ಧರ್ಮದ ದಾರಿಯಲ್ಲಿ ನಡೆಯಿರಿ: ಶ್ರೀ
ಕನ್ನಡಪ್ರಭ ವಾರ್ತೆ, ಗದಗ, ಮೇ 13
ಮನುಷ್ಯ ಬದುಕುವ ಕಲೆ ರೂಡಿಸಿಕೊಳ್ಳಬೇಕು. ಬದುಕು ರೂಪಿಸಿಕೊಳ್ಳುವತ್ತ ಮನಸ್ಸುನ್ನು ಕೇಂದ್ರಿಕೃತ ಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ನಿಲ್ಲಬೇಕು. ಇಂಥಹ ಸಾಧನೆಗೆ ಧರ್ಮವು ಅತೀ ಅವಶ್ಯ ಎಂದು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀ ಹೇಳಿದರು.
ಈಚೆಗೆ ಅವರು ನಗರದ ಹಾಲಕೇರಿ ಆನಂದಾಶ್ರಮದಲ್ಲಿ ಜರುಗಿದ 97ನೇ ಶಿವಾನುಭವ ಸಂಪದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಮನುಷ್ಯ ಜೀವನದಲ್ಲಿ ಉತ್ತಮ ನಡೆ, ನುಡಿಯನ್ನು ಅಳವಡಿಸಿಕೊಂಡು ಬೇರೆಯವರಿಗೆ ಒಳ್ಳೆಯದನ್ನು ಮಾಡುವಂತಹ ಗುಣಗಳನ್ನು ಮೈಗೂಡಿಸಿಕೊಂಡು ನಡೆಯುವುದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ. ಯಾವಾಗಲೂ ಸಮಾಜಕ್ಕೆ ಒಳ್ಳೆಯದಾಗುವಂತಹ ಚಿಂತನೆಗಳನ್ನು ಮಾಡಿ ಅವುಗಳನ್ನು ಕಾರ್ಯಗತಗೊಳಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಕಥೆ ಉಪ ಕಥೆಗಳ ಮೂಲಕ ಜನರಿಗೆ ಉಪದೇಶ ಮಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕವಿತಾ ದಂಡಿನ ಕಾಯಕವೇ ಕೈಲಾಸ ವಿಷಯದ ಕುರಿತು ಉಪನ್ಯಾಸ ನೀಡಿ, ಮಾನವ ಜೀವನವನ್ನು ಕರುಣಿಸಿದ್ದು ದೇವರು. ಬದುಕು ಸಂಸ್ಕಾರಯುತವಾಗಬೇಕು. ಮನಸ್ಸು ಹದಗೊಳ್ಳಬೇಕು. ಜೀವನ ನಿಂತ ನೀರಾಗಬಾರದು. ಬದುಕು ಒಂದು ಸುಂದರ ಕಲೆ. ನಾವುಗಳು ನೆರೆ ಹೊರೆಯವರ ಜತೆಗೆ ಉತ್ತಮ ಬಾಂಧವ್ಯದಿಂದ ಇರಬೇಕು. ಸದ್ಗುಣಗಳನ್ನು ಬೆಳೆಸಿಕೊಂಡು ಬದುಕಿನಲ್ಲಿ ಗುರಿಯನ್ನು ಇಟ್ಟುಕೊಂಡು ಬಾಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಪ್ರೊ. ಕೆ.ಎಚ್. ಬೇಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಮಾಲಾ ಮಾನಶೆಟ್ಟಿ ಪ್ರಾರ್ಥಿಸಿದರು. ಬಿ.ಎಫ್. ಚೇಗರೆಡ್ಡಿ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು. ವಿ.ಎಸ್. ಶಿವನಗೌಡರ ವಂದಿಸಿದರು. ನಂತರ ಸಭೆಯಲ್ಲಿ ವಿವಿಧ ಗಾಯಕರಿಂದ ಸಂಗೀತ ಕಾರ್ಯಕ್ರಮ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

