ಗದಗ

ಬದುಕಿಗೆ ಬಣ್ಣ ತುಂಬಿದ ವೃತ್ತಿ ಗೌರವಿಸಿ

Published On :

ಗದಗ: ಬದುಕಿಗೆ ಅನ್ನ, ಆಸರೆ, ನೆಮ್ಮದಿ, ಗೌರವ ತಂದುಕೊಟ್ಟ ವೃತ್ತಿಯನ್ನು ಗೌರವಿಸುವ ಜತೆಗೆ ಆ ವೃತ್ತಿಗೆ ನ್ಯಾಯ ಒದಗಿಸಬೇಕೆಂದು ಕೊಪ್ಪಳದ ಸರ್ಕಾರಿ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ಶಂಕರ ಹೂಗಾರ ಹೇಳಿದರು. ಪ್ರಾಚಾರ್ಯರಾಗಿ ಬಡ್ತಿ ಹೊಂದಿದ ಪ್ರಯುಕ್ತ ಇಲ್ಲಿನ ಸಿದ್ಧಲಿಂಗ ನಗರದ ಸಮಾನ ಮನಸ್ಕ ಸ್ನೇಹಿತರ ಬಳಗದ ಆಶ್ರಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೂಗಾರ, ಸರ್ಕಾರ ನಮಗೆ ಉದ್ಯೋಗ ನೀಡಿ, ನಮ್ಮ ಕುಟುಂಬ ನೆಮ್ಮದಿಯಿಂದ ಬಾಳಲು ಅವಕಾಶ ಕೊಟ್ಟಿದೆ. ಶೈಕ್ಷಣಿಕ ವಲಯದಲ್ಲಿ ಸೇವೆ ಮಾಡುವ ಸದವಕಾಶ ಕಲ್ಪಿಸಿದೆ. ನಮ್ಮ ವೃತ್ತಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ. ನಾವೆಲ್ಲರೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದರೆ ಸುಂದರ ಸಮಾಜ ರೂಪಿಸಲು ಸಾಧ್ಯ ಎಂದರು. ಸಮಾನಮನಸ್ಕ ಸ್ನೇಹಿತರ ಬಳಗದ ಸಂಚಾಲಕ ಡಾ೤ ಬಸವರಾಜ ಧಾರವಾಡ, ಅಧ್ಯಕ್ಷತೆ ವಹಿಸಿದ್ದ ಸ್ನೇಹಿತರ ಬಳದ ಅಧ್ಯಕ್ಷ ಎಸ್.ಟಿ. ಬ್ಯಾಕೋಡ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಯುವರಾಜ ನಾಯಕ, ಎ.ಎಂ. ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎನ್. ಕಂಬಾಳಿಮಠ, ಎಂ.ಐ. ಇಂಗಳಳ್ಳಿ, ಎ.ಬಿ. ಪತ್ತಾರ, ಐ.ಎಸ್. ಜಮಾದಾರ, ಆರ್.ಎಂ. ಅರಹುಣಸಿ, ಎಸ್.ಜಿ. ಭಾವಿಕಟ್ಟಿ, ಕೆ.ಎಸ್. ಬೇಲೇರಿ, ವಿ.ಎಂ. ಮುಳಗುಂದಮಠ, ಎಸ್.ಎಂ. ಮೆಣಸಿನಕಾಯಿ, ಯೋಗೇಶ ಹಿರೇಮಠ, ಪ್ರಭು ಧಾರವಾಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.