ತಹಸೀಲ್ದಾರ್ಗೆ ಸಚಿವ ಸ್ಥಾನ ನೀಡಿ: ಒತ್ತಾಯ
ಹಾನಗಲ್ಲ: ಹಾನಗಲ್ ನೂತನ ಶಾಸಕರಾದ ಮನೋಹರ ತಹಸೀಲ್ದಾರ್ಗೆ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಅಖಂಡ ಧಾರವಾಡ ಜಿಲ್ಲೆ ಹಾಗೂ ಈಗಿನ ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮನೋಹರ ತಹಶೀಲ್ದಾರ್ ನಾಲ್ಕು ಬಾರಿಗೆ ಶಾಸಕರಾಗಿ, ವಿಧಾನಸಭೆ ಉಪ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಜಿಲ್ಲಾ ಅಧ್ಯಕ್ಷಾವಧಿಯಲ್ಲಿ ಪ್ರಸ್ತುತ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಈ ಎಲ್ಲ ಅಂಶಗಳ ಆಧಾರದ ಮೇಲೆ ಮನೋಹರ ತಹಸೀಲ್ದಾರ್ಗೆ ಸಚಿವ ಸ್ಥಾನ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಕೆಪಿಸಿಸಿ ಸದಸ್ಯ ರಾಜಶೇಖರ ಸಾಲಿಮಠ, ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎಸ್. ಪಡೆಪ್ಪನವರ, ಆರ್.ಎಸ್. ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಮಖಬೂಳ ಅಹ್ಮದ್ ಹುಲಗೂರ, ಪಕ್ಷದ ವಕ್ತಾರ ಕೆ.ಎಲ್. ದೇಶಪಾಂಡೆ, ಹಿಂದುಳಿದ ವರ್ಗಗಳ ಅಧ್ಯಕ್ಷ ಏಳುಕೋಟೆಪ್ಪ ಹಾವಳೇರ, ಎಸ್.ಟಿ. ಘಟಕದ ಅಧ್ಯಕ್ಷ ರಾಮಣ್ಣ ಪೂಜಾರ, ಉಪಾಧ್ಯಕ್ಷ ಎಂ.ಆರ್. ಗುತ್ತಲ, ಮುಖಂಡರಾದ ನಾಗಪ್ಪ ಸವದತ್ತಿ, ವೈ.ಎಫ್. ಕಿತ್ತೂರ, ರಾಮಣ್ಣ ಮಾಸನಕಟ್ಟಿ, ಖುರಶಿದ ಹುಲ್ಲತ್ತಿ, ನಾಶೀರಖಾನ, ಮುನೀರಹ್ಮದ್ ಪಾಳಾ, ವಿರೇಶ ಬೈಲವಾಳ, ಮತ್ತಿಹಳ್ಳಿ, ಎಸ್.ಎಂ.ಪಾಟೀಲ, ಶಿವಣ್ಣ ಗೊಲ್ಲರ, ಪ್ರಶಾಂತ ಗೊಂದಿ, ಮಹದೇವ ಪೂಜಾರ, ಪ್ರಕಾಶ ಚೊಳಪ್ಪನವರ, ಗೌಸಮೊದ್ದೀನಸಾಬ ಹಿರೂರ, ಘನಶಾಮ ದೇಶಪಾಂಡೆ, ದಿನೇಶ ಕುಲಕರ್ಣಿ, ಪ್ರಶಾಂತ ನಾಡಿಗೇರ, ಎಂ.ಆರ್. ನಾಸಿಕ, ವಿದ್ಯಾಶಂಕರ ದೇಶಪಾಂಡೆ, ಬಂಗಾರಗೌಡ್ರು ಪಾಟೀಲ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.
ಬಸವಣ್ಣನವರ ಆದರ್ಶ ಸಾರ್ವಕಾಲಿಕ: ಬೀಳಗಿ
ಗಜೇಂದ್ರಗಡ: ಸಮಾಜದಲ್ಲಿನ ಜಾತೀಯತೆ ತೊಲಗಿಸಿ, ವಚನ ಕಾಯಕ ತತ್ವದ ಮೂಲಕ ಸೌಹಾರ್ದ ಬದುಕಿಗೆ ದಾರಿ ತೋರಿಸಿದ ಬಸವಣ್ಣನವರ ಆದರ್ಶಗಳು ಸಾರ್ವಕಾಲಿಕ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಅವರು ಸೋಮವಾರ ಸ್ಥಳೀಯ ಪುರಸಭೆ ಸಭಾಭವನದಲ್ಲಿ ಬಸವ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು. ಸ್ವಾರ್ಥಕ್ಕಾಗಿ ಬಾಳದೆ ಸಮಾಜದ ಒಳಿತಿಗಾಗಿ ಶ್ರಮಿಸಿ, ಜಾತಿ ಭೇದ ತೊರೆದು, ಸಹಬಾಳ್ವೆಗೆ ಮುಂದಾಗಿ ಎಂದು ವಚನಗಳ ಸಾರದೊಂದಿಗೆ ವಿಶ್ವಕ್ಕೆ ಸಂದೇಶ ನೀಡಿದರು. ಕೀಳರಿಮೆ ತೊರೆದು ನಿಸ್ವಾರ್ಥ ಭಾವನೆಯ ಮಹತ್ವ ಅರಿತು ಬದುಕು ನಡೆಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು. ಎಂ.ಎಸ್. ಹಡಪದ, ಶೇಕಣ್ಣ ಇಟಗಿ, ರವಿ ಕಲಾಲ, ಸುಮಿತ್ರಾ ತೊಂಡಿಹಾಳ, ಕೆ.ಓ. ಮುಲ್ಲಾ, ಸಿ.ಕೆ. ಕುಲಕರ್ಣಿ, ಬಿ.ಜಿ. ಇಂಡಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

