ಪ್ರತಿ ಮನೆಯಲ್ಲೂ ರಾಜ್ಯೋತ್ಸವ ಆಚರಿಸುವಂತಾಗಲಿ
ಕನ್ನಡಪ್ರಭ ವಾರ್ತೆ, ಗದಗ, ನ. 3
ಕನ್ನಡ ನಾಡಿನ ಪ್ರತಿ ಮನೆ-ಮನೆಯಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಬೇಕು. ಅಂದಾಗ ಮಾತ್ರ ನಾವು ಈ ನಾಡಿಗೆ ನೀಡುವ ಗೌರವ, ದೇಶದ ಮೇಲಿರುವ ಅಭಿಮಾನವನ್ನು ಕಾಣಲು ಸಾಧ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರವಾದ) ಸಂಚಾಲಕ ಬಾಲರಾಜ ಅರಬದ ಹೇಳಿದರು.
ಶುಕ್ರವಾರ ಬೆಟಗೇರಿಯ ಗಣೇಶ ನಗರದಲ್ಲಿ ಪ್ರಜಾಶಕ್ತಿ ಸೇನಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಪ್ರತಿ ಮನೆಯಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು ಹಾಗೂ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನವನ್ನು ಹೆಚ್ಚಿಸಬೇಕು. ಏಕೆಂದರೆ ಅನೇಕ ಜನರು ಕನ್ನಡದ ಬಗ್ಗೆ ಹೋರಾಟ ಮಾಡುತ್ತಾರೆ. ಆದರೆ ತಮ್ಮ ಮನೆಯಲ್ಲಿಯೇ ಇಂಗ್ಲಿಷ್ ಬಳಸುತ್ತಾರೆ. ಅಲ್ಲದೆ, ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುತ್ತಾರೆ. ಹೀಗೆ ಮಾಡಿದರೆ ನಮ್ಮ ಹೆತ್ತ ತಾಯಿಗೆ ಅವಮಾನ ಮಾಡಿದಂತೆ ಎಂದರು.
ಪ್ರಜಾಶಕ್ತಿ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಆದರ್ಶಗಳನ್ನು ನಾವೆಲ್ಲರೂ ಅವಳವಡಿಸಿಕೊಂಡು ನಡೆಯಬೇಕು ಎಂದರು.
ಮುತ್ತಪ್ಪ ಭಜಂತ್ರಿ, ಪ್ರಜಾಶಕ್ತಿ ಸೇನಾ ಸಮಿ ಕಾರ್ಯದರ್ಶಿ ಫಕ್ರುಸಾಬ ನದಾಫ್, ಕೃಷ್ಣಪ್ಪ ಗುಂಡಗಿ, ನಾಗಪ್ಪ ಭಸ್ಮೆ, ಗೌಸುಸಾಬ ನದಾಫ್, ಸುರೇಶ ಕೊರವಿ, ಮಂಜುನಾಥ ಕಮತರ, ರಾಘವೇಂದ್ರ ಕೊರವಿ, ಸುನೀಲ, ಬಸಪ್ಪ ವಡ್ಡರ, ಗರೀಬ ಬೇಪಾರಿ, ಇಸ್ಮಾಯಿಲ್ ಹುಲಕೋಟಿ ಮುಂತಾದವರು ಉಪಸ್ಥಿತರಿದ್ದರು.
ಇಬ್ರಾಹಿಂಸಾಬ ಬೇಪಾರಿ ನಿರೂಪಿಸಿದರು. ಉದಯ ಬೆಟಗೇರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

