ಗದಗ

ಉಪನೋಂದಣಿ ಕಾರ್ಯಾಲಯ ಸ್ಥಳಾಂತರಿಸಬೇಡಿ: ಮನವಿ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 1
ತಾಲೂಕಿನ ಹಿರಿಯ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ ನಗರದ ಮಧ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಭಾಗದ ಎಲ್ಲ ವರ್ಗದ ಜನರಿಗೆ ತುಂಬಾ ಅನುಕೂಲವಾಗಿದೆ. ಇದನ್ನು ಸ್ಥಳಾಂತರಿಸದಂತೆ ಈಚೆಗೆ ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ನಿವಾಸಿ ಮಹೇಶ ಕರಿಬಿಷ್ಠಿ ಮಾತನಾಡಿ, ಹಿರಿಯ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ ಹಲವು ವರ್ಷಗಳಿಂದ ಈ ಸ್ಥಳದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಇದರಿಂದ ರೈತಾಪಿ ಜನರಿಗೆ ತುಂಬಾ ಅನುಕೂಲವಾಗಿದೆ.
ಖರೀದಿ ಪತ್ರ ವಗೈರೆ ದಸ್ತಾವೇಜುಗಳನ್ನು ಸಿದ್ಧಪಡಿಸಲು, ಸಕಾಲದಲ್ಲಿ ಉತಾರಗಳನ್ನು ಪಡೆಯುವಲ್ಲಿ ಭೂ ದಾಖಲೆಗಳಿಂದ ನಕ್ಷೆ ಪಡೆಯುವಲ್ಲಿ ಎಲ್ಲ ಅನುಕೂಲಕರವಾದ ಮತ್ತು ಹಣಕಾಸಿನ ವ್ಯವಹಾರದಲ್ಲಿ ಸೂಕ್ತ ಸ್ಥಳವಾಗಿದೆ. ಗ್ರಾಮೀಣ ಪೊಲೀಸ್ ಠಾಣೆ ಇರುವುದರಿಂದ ಭದ್ರತೆಗೆ ಅನುಕೂಲವಾಗುತ್ತದೆ.
ಸದ್ಯ ಹಿರಿಯ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ ಸ್ಥಳಾಂತರ ಮಾಡುವುದಾಗಿ ತಿಳಿದು ಬಂದಿದೆ. ಇದರಿಂದ ಸಾರ್ವಜನಿಕರಿಗ ತೊಂದರೆಯಾಗುತ್ತದೆ.
ಸಾರ್ವಜನಿಕರಿಗೆ ಹಣಕಾಸಿನ ವ್ಯವಹಾರದಲ್ಲಿ ಸೂಕ್ತ ಭದ್ರತೆ ಇಲ್ಲದಂತಾಗುತ್ತದೆ. ಸ್ಥಳಾಂತರವಾದ ಪ್ರದೇಶದಲ್ಲಿ ದಸ್ತುಬರಹಗಾರರಿಗೆ ಸ್ಥಳವಕಾಶ ಇಲ್ಲ. ಈ ದಸ್ತುಬರಹಗಾರರು ಈ ಸ್ಥಳಾಂತರ ಪ್ರದೇಶದಲ್ಲಿ ಸಿಗುವುದಿಲ್ಲ ಹಾಗೂ ಈ  ಪ್ರದೇಶದದಲ್ಲಿ ಯಾವುದೇ ಡಿಟಿಪಿ, ಝರಾಕ್ಸ ಸೆಂಟರ್‌ಗಳು, ಸಾರ್ವಜನಿಕರಿಗೆ ವಾಹನಗಳು ನಿಲ್ಲಿಸಲು ಯೋಗ್ಯ ಸ್ಥಳವಕಾಶ ಇಲ್ಲ.
ಇದರಿಂದ ಎಲ್ಲರಿಗೂ ತೊಂದರೆ ಉಂಟಾಗುತ್ತದೆ. ಆದ್ದರಿಂದ ಈ ಕಾರ್ಯಾಲಯವನ್ನು ಸ್ಥಳಾಂತರಿಸಬಾರದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಭಕ್ಷಿ ನದಾಫ್, ಅರವಿಂದ ಹುಲ್ಲೂರ, ಕಲ್ಯಾಣಪ್ಪ ಹೋಳಿ, ಮಲ್ಲೇಶಪ್ಪ ಪಲ್ಲೇದ, ಮೋಹನ ಕಬಾಡಿ, ಲಿಂಗಯ್ಯ ದನ್ನೂರ ಹಿರೇಮಠ, ಕಿರಣ ಬದಿ, ನಾಗೇಶ ಕಬಾಡಿ, ಗಿರೀಶ ಕಾರಬಾರಿ, ಲೋಹಿತ, ಶ್ರೀನಿವಾಸ ಹುಬ್ಬಳ್ಳಿ, ಹನುಮಂತಪ್ಪ ಅಳವಂಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.