ಗದಗ

ಅಯ್ಯಾಚಾರ ಕಾರ್ಯಕ್ರಮ ಯಶಸ್ವಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 20
ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ಗದಗ ತಾಲೂಕು ಘಟಕದ ಆಶ್ರಯದಲ್ಲಿ ಸ್ಥಳೀಯ ಕಾಶಿ ಪೀಠದ ಜ. ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆಯ ಕಾಶಿ ವಿಶ್ವನಾಥ ಮಂದಿರದಲ್ಲಿ ಭಾನುವಾರ ಸೂಡಿಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳ ಹಾಗೂ ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಹಿರೇಮಠದ ಬಸವಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಹಲವು ಪಂಡಿತರ ವೈದಿಕತ್ವದಲ್ಲಿ 72 ಜನ ಸ್ಥಳೀಯ ಹಾಗೂ ಪರಸ್ಥಳದ ಜಂಗಮ ಮಕ್ಕಳಿಗೆ ಅಯ್ಯಾಚಾರ ಕಾರ್ಯಕ್ರಮ ಜರುಗಿತು.
ಉಭಯ ಶ್ರೀಗಳು ವಟುಗಳಿಗೆ ಮಂತ್ರೋಪದೇಶ ಮಾಡುವುದರೊಂದಿಗೆ ಆಚಾರ ವಿಚಾರದಿಂದ ನಡೆದುಕೊಳ್ಳಬೇಕು. ಸರ್ವ ವೀರಶೈವರು ಲಿಂಗಧಾರಿಗಳಾಗಬೇಕು. ನಿತ್ಯ ಪಂಚಾಕ್ಷರಿ ಮಹಾಮಂತ್ರ ಪಠಿಸಬೇಕೆಂದು ಉಪದೇಶ ಮಾಡಿದರು.
ಬಸವಯ್ಯ ಶಾಸ್ತ್ರೀಗಳು ಅಯ್ಯಾಚಾರ ದೀಕ್ಷೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಹಿರೇಮಠ, ಬಸವರಾಜ ಗಣಾಚಾರಿ, ಬಸಯ್ಯನವರು, ಬಸವರಾಜ ಶಾಬಾದಿಮಠ, ಚಂದ್ರು ಬಾಳಿಹಳ್ಳಿಮಠ, ಅಂಬರಿಷ ಹಿರೇಮಠ, ಬಾಬಣ್ಣ ಶಾಬಾದಿಮಠ, ಶಿವಕುಮಾರ ಹಿರೇಮಠ, ಪ್ರಶಾಂತ ತಂಬ್ರಳ್ಳಿಮಠ, ಅಪ್ಪು ಭದ್ರಕಾಳಿಮಠ, ಮಲ್ಲಿಕಾರ್ಜುನ ಶಿವಾನಂದಮಠ, ಶಿದ್ರಾಮೇಶ ಹಿರೇಮಠ, ಮುಗಂಡಮಠ, ಕೆಂಬಾವಿಮಠ, ಶರಣಯ್ಯ ಪತ್ರಿಮಠ, ಸಂಗಮ್ಮ ಹಿರೇಮಠ, ಪಿ.ಎ. ಹಿರೇಮಠ, ಶಿವಯ್ಯ ಹಿರೇಮಠ, ಪಂಚಾಕ್ಷರಿ ಹಿರೇಮಠ, ಶಿವಯ್ಯ ಹಿರೇಮಠ, ಲಿಂಬಯ್ಯನಮಠ, ವೀರೇಶ ಕೂಗು, ಮುತ್ತಯ್ಯ ಕಾರಡಗಿಮಠ, ಗುರುಲಿಂಗಯ್ಯ ಹಿರೇಮಠ, ಎಸ್.ಸಿ. ಹಿರೇಮಠ, ಪುರಾಣಿಕಮಠ, ಮಹಾದೇವಯ್ಯ ದನ್ನುರ ಹಿರೇಮಠ, ಕಾಶಯ್ಯ ಹೊಸಮಠ, ನೀಲಕಂಠಯ್ಯ ಹಿರೇಮಠ ಸೇರಿದಂತೆ ಅನೇಕ ಜಂಗಮ ಬಾಂಧವರು ಇದ್ದರು.
ನಗರದ ವೈದಿಕ ಪಂಡಿತರಾದ ಸಂಗಯ್ಯ ಮುತ್ತಿನಪೆಂಡಿಮಠ, ಗುರುಶಿದ್ದಯ್ಯ ಹಿರೇಮಠ, ವೀರೇಶ ಹೊಸಳ್ಳಿಮಠ, ಚನಬಸಯ್ಯ ಹೇಮಗಿರಿಮಠ, ಪಂಚಯ್ಯ ಹಿರೇಮಠ, ಶರಣಯ್ಯ ಯಾವಗಲ್ಲಮಠ, ಮಲ್ಲಿಕಾರ್ಜುನ ಹಿರೇಮಠ ವೈದಿಕತ್ವ ವಹಿಸಿದ್ದರು. ಬೆಟದಯ್ಯ ಹಿರೇಮಠ ನಿರೂಪಿಸಿದರು. ರೇವಯ್ಯ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.