ಕಸಾಪ ನಿರ್ಧಾರಕ್ಕೆ ವಿರೋಧ
ಗದಗ: ಗದಗ ಜಿಲ್ಲಾ ಕಸಾಪ ಅನುದಾನದ ನೆಪ ಒಡ್ಡಿ ಒಂದೇ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನವನ್ನು ಮಾಡಿ ಮುಗಿಸಲು ಹೊರಟಿರುವ ಕ್ರಮಕ್ಕೆ ಚುಟುಕ ಸಾಹಿತಿ ಡಿ.ವಿ. ಬಡಿಗೇರ ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಸಾಹಿತಿಗಳು ಹಾಗೂ ಗಣ್ಯರ ಪೂರ್ವಭಾವಿ ಸಭೆ ಕರೆದು ಈ ಬಗ್ಗೆ ಚರ್ಚಿಸುವ ಸೌಜನ್ಯ ಕೂಡ ಮಾಡದೇ ಕಸಾಪ ಪದಾಧಿಕಾರಿಗಳು ತಮ್ಮ ಮನಬಂದಂತೆ ವರ್ತಿಸುತ್ತಿರುವುದು ಖಂಡನೀಯ ಹಾಗೂ ಹಲವಾರು ಸಂಶಯಗಳಿಗೆ ಆಸ್ಪದ ನೀಡಿದೆ. ಯಾವುದೇ ಸಮ್ಮೇಳನ ಯಶಸ್ವಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಯಲು ಪೂರ್ವಭಾವಿ ತಯಾರಿ ಅತಿ ಅವಶ್ಯ. ಕನಿಷ್ಠ 3 ತಿಂಗಳ ಅವಧಿಯಾದರೂ ಬೇಕು. ಆದರೆ, ಜಿಲ್ಲಾ ಕಸಾಪ ಗದಗ ಜಿಲ್ಲೆಯಲ್ಲಿ 2 ಸಮ್ಮೇಳನಗಳನ್ನು ಒಂದೇ ತಿಂಗಳಲ್ಲಿ ಕೇವಲ 5 ದಿನಗಳ ಅಂತರದಲ್ಲಿ ಮಾಡಹೊರಟಿರುವುದು ಕಾಟಾಚಾರದ ಕ್ರಮವಾಗಿದೆ ಎಂದು ಟೀಕಿಸಿದರು. ಸರ್ಕಾರವು ಜಿಲ್ಲಾ ಸಮ್ಮೇಳನಕ್ಕೆ ರು. 4 ಲಕ್ಷ ಹಾಗೂ ತಾಲೂಕು ಸಮ್ಮೇಳನಕ್ಕೆ ರು. 1ಲಕ್ಷ ಅನುದಾನವನ್ನು ನೀಡುತ್ತಿದೆ. ಈ ಅನುದಾನದ ಪ್ರಸ್ತುತ ವರ್ಷದ ಅವಧಿ ಜೂನ್ 15ಕ್ಕೆ ಮುಕ್ತಾಯವಾಗುವುದೆಂಬ ಒಂದೇ ಕಾರಣಕ್ಕೆ ಅವಸರದಲ್ಲಿ ಈ ಸಮ್ಮೇಳನ ಹಮ್ಮಿಕೊಂಡಿರುವುದು ಸೂಕ್ತವಲ್ಲ. ಕಾರಣ ಕಸಾಪ ತನ್ನ ಆತುರದ ನಿರ್ಧಾರ ಹಿಂಪಡೆಯಲು ಹಾಗೂ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಅರ್ಥಪೂರ್ಣ ಸಮ್ಮೇಳನ ನಡೆಸಲು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

