ಗದಗ

ಒಗ್ಗಟ್ಟಿನಿಂದ ಯಶಸ್ಸು ಸಾಧ್ಯವಿದೆ

Published On :

ಗದಗ: ನಾವು ಯಾವುದೇ ಗುರಿ ತಲುಪಲು ಒಗ್ಗಟ್ಟಿನಿಂದ ಮಾತ್ರ ಯಶಸ್ಸಿನ ಶಿಖರವನ್ನೇರಬಹುದಾಗಿದೆ ಎಂದು ಮರಾಠಾ ಸಮಾಜದ ಮುಖಂಡ ಡಾ. ರಾಜು ರೋಖಡೆ ಹೇಳಿದರು.
ಅವರು ಭಾನುವಾರ ನಗರದ ಮಕಾಗಲ್ಲಿಯಲ್ಲಿ ಆದರ್ಶ ಫ್ರೆಂಡ್ಸ್ ಯುಥ್ಸ್ ಅಸೋಸಿಯನ್ನ ಆಶ್ರಯದಲ್ಲಿ ಶಿವಾಜಿ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗತಕಾಲದ ಆದರ್ಶಗಳಿಂದ ನಾವು ವರ್ತಮಾನಕ್ಕೂ ಭವಿಷ್ಯಕ್ಕೂ ಮಾರ್ಗದರ್ಶನ ಪಡೆಯಬೇಕೆ ಹೊರತು ಕೇವಲ ಗತಕಾಲವನ್ನು ವೈಭವೀಕರಿಸುತ್ತ ಕುಳಿತುಕೊಳ್ಳುವುದು ವರ್ತಮಾನದ ಕಡು ಸಮಸ್ಯೆಗಳಿಗೆ ಪರಿಹಾರವಾಗಲಾರದು. ನಮ್ಮ ವೈಭವ ಪರಂಪರೆಯನ್ನು ಮರಳಿ ಪಡೆಯಲು ನಮ್ಮ ಮಕ್ಕಳಿಗೆ ಅಶಕ್ಯವಿರುವ ಅತ್ಯುತ್ತಮ ಶಿಕ್ಷಣವನ್ನು ಒದಗಿಸಬೇಕು ಎಂದರು.
ವಿನಿತಕುಮಾರ ಜಗತಾಪ ಮಾತನಾಡಿ, ಮರಾಠರು ಒಂದು ಜನಾಂಗವಾಗಿ ಮಾತೃಭೂಮಿಗಾಗಿ ತ್ಯಾಗ ಹಾಗೂ ದೇಶ ಭಕ್ತಿಗಾಗಿ ಹೆಸರು ವಾಸಿಯಾಗಿದ್ದಾರೆ. ಇತಿಹಾಸವು ಇದಕ್ಕೆ ಸಾಕ್ಷಿಯಾಗಿರುತ್ತದೆ. 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಮರಾಠರ ವೈಭವವು ತನ್ನ ಉತ್ತಂಗ ಶಿಖರಕ್ಕೇರಿತು. ಆದರೆ, ದುರ್ದೈವದಿಂದ ಈ ಐತಿಹಾಸಿಕ ಘನತೆಯು ನಮ್ಮನ್ನು ಗತಕಾಲದ ಘನತೆಯಲ್ಲಿಯೇ ಸಂತೃಪ್ತಿ ಕಾಣುವ ಜೋಗಳಹಾಡಿ ಮಲಗಿಸಿದಂತಾಗಿದೆ. ಇದರ ಪರಿಣಾಮವಾಗಿ ಸಮುದಾಯವು ಅವನತಿಯತ್ತ ಸಾಗಿ ಇಂದು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮಟ್ಟಕ್ಕೆ ಇಳಿಯುವ ಸ್ಥಿತಿಯನ್ನು ತಲುಪಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭರತ್ ಇರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಾಡದ, ಶಿವಾಜಿರಾವ್ ಬೇಂದ್ರೆ, ಮಾರುತಿ ಅರಳಿಕಟ್ಟಿ, ಆನಂತ ಗಡಸಾಲಿ, ನಾರಾಯಣರಾವ್ ಗಾಯಕವಾಡ, ರುದ್ರಪ್ಪ ಪಟ್ಟಣಶಟ್ಟಿ, ಮಾರುತಿರಾವ ಜಾಧವ್, ಬಸವಂತಪ್ಪ ಕಾಟಕರ, ಅರವಿಂದರಾವ್ ಕದಂ, ಸುಶಿಲಾಬಾಯಿ ಬೇಂದ್ರೆ, ಪದ್ಮಾ ಗಾಯಕವಾಡ, ಶಾಂತಾಬಾಯಿ ಕದಂ, ಆದರ್ಶ ಫ್ರೆಂಡ್ಸ್ ಸಂಸ್ಥೆಯ ಪದಾಧಿಕಾರಿ ರುದ್ರಪ್ಪ ಜೋಲ್ಲೆ, ಪ್ರಕಾಶ ಬೇಂದ್ರೆ, ಗುರುರಾಜ ಮರಾಠೆ, ಶರಣು ಮರಗುಟ್ಟಿ, ಆನಂದ ಗಾಯಕವಾಡ, ಕಿಶೋರ ಜಾಧವ್, ಮಂದಾದೇಶ ಕಾಟಕರ, ಸಂಗು ಜಮಖಂಡಿ, ಅನಿಲ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸುರೇಶ ಬೇಂದ್ರೆ ಸ್ವಾಗತಿಸಿದರು. ಜಗದೀಶ ಜಾಧವ್ ನಿರೂಪಿಸಿದರು. ರಾಘವೇಂದ್ರ ಕಾಟಕರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.