ಗದಗ

ಮದ್ಯದ ಅಂಗಡಿ ನಿರ್ಮಾಣ: ಪ್ರತಿಭಟನೆ

Published On :

ಗದಗ: ಜನವಸತಿ ಪ್ರದೇಶದಲ್ಲಿ ಮದ್ಯದ ಅಂಗಡಿ ಲೈಸೆನ್ಸ್ ನೀಡುವುದನ್ನು ವಿರೋಧಿಸಿ ನಗರದ ಗಂಗಾಪುರ ಪೇಟೆಯ ಕುಂಬಾರ ಓಣಿಯ ನಿವಾಸಿಗಳು ಶುಕ್ರವಾರ ಬಾರ್ ಆಂಡ್ ರೆಸ್ಟೋರೆಂಟ್ ಮುಂದೆ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಂಬಾರ ಓಣಿಯ ಸಿ.ಟಿ.ಎಸ್. ಸಂಖ್ಯೆ 759,18ರಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಸಿ.ಎಲ್.9 (ಬಾರ್ ಆಂಡ್ ರೆಸ್ಟೋರೆಂಟ್) ಈಗಾಗಲೇ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದು, ಇಲ್ಲಿ  ಅತ್ಯಂತ ಬಡವರು, ರೈತರು ವಾಸಿಸುವಂತಹ ಜನವಸತಿ ಪ್ರದೇಶ ಇದಾಗಿದ್ದು, ಈ ಪ್ರದೇಶದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸುವುದರಿಂದ ಈ ಭಾಗದ ಜನರು ನೆಮ್ಮದಿಯ ಬದುಕಿಗೆ ಅನಾನುಕೂಲತೆ ಉಂಟಾಗಲಿದೆ. ಕಾರಣ ಈ ಪ್ರದೇಶದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ನಾಗರಿಕರ ವಿರೋಧವಿದೆ ಎನ್ನುವುದನ್ನು ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ವೀರಭದ್ರಪ್ಪ ಕೋತಂಬ್ರಿ, ಅಂದಪ್ಪ ಮುದೇನಗುಡಿ, ಫಕೀರಪ್ಪ ಲತವಾರ, ಮೌಲಾಸಾಬ ಮುಳಗುಂದ, ಈರಣ್ಣ ಕುಂಬಾರ, ಅನ್ನಪ್ಪ ತೇಜುಗೌಡ್ರ, ಬಸವ್ವ ಯಲಬುರ್ಗಿ, ಮಹಾದೇವಿ ಮಳೇಗಾರ, ಯಮನವ್ವ ಭಜಂತ್ರಿ, ಬಸವ್ವ ಕುಂಬಾರ, ಪಾರವ್ವ ಮಡಿವಾಳರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.