ಸತಿ-ಪತಿ ಒಂದಾಗಿ ಕಾರ್ಯನಿರ್ವಹಿಸಿ: ಜೊಲ್ಲೆ
ಗದಗ: ಹುಟ್ಟು ಆಕಸ್ಮಿಕ, ಸಾವು ಕಟ್ಟಿಟ್ಟ ಬುತ್ತಿ. ಎರಡರ ನಡುವಿನ ಬದುಕಿನಲ್ಲಿ ಸತಿಪತಿಗಳೊಂದಾಗಿ ಕಾರ್ಯನಿರ್ವಹಿಸಿದರೆ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯ ಎಂದು ಯಕ್ಷಂಬಾದ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಸೋಮವಾರ ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ 2119ನೇ ಶಿವಾನುಭವ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಲಿಂಬಯ್ಯಸ್ವಾಮಿಮಠ ಪ್ರತಿಭಾ ಪ್ರತಿಷ್ಠಾನದ 2013ನೇ ಸಾಲಿನ ಮಾನವತಾವಾದಿ ಬಸವೇಶ್ವರ ಪ್ರಶಸ್ತಿಯನ್ನು ದಂಪತಿ ಸಮೇತ ಸ್ವೀಕರಿಸಿ ಮಾತನಾಡಿದರು. ಸಾನ್ನಿಧ್ಯವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಈಚೆಗೆ ಐಎಎಸ್ ಪಾಸಾದ ದುಂದೂರಿನ ಜಗುನಾಥ ಜಲರಡ್ಡಿ ಅವರನ್ನು ಸನ್ಮಾನಿಸಲಾಯಿತು. ನಂತರ ಅವರು ಐಎಎಸ್ಗೆ ನಡೆಸಿದ ಸಿದ್ಧತೆ ಕುರಿತು ಮಾತನಾಡಿದರು. ಬಸವ ಜಯಂತಿ ನಿಮಿತ್ತ ಶರಣ ಲಿಂ. ಲಕ್ಕಪ್ಪ ಶಿರಹಟ್ಟಿ ಸ್ಮರಣಾರ್ಥ ವಚನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿಮಠ ಪ್ರತಿಭಾ ಪ್ರತಿಷ್ಠಾನದವರು ನೀಡುವ 2013ನೇ ಸಾಲಿನ ಮಾನವತಾವಾದಿ ಬಸವೇಶ್ವರ ಪ್ರಶಸ್ತಿಯನ್ನು ಜೊಲ್ಲೆ ದಂಪತಿಗೆ ನೀಡಲಾಯಿತು. ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಬಿ.ಆರ್. ಅನಂತನ್ ಪ್ರಶಸ್ತಿ ಪ್ರದಾನ ಮಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಧ್ಯಕ್ಷ ಸಿಎ. ಕೆಎಸ್. ಚೆಟ್ಟಿ ಪ್ರಾರ್ಥಿಸಿದರು. ಮಕ್ಕಳಿಂದ ಗ್ರಂಥಪಠಣ ಹಾಗೂ ವಚನಚಿಂತನ ನಡೆಯಿತು. ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿಮಠ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವಣಸಿದ್ಧಯ್ಯ ಮರಿದೇವರಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಈರಪ್ಪ ಹೊನಗಣ್ಣನವರ, ಗುರುಬಸವಲಿಂಗ ತಡಸದ, ಪ್ರಭುದೇವ ಹಿರೇಮಠ, ಪ್ರೊ. ಎಸ್.ಎನ್. ಆದಿ, ಡಾ. ಅನಂತ ಶಿವಪುರ, ಚಂದ್ರಶೇಖರ ವಸ್ತ್ರದ, ಬಸವರಾಜ ರಾಮನಕೋಪ್ಪ, ಕಿಶನ್ ಮೇರವಾಡೆ, ಮುರುಘರಾಜೇಂದ್ರ ಬಡ್ನಿ, ಶಿವಪುತ್ರಪ್ಪ ಕುಂದಗೋಳ, ಗಂಗಾಧರ ಹಿರೇಮಠ, ಸಿದ್ಧಲಿಂಗೇಶ ಕೊಟ್ಟೂರಶೆಟ್ಟರ, ನಟರಾಜ ಮೂರಶಿಳ್ಳಿನ ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಎಸ್.ಎಸ್. ಹರ್ಲಾಪುರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

