ಗದಗ

ಸುದ್ದಿ ಸಂಕ್ಷೇಪ

Published On :

ಹೊನಿಗ್ಯಾ ದಾಳಿ: ದೇವಸ್ಥಾನದ ಗೂಳಿ ಸಾವು
ಮುಂಡರಗಿ:
ಸಿಂಗಟಾಲೂರು ಕ್ಷೇತ್ರದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಹರಿದಿರುವ ತುಂಗಭದ್ರಾ ನದಿಯ ದಂಡೆಯಲ್ಲಿ ಮಲಗಿರುವ ಗೂಳಿ (ಹೋರಿ)ಯನ್ನು ಚಿರತೆ ಜಾತಿಗೆ ಸೇರಿದ ಹೊನಿಗ್ಯಾ ದಾಳಿ ಮಾಡಿ ಕೊಂದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಹೊನಿಗ್ಯಾ ಗೂಳಿಯ ಮೇಲೆ ದಾಳಿ ಮಾಡಿದ ಘಟನೆಯಿಂದ ರೈತರು ದನಕರಗಳನ್ನು ಹೊರಗೆ ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಕಪ್ಪತಗುಡ್ಡ ಅರಣ್ಯ ಭಾಗದಲ್ಲಿ ಬೇಸಿಗೆಯಲ್ಲಿ ಪ್ರಾಣಿಗಳಿಗೆ ಕುಡಿವ ನೀರಿನ ವ್ಯವಸ್ಥೆಯಿಲ್ಲದ್ದರಿಂದ ನೀರಿಗಾಗಿ ಅಲ್ಲಿಯ ಪ್ರಾಣಿಗಳು ಗ್ರಾಮಗಳತ್ತ ದಾರಿ ಹಿಡಿಯುತ್ತಿವೆ. ಕಪ್ಪತಗುಡ್ಡದಲ್ಲಿ ಪ್ರಾಣಿಗಳಿಗೆ ಬೇಕಾಗುವ ವ್ಯವಸ್ಥೆ ಮಾಡಿ ಅವುಗಳ ಗ್ರಾಮಕ್ಕೆ ಬರದಂತೆ ಅರಣ್ಯ ಇಲಾಖೆ ನಿಗಾವಹಿಸಬೇಕು ಎಂದು ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಒತ್ತಾಯಿಸಿದ್ದಾರೆ.
ರವಿ ಚಿಕ್ಕರಡ್ಡಿ ಆಯ್ಕೆ
ಹೊಳೆಆಲೂರು: 2013-14ನೇ ಸಾಲಿನ ರೋಣ ತಾಲೂಕಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಹೊಳೆಆಲೂರ ಸಮೀಪದ ಸೋಮನಕಟ್ಟಿ ಗ್ರಾಮದ ರವಿ ಚಿಕ್ಕರಡ್ಡಿ ಆಯ್ಕೆಯಾಗಿದ್ದಾನೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ರವಿಯ ಸಾಧನೆಗೆ ಶಾಲಾ ಪ್ರಧಾನ ಗುರುಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕು ರಚನೆ ಕೈಬಿಟ್ಟರೆ ಉಗ್ರ ಹೋರಾಟ: ಸಜ್ಜನ
ಗಜೇಂದ್ರಗಡ: ನೂತನ ತಾಲೂಕಗಳ ರಚನೆ ಪ್ರಕ್ರಿಯೆ ಕೈ ಬಿಟ್ಟರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ. ಸಜ್ಜನ ಎಚ್ಚರಿಕೆ ನೀಡಿದ್ದಾರೆ. ಅವರು ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಸರ್ಕಾರ ಬಜೆಟ್‌ನಲ್ಲಿ 43 ಹೊಸ ತಾಲೂಕುಗಳ ಘೋಷಣಾ ಪಟ್ಟಿಯಲ್ಲಿ ಗಜೇಂದ್ರಗಡ ಸೇರಿಸಲಾಗಿತ್ತು. ಆದರೆ ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಗಜೇಂದ್ರಗಡ ತಾಲೂಕು ರಚನೆಗೆ ಸರ್ಕಾರ ಉದಾಸೀನ ತೋರಿದರೆ ಬೀದಿಗೆ ಇಳಿದು ಹೋರಾಟ ನಡೆಸುತ್ತೇವೆ ಎಂದರು. ಎಚ್.ಎಸ್. ಸೋಂಪುರ, ಶರಣಪ್ಪ ರೇವಡಿ, ಅಂಬರೀಶ ಬಳಿಗೇರ, ಸಂಗಪ್ಪ ಯಲಬುಣಚಿ ಮುಂತಾದವರು ಉಪಸ್ಥಿತರಿದ್ದರು.
ಪ್ರವೇಶ ಪ್ರಕ್ರಿಯೆ ಆರಂಭ
ಬೆಟಗೇರಿ: ಸ್ಥಳೀಯ ಹುಯಿಲಗೋಳ ರಸ್ತೆಯಲ್ಲಿರುವ ಮಹಾರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪಪೂ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರವೇಶಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಬಂದು ಪ್ರವೇಶ ಪಡೆಯುವಂತೆ ಪ್ರಾ. ವೈ.ಆರ್. ಹಿರೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.