ಗದಗ

ಆಸೆಯೇ ದುಃಖಕ್ಕೆ ಮೂಲ: ಹಾದಿಮನಿ

Published On :

ಗದಗ: ಆಸೆಯೇ ದುಃಖಕ್ಕೆ ಮೂಲ ಕಾರಣ ಎನ್ನುವ ಹಿರಿಯರ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಹೇಳಿದರು.
ಅವರು ಶನಿವಾರ ನಗರದ 21ನೇ ವಾರ್ಡಿನಲ್ಲಿರುವ ಸಂಜಯಗಾಂದಿ ಕುಷ್ಟರೋಗ ಕಾಲೋನಿಗಳ ರಾಜರಾಜೇಶ್ವರಿ ಮಹಿಳಾ ಸಂಘದ ಆಶ್ರಯದಲ್ಲಿ ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಮನದಲ್ಲಿ ಬುದ್ಧನ ತತ್ವಗಳು ಸದಾ ಇರಲಿ. ನಿಮ್ಮ ಮಕ್ಕಳ ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಆದರ್ಶಗಳನ್ನು ತಿಳಿಸಬೇಕು. ಇದರಿಂದ ಮಕ್ಕಳು ಉತ್ತಮ ನೀತಿವಂತ, ಚಾರಿತ್ರ್ಯವಂತರಾಗಿ ಭವ್ಯ ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ಚಿಂತನೆ ನಡೆಸಬೇಕಾದ ಅನಿವಾರ್ಯ ಇಂದು ಎದುರಾಗಿದೆ ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಉಪನ್ಯಾಸ ನೀಡಿ, ಬುದ್ಧನು ಸಮಾಜದ ಮೂರು ವಿಶೇಷ (ಘನಕ) ಸಮಸ್ಯೆಗಳಾದ ಕುಷ್ಟರೋಗ, ಬಿಕ್ಷುಕ, ಶವ ಸಂಸ್ಕಾರ ಇವುಗಳಿಂದ ಮನಸ್ಸಿನ ಮೇಲೆ ಪರಿಣಾಮವಾಗಿ ತನ್ನ ವೈವಾಹಿಕ ಜೀವನದ ಜತೆಗೆ ವಿಲಾಸಿ ಜೀವನವನ್ನು ತ್ಯಜಿಸಿ ಬುದ್ಧನಾಗಿ ಲೋಕ ಕಲ್ಯಾಣಕ್ಕಾಗಿ ತನ್ನನ್ನೇ ತಾನು ಸಮರ್ಪಿಸಿಕೊಂಡನು. ಅಂತಹವರ ನೆನಪಿಗಾಗಿ ಇಂದು ಕುಷ್ಟರೋಗ ಕಾಲೋನಿಯಲ್ಲಿ ಈ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಅತಿಥಿಗಳಾಗಿ ಆಗಮಿಸಿದ ಶಿವಲೀಲಾ ಅಕ್ಕಿ ಮಾತನಾಡಿ, ಕುಷ್ಟರೋಗ ಕಾಲೋನಿಗೆ ನಗರಸಭೆಯ ಸದಸ್ಯರುಗಳು ತಮ್ಮ ಅನುದಾನದಲ್ಲಿ ಹೆಚ್ಚಿನ ರೀತಿಯಲ್ಲಿ ಕಾಲೋನಿಯ ಅಭಿವೃದ್ಧಿ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯ ಎಂದರು. ನಗರಸಭಾ ಸದಸ್ಯೆ ಮೇಘಾ ಮುದಗಲ್, ರುದ್ರಮ್ಮ ಕರಕಲ್ಲಮಟ್ಟಿ ಮಾತನಾಡಿ, ಹುಟ್ಟಿನಿಂದ ಯಾರು ಸಣ್ಣವರಲ್ಲ ಮತ್ತು ದೊಡ್ಡವರಲ್ಲ. ಬುದ್ಧನ ದಿನದಂದು ನೀವು ಸುಸಂಸ್ಕೃತರಾಗಿ ಬಾಳಿ ಬದುಕಿರಿ, ಯುವಕರು ದುಶ್ಚಟಗಳಿಂದ ದೂರವಾಗಬೇಕು ಎಂದರು. ಯಲ್ಲಪ್ಪ ರಾಮಗಿರಿ, ಶರೀಫ್ ಬಿಳೆಯಲಿ, ಪರಶುರಾಮ ಕಾಳೆ, ಅನೀಲ ಕಾಳೆ, ಪ್ರಕಾಶ ಗುಜರಾತಿ, ನಾಗರಾಜ ಜಾಲಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಾರ್ತಾಂಡಪ್ಪ ಹಾದಿಮನಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.