ಬಿಜೆಪಿ ಸರ್ಕಾರದಿಂದ ಲಂಬಾಣಿಗರಿಗೆ ಮೋಸ
ಶಿರಹಟ್ಟಿ: ಪಾರಂಪರಿಕವಾಗಿ, ಭೂಮಿ ಉಳುಮೆ ಮಾಡಿಕೊಂಡು ಬಂದ, ಅರಣ್ಯ ಜಮೀನಿನ ಮೇಲೆ ಬದುಕನ್ನು ರೂಪಿಸಿಕೊಂಡ ಅನೇಕ ಲಂಬಾಣಿ ತಾಂಡಾದ ಜನರಿಗೆ ಹಿಂದಿನ ಸರ್ಕಾರ ಈ ಜಮೀನನ್ನು ಅವರ ಹೆಸರಿಗೆ ನೋಂದಾಯಿಸಿ ಭೂಸ್ವಾಧೀನ ಹಕ್ಕು ಪತ್ರ ನೀಡಲು ಹಿಂದೇಟು ಹಾಕಿದೆ ಎಂದು ಮಾಜಿ ಶಾಸಕ ಡಿ. ಆರ್.ಪಾಟೀಲ ಆರೋಪಿಸಿದರು.
ತಾಲೂಕಿನ ಹೊಳಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಕ್ರಮ-ಸಕ್ರಮ ಭೂಮಿ ಸಾಗುವಳಿದಾರರಿಗೆ ಕಾನೂನು ತಿಳುವಳಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂ ಹಕ್ಕು ಪತ್ರ (ಪಟ್ಟಾ) ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸಿಲ್ಲ. ಅಲ್ಲದೆ, ಪದೇ-ಪದೇ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನರ ಬದುಕು ಸುಧಾರಿಸುವ ಯೋಜನೆ ಜಾರಿಗೆ ತರಲಿಲ್ಲ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ನೂತನ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಬಡ, ಹಿಂದುಳಿದ ಜನರನ್ನು ಆರ್ಥಿಕವಾಗಿ ಉನ್ನತೀಕರಿಸುವ ಚಿಂತನೆಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದ ನೂರಾರು ಲಂಬಾಣಿ ಕುಟುಂಬದವರು ತಲೆ ತಲಾಂತರದಿಂದ ಅಕ್ರಮ ಜಮೀನು ಸಾಗುವಳಿ ಮಾಡುತ್ತಾ ಬಂದಿದ್ದು, ಸಕ್ರಮಗೊಳಿಸಿ ಸಾಗುವಳಿ ಭೂ ಹಕ್ಕುಪತ್ರ ಪಡೆಯಲು ಹಿಂದುಳಿದಿದ್ದಾರೆ. ಗ್ರಾಮಸಭೆ ನಡೆಸಿ ಕರ್ನಾಟಕ ಭೂ ಕಾಯಿದೆ ಅಡಿ ಅರ್ಜಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವಂತೆ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಹಾವೇರಿ ಮತಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ, ಎಸ್.ಪಿ. ಬಳಿಗಾರ ಮಾತನಾಡಿದರು. ಲಕ್ಷ್ಮಣಗೌಡ ಪಾಟೀಲ, ತಾಪಂ ಸದಸ್ಯ ಚನ್ನಪ್ಪ ಜಗಲಿ, ಕೋಟೆಪ್ಪ ವರ್ದಿ, ದೀಪಕ ಲಮಾಣಿ, ಯು.ಎನ್. ಹೊಳಲಾಪುರ, ಹುಮಾಯುನ ಮಾಗಡಿ, ಜಯಕ್ಕ ಕಳ್ಳಿ, ಸಂತೋಷಕುರಿ, ದೇವಪ್ಪ ಲಮಾಣಿ, ಬುಡನಶ್ಯಾ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು. ರಾಮು ಕಲಾಲ ಸ್ವಾಗತಿಸಿದರು. ಮಹೇಶ ಹಾರೋಗೇರಿ ನಿರೂಪಿಸಿದರು. ಮಂಜುನಾಥ ಘಂಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

