನೂತನ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿ.ಎಸ್. ಪಾಟೀಲರು ಎರಡು ಬಾರಿ ಶಾಸಕರಾಗಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಭಿವೃದ್ಧಿ ಕಾರ್ಯ ನಿರ್ವಹಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜನತೆ ಪಾಟೀಲರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಅಶೋಕ ಬಾಗಮಾರ, ಎಸ್.ಎಂ. ಆರಗಿದ್ದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ಗಿರೀಶ ರಂಗ್ರೇಜಿ, ಮೋಹನಸಾ ರಾಯಬಾಗಿ, ದತ್ತು ಬಾಕಳೆ, ಎಫ್.ಎಸ್. ಕರಿದುರಗನವರ, ಮಾರುತಿ ಕಲ್ಲೋಡ್ಡರ, ರವಿ ಗಡೇದವರ, ಯಾಸೀನ ಮಾರನಬಸರಿ, ಶ್ರೀಧರ ಗಂಜಿಗೌಡ್ರ, ಮುರ್ತುಜಾ ಡಾಲಾಯತ್, ಸಿದ್ದಾರೂಢ ನಂದನ ಜವಳೆಕರ, ಕೋಟ್ರೇಶ ಚಿಲಕಾ, ಪ್ರಶಾಂತ ರಾಠೋಡ, ವೆಂಕಟೇಶ ಮುದಗಲ್, ಉಮೇಶ ರಾಠೋಡ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

