ಉಪ್ಪಾರ ಸಮುದಾಯ ಪರಿಶಿಷ್ಟ ವರ್ಗಕ್ಕೆ ಸೇರಿಸಿ
ಗಜೇಂದ್ರಗಡ: ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವದರ ಜತೆಗೆ ಸಮಾಜ ಅಭಿವೃದ್ಧಿಗಾಗಿ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಚಿನ್ಮುಲಾದ್ರಿ ಶಿಲಾಪುರಿ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದರು.
ಅವರು ಶುಕ್ರವಾರ ಸಮೀಪದ ಮುಶಿಗೇರಿ ಗ್ರಾಮದಲ್ಲಿ ರಾಜಋಷಿ ಭಗೀರಥರ ಜಯಂತ್ಯುತ್ಸವ ಪ್ರಯುಕ್ತ ನಡೆದ 52 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈವರೆಗೆ ಎಲ್ಲ ಸರ್ಕಾರಗಳು ಉಪ್ಪಾರ ಸಮುದಾಯ ಅಭಿವೃದ್ಧಿಗೆ ಶ್ರಮಿಸದೇ ನಿರ್ಲಕ್ಷಿಸಿವೆ. ಇದರಿಂದ ಸಮುದಾಯ ಜನ ಸರ್ಕಾರದ ಹಲವಾರು ಯೋಜನೆ ಲಾಭ ಪಡೆಯುವಲ್ಲಿ ವಂಚಿತರಾಗಿದ್ದಾರೆ. ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ಉಪ್ಪಾರ ಸಮುದಾಯದ ಉನ್ನತಿಗೆ ಶ್ರಮಿಸಬೇಕು ಎಂದು ಹೇಳಿದರು. ಲೋಕೋಪಯೋಗಿ ಅಧಿಕಾರಿ ಪ್ರಭಾಕರ ಚೀಣಿ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಸ್ಥಿತಿ ತುಂಬಾ ದುಸ್ಥರವಾಗಿದೆ. ಇದನ್ನರಿತ ನಾವು ಸಮಾಜಕ್ಕೆ ಏನನ್ನಾದರೂ ಸೇವೆ ಸಲ್ಲಿಸುವ ದೃಷ್ಟಿಯಿಂದ ಇಂತಹ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು. ಭೀಮನಗಡದ ವೀರಭದ್ರೇಶ್ವರ ಲೀಲಾಮಠ, ಕಲ್ಲಿನಾಥಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಬಿ.ವೈ. ಉಪ್ಪಾರ, ಶಿಲ್ಪಿ ಕೆ. ಶ್ರೀಧರಮೂರ್ತಿ, ಅಡಿವೇಶ ಗುದಿಗೊಪ್ಪ, ಲಕ್ಷ್ಮಣ ಉಪ್ಪಾರ, ಯು. ವೆಂಕೋಬಾ, ಚಂದ್ರಕಲಾ ಚೀಣಿ, ನಾಗಪ್ಪ ಉಪ್ಪಾರ, ಗ್ರಾಪಂ ಅಧ್ಯಕ್ಷೆ ಗೀತಾ ಕುಲಕರ್ಣಿ, ಉಪಾಧ್ಯಕ್ಷ ಚಂದಪ್ಪ ಗುಡದೂರ, ಶ್ರೀಶೈಲಪ್ಪ ಹೆಗ್ಗಣ್ಣವರ, ಕಳಕಪ್ಪ ಮಂತ್ರಿ, ಎಂ.ಜಿ. ಸೋಮನಕಟ್ಟಿ, ಯು.ಟಿ. ಕುಲಕರ್ಣ, ಭೀಮನಗೌಡ ಪೊಲೀಸ್ ಪಾಟೀಲ, ಬಸವರಾಜ ಅಂಗಡಿ, ಈರಣ್ಣಾ ಹೊಸಳ್ಳಿ, ಜ್ಯೋತಿ ಸೂಡಿ, ಮಲ್ಲಪ್ಪ ಚೀಣಿ, ಫಕೀರಪ್ಪ ಉಪ್ಪಾರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

