ಗದಗ

ಎಚ್ಕೆ ಅಧಿಕಾರ ಸ್ವೀಕಾರ: ಹರ್ಷೋತ್ಸಾಹ

Published On :

ಗದಗ:  ಎಸ್.ಎಂ. ಕೃಷ್ಣಾ ನಗರದ ಒಂದನೇ ಕ್ರಾಸ್ನ ತಾಜದಾರ ಯಂಗ್ ಕಮಿಟಿ ಸದಸ್ಯರು ಹಾಗೂ ಪದಾಧಿಕಾರಿಗಳು ಗದಗ ಶಾಸಕ ಎಚ್.ಕೆ. ಪಾಟೀಲ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಯುಕ್ತ ವಿಜಯೋತ್ಸವ ಆಚರಿಸಿ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಸತ್ತಾರಸಾಬ ಡಂಕೇದ ಮಾತನಾಡಿ, ರಾಜಕಾರಣದಲ್ಲಿ ಕಳಂಕ ರಹಿತ ವ್ಯಕ್ತಿಗಳಾದ ಎಚ್.ಕೆ. ಪಾಟೀಲರಿಗೆ ಸೂಕ್ತವಾದ ಖಾತೆ ಲಭ್ಯವಾಗಿದೆ ಎಂದರು. ಇನ್ನೋರ್ವ ಕಾಂಗ್ರೆಸ್ ಧುರೀಣ ಗಣೇಶ ಕಲಬುರ್ಗಿ, ಮುಂತಾದವರು ಮಾತನಾಡಿದರು. ತಜದಾರ ಯಂಗ್ ಕಮಿಟಿ ಅಧ್ಯಕ್ಷ ಶಬ್ಬೀರ ಶಿರಹಟ್ಟಿ, ಸೋಮನಗೌಡ್ರ ಪಾಟೀಲ, ನಬೀಸಾಬ ವಾಲೀಕಾರ, ತಾಜುದ್ದೀನ ಕಳಸಾಪೂರ, ಕಾಶೀಂ ಧಾರವಾಡ, ನಜೀರಸಾಬ ತಳಕಲ್, ಮೆಹಬೂಬಸಾಬ ಮುಲ್ಲಾ, ಮೆಹಬೂಬಸಾಬ ಕಲೇಗಾರ, ಸಿರಾಜ ಜಮಾಲಖಾನವಾಲ, ಅಲ್ಫತ್ ಮನಿಯಾರ, ಸಲೀಂ ಮಲ್ಲಾನವರ, ಸಲೀಂ ಬೋದ್ಲೆಖಾನ ಮುಂತಾದವರು  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.