ಧಾರ್ಮಿಕ ಶ್ರದ್ಧಾ ಕೇಂದ್ರಗಳು ನೆಮ್ಮದಿಯ ತಾಣಗಳಾಗಲಿ
ಗಜೇಂದ್ರಗಡ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ನೆಮ್ಮದಿಯ ತಾಣಗಳಾಗಿ ಭಾವೈಕ್ಯತೆಯ ಉಸಿರಾದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಟಕ್ಕೇದ ಮಸೀದಿಯ ಮೆಹಬೂಬ ಅಲಿಷಾ ಪೀರಾ ಕರೆ ನೀಡಿದರು.
ಅವರು ಭಾನುವಾರ ಸ್ಥಳೀಯ ಟಕ್ಕೇದ ಮಸೀದಿಯ ಉರೂಸಿನ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಭರತ ಖಂಡದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಪುಟಗಳನ್ನು ಅವಲೋಕಿಸಿದಾಗ ಭಾರತ ಸರ್ವ ಧರ್ಮಗಳ ತ್ರಿವೇಣಿ ಸಂಗಮವೇ ನೆಲೆಸಿ ಇಲ್ಲಿ ಅನೇಕ ಸಂತ, ಸೂಫಿ ಶರಣರು ಭಾತೃತ್ವದ ಭಾಷ್ಯ ಬರೆದಿದ್ದಾರೆ. ಅಂತಹ ಸೂಫಿ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದಾಗ ಆಚರಣೆಗಳು ಸಾರ್ಥಕಗೊಳ್ಳುತ್ತವೆ. ಈ ದೆಸೆಯಲ್ಲಿ ಧಾರ್ಮಿಕ ಕೇಂದ್ರಗಳು ಕೇವಲ ಕಾಟಾಚಾರದ ಕೇಂದ್ರಗಳಾಗದೆ ಸಮಾಜದ ಐಕ್ಯತೆಗಾಗಿ ಶ್ರಮಿಸುವ ಶ್ರದ್ಧಾ ಕೇಂದ್ರಗಳಾಗಿ ಸಮಾಜದ ಮೌಢ್ಯ ತೊಲಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಅವಶ್ಯ ಎಂದರು.
ಪುರಸಭೆಯ ಮಾಜಿ ಸದಸ್ಯ ಎಂ.ಎಸ್. ಮಕಾನದಾರ ಹಾಗೂ ಸಾಹಿತಿ ಎ.ಎಸ್. ಮಕಾನದಾರ ಆಚರಣೆ ಕುರಿತು ಉಪನ್ಯಾಸ ನೀಡಿದರು. ಉರುಸಿನ ಅಂಗವಾಗಿ ತಟಗಾರ ಮಸೀದಿಯಿಂದ ಅಸಂಖ್ಯಾತ ಭಕ್ತರು ಗಂಧದ ಮೆರವಣಿಗೆ ಮೂಲಕ ಸಂಚರಿಸಿ ದರ್ಗಾಕ್ಕೆ ತೆರಳಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಳಿಕ ಸಹಸ್ರಾರು ಭಕ್ತರು ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.
ಮಾಬುಸಾಬ ಯರಗುಡಿ, ಪ್ರಭು ಚವಡಿ, ವಿ.ಕೆ. ಸರಗಣಾಚಾರಿ, ಎಂ.ಎಸ್. ಮಕಾನದಾರ, ಭಾಷಾಸಾಬ ನರೇಗಲ್, ಮುಕ್ಷಾವಲಿ ಕಡ್ಲಿಮಟ್ಟಿ, ಬಸಯ್ಯ ಗೊಂಗಡಶೆಟ್ಟಿಮಠ, ಕಳಕಪ್ಪ ಹಡಪದ, ಮಕ್ತುಂಸಾಬ ಮುಲ್ಲಾ, ಮಾಸುಮಲಿ ಮದಗಾರ, ಅಲ್ಲಾಭಕ್ಷ ಆನಿ, ಗುರುಸಿದ್ದಪ್ಪ ದೇವರಕೊಂಡ, ಸುಭಾನಸಾಬ ಹವಾಲ್ದಾರ, ಮಹಮ್ಮದಅಲಿ ತಳಗಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

