ಬಾಲಕಿಗೆ ರು. 10 ಸಾವಿರ ನೆರವು
ಗದಗ: ರಸ್ತೆ ಅಪಘಾತದಲ್ಲಿ ಬಲಗೈಯ 3 ಬೆರಳುಗಳನ್ನು ಕಳೆದುಕೊಂಡಿರುವ 5 ವರ್ಷದ ಹೆಣ್ಣು ಮಗುವಿನ ವೈದ್ಯಕೀಯ ಉಪಚಾರಕ್ಕಾಗಿ ಸಾಮಾಜಿಕ ಸಂಘಟನೆ ರು. 10 ಸಾವಿರ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಈಚೆಗೆ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡ 5 ವರ್ಷದ ಬಾಲಕಿಗೆ ಅಪಘಾತದಲ್ಲಿ ಬಲಗೈಯ 3 ಬೆರಳೂ ಕತ್ತರಿಸಿದ್ದವು. ಸದ್ಯ ಬಾಲಕಿಗೆ ವೈದ್ಯಕೀಯ ಉಪಚಾರ ನಡೆದಿದೆ. ಗದುಗಿನ ತಾಹಿದ್ ಆ್ಯಂಡ್ ಸಲಫಿ ಅಸೋಶಿಯೇಶನ್ ಜಮಾತೆ ಅಹಲೆ ಹದೀಸ್ನ ಪದಾಧಿಕಾರಿಗಳು ಗದುಗಿನ ಎಸ್.ಎಂ. ಕೃಷ್ಣ ಕಾಲೋನಿಯಲ್ಲಿರುವ ಚಾಂದಬಿ ಮಿರಾಖಾನ್ ಅವರ ನಿವಾಸಕ್ಕೆ ತೆರಳಿ ಗಾಯಗೊಂಡಿರುವ ಬಿಸ್ಮಿಲ್ಲಾ ಅವಳ ಆರೋಗ್ಯವನ್ನು ವಿಚಾರಿಸಿ ಕುಟುಂಬ ವರ್ಗಕ್ಕೆ ಸಮಾಧಾನ ಹೇಳಿ ರು. 10 ಸಾವಿರ ವೈದ್ಯಕೀಯ ಉಪಚಾರಕ್ಕಾಗಿ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶಿರಾಜುದ್ದೀನ್ ವಾಚ್ಮೇಕರ್, ಧರ್ಮಗುರು ಸೈಯದ್ ಅತ್ತಾವುರ್ ರೆಹಮಾನ್, ಕಾರ್ಯದರ್ಶಿ ಮಹ್ಮದ್ಇಸಾರ ಬೊದ್ಲೇಖಾನ್, ಟ್ರಸ್ಟ್ನ ಸದಸ್ಯ ರಮಜಾನಸಾಬ ಅಣ್ಣಿಗೇರಿ, ತಾಜ್ಅಹ್ಮದ ಮುಳಗುಂದ, ಅಲ್ಲಾಭಕ್ಷ ಅಣ್ಣಿಗೇರಿ, ಜೈನುಲ್ ಅಬಿದಿನ್ ಖಾನಸಾಬ, ಶೌಕತ್ ಯರಂಡಿವಾಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಸ್ಪೀಟ್: ನಾಲ್ವರ ಬಂಧನ
ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಹಿಳಾ ಹಾಸ್ಟೆಲ್ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದುಂದೂರು ಗ್ರಾಮದ ನಿವಾಸಿಗಳಾದ ಬಸವರಾಜ ಬಡಿಗೇರ, ಹನುಮಪ್ಪ ಕಂಬಳಿ, ಬಸವರಾಜ ಇಬ್ರಾಹಿಂಪುರ ಹಾಗೂ ನೀರಲಗಿ ಗ್ರಾಮದ ರಮೇಶ ಜಕ್ಕನ್ನವರ ಬಂಧಿತರು. ಬಂಧಿತರಿಂದ ರು. 3220 ವಶಪಡಿಸಿಕೊಳ್ಳಲಾಗಿದ್ದು, ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

