ಗದಗ

26ರಂದು ವಿಚಾರ ಸಂಕಿರಣ

Published On :

ಗದಗ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗದಗ ತಾಲೂಕು ಶಾಖೆಯಿಂದ ಬುದ್ದ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ಚಿಂತನೆಗಳು ಕುರಿತು ವಿಚಾರ ಸಂಕಿರಣ ಹಾಗೂ ಸರಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮವು ನಗರದ ಮಾದಾರ ಚೆನ್ನಯ್ಯ ಮಂಗಲ ಮಂಟಪದಲ್ಲಿ ಮೇ 26 ಬೆಳಗ್ಗೆ 11ಗಂಟೆಗೆ ಜರುಗಲಿವೆ. ಸಾನ್ನಿಧ್ಯವನ್ನು ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು. ಉದ್ಘಾಟಕರಾಗಿ ಎಪಿಎಂಸಿ ಅಧ್ಯಕ್ಷ ಡಿ.ಆರ್.ಪಾಟೀಲ ಆಗಮಿಸುವರು. ವಿಚಾರ ಸಂಕಿರಣವನ್ನು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ನಗರಸಭೆ ಸದಸ್ಯ ಕೃಷ್ಣಾ ಪರಾಪುರ ಜ್ಯೋತಿ ಬೆಳಗಿಸುವರು. ಅಧ್ಯಕ್ಷತೆಯನ್ನು ಪಿ.ಎಚ್. ತಳಗೇರಿ ವಹಿಸುವರು. ಅತಿಥಿಗಳಾಗಿ ವಿದ್ಯಾಧರ ದೊಡ್ಡಮನಿ, ಕಮಲಾ ಹಾದಿಮನಿ, ಸುಜಾತಾ ದೊಡ್ಡಮನಿ, ಎಸ್.ಎಚ್. ಅಂಗಡಿ, ಎಲ್.ವಿ. ಮೇಸ್ತಾ, ಎಲ್.ಡಿ.ಚಂದಾವರಿ, ಸದಾನಂದ ಪಿಳ್ಳೆ, ಸುರೇಶ ಕಟ್ಟಿಮನಿ, ಮಂಜುನಾಥ ಪೂಜಾರ, ಜ್ಯೋತಿ ಇರಾಳ, ಖಮರುಲ್ಲಾಸುಲ್ತಾನ್ ನಮಾಜಿ ಸೇರಿದಂತೆ ಅನೇಕರು ಭಾಗವಹಿಸುವರು ಎಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.