ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಶ್ರೀಗಳು
ಕನ್ನಡಪ್ರಭ ವಾರ್ತೆ, ನರಗುಂದ, ಮೇ 26
ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಅದೇ ದೇಶದ ಸಂಪತ್ತು. ಹಾಗೆಯೇ ಮನುಷ್ಯ ಆರೋಗ್ಯವಾಗಿರಬೇಕೆಂದರೆ ಯೋಗವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಈಚೆಗೆ ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಆವರಣದಲ್ಲಿ ಶಿರೋಳ ಗ್ರಾಮದ ಯೋಗ ಶಿಕ್ಷಕ ಬಸವರಾಜ ಕೊಣ್ಣೂರು, ಉಮೇಶ ಕಬನೂರ, ಬಸವರಾಜ ನಾಗಲೋಟಮಠವರು ವಿಯೆಟ್ನಾಂ ದೇಶಕ್ಕೆ ತರಬೇತಿ ನೀಡಲು ಹೋಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಸನ್ಮಾನಿಸಿ ಮಾತನಾಡಿದರು.
ಶಿರೋಳ ಗ್ರಾಮದ ಪರ್ವತಮರಿ ದೇವರ ಸ್ಮಾರಕ ಯೋಗ ಪಾಠ ಶಾಲೆಯ ಯೋಗ ಶಾಲೆಯಲ್ಲಿ ಯೋಗ ಕಲಿತು ಬೇರೆ ದೇಶದ ಜನತೆಗೆ ಯೋಗ ಕಲಿಸಲು ಹೋಗುತ್ತಿರುವುದು ಭಾರತ ದೇಶಕ್ಕೆ ಹೆಮ್ಮೆಯ ಸಂಗತಿ. ನಮ್ಮ ದೇಶದ ಸನಾತನ ಪರಂಪರೆಯಲ್ಲಿ ಯೋಗಕ್ಕೆ ತನ್ನದೆ ಆದ ಪರಂಪರೆಯಿದೆ.
ಪತಂಜಲಿ ಮುನಿಗಳು ಶ್ರೀಕಾರ ಬರೆದರು. ಅಂದಿನಿಂದ ಇಂದಿನ ವರೆಗೆ ಯೋಗವನ್ನು ಬೆಳೆಸಿಕೊಂಡು ಬಂದದ್ದುಂಟು. ಋಷಿ-ಮುನಿಗಳು ಯೋಗದ ಮೂಲಕ ಸಾವಿರಾರು ವರ್ಷಗಳ ಕಾಲ ಬದುಕಿ ಬಾಳಿದ ಇತಿಹಾಸ ಈ ನೆಲದಲ್ಲಿವೆ. ಯೋಗಾಸನ ಮಾಡುವುದರಿಂದ ನಮ್ಮ ಮನಸ್ಸು ದೇಹ, ಏಕಾಗ್ರತೆ ಸ್ಥಿತಿಗೆ ಬರುತ್ತದೆ. ನಮ್ಮ ನರ ನಾಡಿಗಳು ಜಾಗೃತವಾಗಿ ಮಾನವರ ಬದುಕು ಪರಿಶುದ್ಧವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೀರಣ್ಣ ಕವಡಿಮಟ್ಟಿ, ಶರಣಯ್ಯ ಹಿರೇಮಠ, ಮಹಾಂತೇಶ ಬಾಳಿಕಾಯಿ, ಶಿವು ಕೊಣ್ಣೂರು, ಮಲ್ಲಿಕಾರ್ಜುನ ಕೋಡಬಳಿ, ಸಂಗಮೇಶ ಸಣ್ಣತಮ್ಮನವರ, ವೀಣಾ ಗಡ್ಡಿ, ವೀರಣ್ಣ ನಾಗಲೋಟಮಠ, ಬಸನಗೌಡ ಪಾಟೀಲ, ರಾಮಣ್ಣ ಅಪೋಜಿ, ರಾಜು ಹಡಗಲಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

