ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಶಶಿಕಲಾ ಪಾಟೀಲ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 14
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂಬುದನ್ನು ರಾಜ್ಯದ ಪ್ರಬುದ್ಧ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಅವರ ಸೊಸೆ ಶಶಿಕಲಾ ಪಾಟೀಲ ಹೇಳಿದರು.
ರೋಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಮೀಪದ ದಿಂಡೂರ ಗ್ರಾಮಕ್ಕೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಜಿ.ಎಸ್. ಪಾಟೀಲರ ಗೆಲುವಿಗಾಗಿ ಗ್ರಾಮದ ದುರ್ಗಾದೇವಿ ದೇಗುಲಕ್ಕೆ ದೀಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದ ಅಭಿಮಾನಿ ಸಿ.ಆರ್. ಮಕಾನದಾರರನ್ನು ಅಭಿನಂದಿಸಿದರು.
ಜನತೆಗೆ ನೀಡಿದ ಭರವಸೆಯಂತೆ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಒಂದು ಗಂಟೆಯೊಳಗೆ ರಾಜ್ಯದ 98.17 ಲಕ್ಷ ಬಿಪಿಎಎಲ್ ಕುಟುಂಬಗಳಿಗೆ ಕೆಜಿ ಒಂದಕ್ಕೆ ರು. 1 ರಂತೆ ತಿಂಗಳಿಗೆ 30 ಕೆಜಿ ಪಡಿತರ ಅಕ್ಕಿ, ಹಾಲು ಉತ್ಪಾದಕರಿಗೆ ರು. 4 ಪ್ರೋತ್ಸಾಹ ಧನ, ವಸತಿ ನಿರ್ಮಿಸಿಕೊಳ್ಳಲು ರು. 1.20 ಲಕ್ಷ ಸಹಾಯ ಧನ, ಭಾಗ್ಯ ಜ್ಯೋತಿ ಕುಟೀರಗಳ ವಿದ್ಯುತ್ ಬಾಕಿ ಮನ್ನಾ, ದಲಿತ, ಅಲ್ಪ ಸಂಖ್ಯಾತ ಹಿಂದುಳಿದ ಸಮುದಾಯಗಳ ನಿಗಮದ ಸಾಲ ಮನ್ನಾ ಸೇರಿದಂತೆ ಹಲವಾರು ಮಹತ್ವಾಕಾಂಕ್ಷೆ ಯೋಜನೆಗಳಿಗೆ ಚಾಲನೆ ನೀಡಿ ಕಾಂಗ್ರೆಸ್ ಪಕ್ಷ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಪಕ್ಷ ಎಂಬುದನ್ನು ಮುಖ್ಯಮಂತ್ರಿಗಳು ಸಾಬೀತು ಪಡಿಸಿದ್ದಾರೆ ಎಂದರು.
ರೋಣ ಮತಕ್ಷೇತ್ರದ ಜನತೆ ನೂತನ ಶಾಸಕ ಜಿ.ಎಸ್. ಪಾಟೀಲರ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಾಟೀಲರು ಶ್ರಮಿಸಲಿದ್ದಾರೆಂದು ವಿಶ್ವಾಸವ್ಯಕ್ತಪಡಿಸಿದ ಅವರು, ನಾನು ಸಹ ಪ್ರತಿ ತಿಂಗಳಿಗೊಮ್ಮೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತೇನೆ ಎಂದರು. ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ರಾಜೂರ ಗ್ರಾಪಂ ಅಧ್ಯಕ್ಷ ಕೆ.ಡಿ ಕಂಬಳಿ, ಎಚ್.ಬಿ. ಮೇಟಿ, ನಾರಾಯಣರಾವ್ ಘೋರ್ಪಡೆ, ಗ್ರಾಪಂ ಸದಸ್ಯ ಪಡಿಯಪ್ಪ ಪಮ್ಮಾರ, ಶ್ರೀಧರ ಚುಂಚಾ, ಶಂಕರ ರಾಠೋಡ, ಸಿ.ಬಿ. ಪಾಟೀಲ, ಶರೀಫ ಸೌದಾಗರ, ಎಸ್.ಎಂ. ಮಕಾನದಾರ, ಸಂಗಪ್ಪ ತೇಜಿ, ಮಂಜು ವಡ್ಡರ, ಈರಪ್ಪ ಸಂತರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

