ಧರ್ಮ ಮಾರ್ಗದಲ್ಲಿ ನಡೆಯಿರಿ: ಶ್ರೀ
ಕನ್ನಡಪ್ರಭ ವಾರ್ತೆ, ಹೊಳೆಆಲೂರ, ಮೇ 24
ನವದಂಪತಿಗಳು ಸಂಕುಚಿತ ಮನೋಭಾವ ಬಿಟ್ಟು ಹೊಂದಾಣಿಕೆಯಿಂದ ಶಾಂತಿ, ಸಹನೆ ಬೆಳೆಸಿಕೊಂಡು ಆದರ್ಶರಾಗಿ ಬಾಳಬೇಕು. ಧರ್ಮ ಮಾರ್ಗದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಅಭಿನವ ಚಂದ್ರಶೇಖರ ಶ್ರೀ ಹೇಳಿದರು.
ಈಚೆಗೆ ಅವರು ಸ್ಥಳೀಯ ಯಚ್ಚರೇಶ್ವರ ಮಠದ ಆವರಣದಲ್ಲಿ ಯಚ್ಚರೇಶ್ವರ ಸರ್ವಧರ್ಮ ಸಾಮೂಹಿಕ ವಿವಾಹ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನೆಯವರೆಲ್ಲರನ್ನೂ ಪ್ರೀತಿ ಗೌರವದಿಂದ ಕಾಣಬೇಕು.
ಇಂದಿನ ಆಧುನಿಕ ದಿನಮಾನಗಳಲ್ಲಿ ಮಾನವನ ಜೀವನ ಶೈಲಿಯು ಬದಲಾಗುತ್ತಿರುವುದು ನೋವಿನ ಸಂಗತಿ. ಇಂದು ಮನುಷ್ಯನು ದುರಾಸೆಯ ಬೆನ್ನು ಹತ್ತುತ್ತಿದ್ದಾನೆ. ಇಂತಹ ದುರಾಶೆಗೆ ಒಳಗಾಗದೆ, ಆಡಂಬರದ ಜೀವನ ಶೈಲಿಯ ಬೆನ್ನು ಹತ್ತದೇ ಎಲ್ಲ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಇಂತಹ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ಎಂ.ಪಿ. ಪಾಟೀಲ ಮಾತನಾಡಿ, ಈಗಾಗಲೇ ಜಿಲ್ಲೆಯ ಜನರು ಬರಗಾಲದಿಂದ ಬೇಸತ್ತಿದ್ದು, ಇಂತಹ ಸಂದರ್ಭದಲ್ಲಿ ದುಂದುವೆಚ್ಚದ ವಿವಾಹಗಳನ್ನು ಮಾಡುವದು ಕಷ್ಟದ ಕೆಲಸ. ಸಾಲದ ಸೂಲಕ್ಕೆ ಸಿಕ್ಕು ತತ್ತರಿಸುವ ಬದಲು ಇಂತಹ ಜಾಗೃತ ಸ್ಥಳಗಳಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಮದುವೆಯಾಗುವ ಭಾಗ್ಯ ದೊರೆಯುವುದು ನಮ್ಮ ಪುಣ್ಯ. ಇಲ್ಲಿ ಮದುವೆಯಾದ ನವ ವಧು-ವರರು ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಬಾಳಿ ಎಂದು ಹಾರೈಸಿದರು.
ನರಗುಂದ ಶಾಸಕ ಬಿ.ಆರ್. ಯಾವಗಲ್ಲ, ವಿಶ್ವಕರ್ಮ ಏಕದಂಡಗಿಮಠ ಶಾಡಲಗೇರಿ ತೀರ್ಥೇಂದ್ರ ಶ್ರೀಗಳು, ಜಗನ್ನಾಥ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಚ್ಚರೇಶ್ವರ ಶ್ರೀಗಳು, ಸದಾಶಿವ ಮಹಾಂತ ಶ್ರೀಗಳು, ಶಿವಶಾಂತವೀರ ಶ್ರೀಗಳು ಮುಂತಾದವರು ಪಾಲ್ಗೊಂಡಿದ್ದರು. ಅಬ್ಬಿಗೇರಿ ಸಹೋದರಿಯರು ಪ್ರಾರ್ಥಿಸಿದರು. ಕೆ.ಸಿ.ಪಾಟೀಲ ಸ್ವಾಗತಿಸಿದರು. ಪಾಂಡುರಂಗ ಪತ್ತಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

