ಸುದ್ದಿ ಸಂಕ್ಷೇಪ
ಇಂದಿನಿಂದ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ
ಗಜೇಂದ್ರಗಡ: ಸ್ಥಳೀಯ ಕುಷ್ಟಗಿ ರಸ್ತೆಯ ಡಾ. ಜೀರೆಯವರ ಪೆಟ್ರೋಲ್ ಬಂಕ್ ಬಳಿ ಹೊಸದಾಗಿ ನಿರ್ಮಿಸಿರುವ ಶಿರಡಿ ಸಾಯಿರಾಮ ದೇಗುಲದ ಸಾಯಿರಾಮ, ಈಶ್ವರ, ಸಾಯಿ ಗಣಪತಿ, ಸಾಯಿ ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಮೇ 27ರಿಂದ 29ರ ವರೆಗೆ ಜರುಗಲಿದೆ. ಮೇ 27ರಂದು ಬೆಳಗ್ಗೆ 7ಕ್ಕೆ ಸಾಯಿರಾಮ ಟ್ರಸ್ಟ್ ವತಿಯಿಂದ ಸಾಯಿರಾಮ ಮಂದಿರದಿಂದ ಮೂರ್ತಿಗಳ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಜನತಾ ಪ್ಲಾಟ್ ಜೋಡುರಸ್ತೆ, ಹಿರೇಬಜಾರ, ಕೊಳ್ಳಿಯವರ ಕ್ರಾಸ್, ಕಂಬಾರಗಲ್ಲಿ, ಮೈಸೂರು ಮಠದಿಂದ ಮರಳಿ ಸ್ವಸ್ಥಳಕ್ಕೆ ಬರಲಿದೆ. ಸೂಡಿ ಗಜಾನನ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ಜಿ.ಆರ್. ಜೋಶಿ ಧಾರ್ಮಿಕ ಕಾರ್ಯಕ್ರಮ ನೇತೃತ್ವ ವಹಿಸಲಿದ್ದಾರೆ. ಮೇ 28ರಂದು ಬೆಳಗ್ಗೆ 6ಕ್ಕೆ ಧ್ವಜಾರೋಹಣ, ಗಂಗಾಪೂಜೆ, ಗೋಪೂಜೆ, ಪುಣ್ಯಾಹವಾಚನ, ಋತ್ವಿಗವರುಣ, ಮಧುಪರ್ಕ ಪೂಜಾ, ಪ್ರತಿಷ್ಠಾಪನಾ ಮೂರ್ತಿಗಳ ಅವಾಹನ ಪೂಜಾ, ಜಲಧಿವಾಸ, ಧಾನ್ಯಾಧಿವಾಸ, ಕ್ಷಿರಾಧಿವಾಸ, ವಸ್ತ್ರಾಧಿವಾಸ, ಶಯ್ಯಾಧಿವಾಸ ಮತ್ತು ನವಗ್ರಹಾಧಿ ಜಪ, ಮಧ್ಯಾಹ್ನ 2.30ಕ್ಕೆ ಸ್ಥಾಪಿತ ದೇವತಾ ಮಹಾಮಂಗಳಾರತಿ, ಮಹಾನೈವಿದ್ಯ, ಸಂಜೆ ಉದಕ ಶಾಂತಿ ಹಾಗೂ ಸಂಗೀತ ಸೇವೆ ನಡೆಯಲಿದೆ. ಮೇ 29ರಂದು ಬೆಳಗ್ಗೆ 5ಕ್ಕೆ ಗರ್ಭಗುಡಿಯಲ್ಲಿ ಕುಂಭ, ಗೋಪ್ರವೇಶ, ವಾಸ್ತು, ಪ್ರತಿಷ್ಠಾಂಗಾ ಹೋಮ, 9.55ಕ್ಕೆ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ, ಹೋಮ ಪೂರ್ಣಾಹುತಿ, ಉತ್ತರಾಂಗ ಪೂಜಾ ಮಹಾನೈವೇದ್ಯೆ, ಮಹಾಮಂಗಳಾರತಿ ನೆರವೇರಲಿದೆ ಎಂದು ಸಾಯಿರಾಮ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಇಂದು ಜೈಲ್ ಭರೋ
ಗದಗ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜನವಿರೋಧಿಗಳಾದ ಬೆಲೆ ಏರಿಕೆ, ಮಿತಿಮೀರಿದ ಭ್ರಷ್ಟಾಚಾರ, ರಾಷ್ಟ್ರೀಯ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ಧೋರಣೆಯ ವಿರುದ್ಧ ರಾಜ್ಯ ಬಿಜೆಪಿ ಕರೆಯ ಮೇರೆಗೆ ಜೈಲ್ ಭರೋ ಚಳವಳಿ ಮೇ 27ರ ಬೆಳಗ್ಗೆ 10ಕ್ಕೆ ನಗರದ ಗಾಂಧಿ ವೃತ್ತದಲ್ಲಿ ಜರುಗಲಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ಹಾಗೂ ಬಿಜೆಪಿಯ ಎಲ್ಲ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು ಎಂದು ಶಹರ ಪ್ರಧಾನ ಕಾರ್ಯದರ್ಶಿ ಬಸವರಾಜ ಶೀರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ತರಬೇತಿ
ಗದಗ: ಎಂ.ಎಸ್. ಪಾಟೀಲ ಗ್ರಾಮೀಣಾಭಿವೃದ್ಧಿ ಮತ್ತು ಶಹರ ಸ್ವಯಂ ಉದ್ಯೋಗ ತರಬೇತಿ ಮತ್ತು ವಿವಿಧೋದ್ದೇಶ ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಉಚಿತ ತರಬೇತಿಯನ್ನು ಜೂ.5ರಿಂದ ಪ್ರಾರಂಭಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಮೇ 30 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ 9164280147, 8762893820 ಇಲ್ಲಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

