ನಿವೃತ್ತ ನೌಕರರಿಂದ ರಾಜ್ಯೋತ್ಸವ ಆಚರಣೆ
ಗದಗ: ನಗರದ ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಸಭಾಂಗಣದಲ್ಲಿರುವ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಯು ಸಂಘದ ಜಿಲ್ಲಾಧ್ಯಕ್ಷ ಎಸ್.ಸಿ. ಗಾಣಿಗೇರ ಅಧ್ಯಕ್ಷತೆಯಲ್ಲಿ ಜರುಗಿತು.
ಕೆ.ಐ. ಕುರಗೋಡ, ಬಿ.ಬಿ. ಹೂಗಾರ, ಬಿ.ಬಿ. ಬಾವಿಕಟ್ಟಿ, ಡಾ. ವಿ.ಬಿ. ಮೇಲ್ಮರಿ, ರಾಜಶೇಖರ ಕರಡಿ, ಜಿ.ಎಸ್. ಹಿರೇಮಠ, ವಾಸು ಟೀಕಾನದಾರ ಮಾತನಾಡಿ, ಕನ್ನಡ ಭಾಷಾ ಶ್ರೀಮಂತಿಕೆ ಹಾಗೂ ಕನ್ನಡ ಸಾಹಿತ್ಯ ಕುರಿತು ಕರ್ನಾಟಕ ಏಕೀಕರಣ, ಪ್ರಾದೇಶಿಕ ಅಸಮತೋಲನ, ಕನ್ನಡ, ಆಡಳಿತ ವ್ಯವಸ್ಥೆಯಲ್ಲಿ ಬರಬೇಕು. ಶಿಕ್ಷಣದಲ್ಲಿ ಕನ್ನಡ ಮಟ್ಟ ಸುಧಾರಿಸಬೇಕು ಎಂದರು. ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಕುರಿತು ನ. 15ರ ವರೆಗೆ ವಿಸ್ತರಿಸಿದ್ದು, 3 ವರ್ಷ ಮೇಲ್ಪಟ್ಟ ಅರ್ಹರು ನೋಂದಣಿ ಮಾಡಿಕೊಳ್ಳುವ ಕುರಿತು ಗೌರವಾಧ್ಯಕ್ಷ ಬಿ.ಎಸ್. ನಾಯ್ಕರ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ತನಿಖಾಧಿಕಾರಿ ಬಿ.ಡಿ. ಚನ್ನಪ್ಪಗೌಡ್ರ ನಿಧನ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಸ್.ಐ. ಯಾಳಗಿ, ಆರ್.ಎಂ. ಏಕಬೋಟೆ, ಸಿ.ಎಸ್. ಹರ್ತಿಮಠ, ಎಸ್.ಎಫ್. ಕಣವಿ, ವೈ.ಆರ್. ಪಾಟೀಲ, ಡಿ.ಎಚ್. ಕಬಾಡಿ, ವಿ.ಬಿ. ಜುಟ್ಲೆ, ಎಂ.ಎಲ್. ಏಣಗಿ, ಎಸ್.ಬಿ. ಕಂಕಣಮೇಲಿ, ವಿ.ಆರ್. ಇಟಗಿ, ಜಿ.ಎಂ. ಅಳವಂಡಿ, ಸಿ.ಡಿ. ವೈಕುಂಠೆ, ಆರ್.ಎಚ್. ಗಂಗಲ್, ಎಸ್.ಎಸ್. ಗಡಗಿ, ಎಸ್.ಜಿ. ಗೌಡರ, ಎಸ್.ವಿ. ಹೆಬ್ಬಾಳ, ಆರ್.ಐ. ಕೊಪ್ಪಳ, ಆರ್.ಎಂ. ಸಿಂದಗಿ, ಶಂಕ್ರಣ್ಣ ಮುಳವಳ್ಳಿ, ಎಂ.ಎಂ. ಜಾನಮಾನಿ ಅವರನ್ನು ಅಜೀವ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು. ಜಿಲ್ಲಾ ಖಜಾಂಚಿ ರಾಜಶೇಖರ ಹಿರೇಮಠ, ಜಿ.ಎಂ. ಯಾನಮಶೆಟ್ಟಿ, ಐ.ಕೆ. ಬಲೂಚಗಿ, ಎಂ.ಐ. ಕಮ್ಮಾರ, ಎಸ್.ಐ. ಹೊನಗುಡಿ, ಎಸ್.ಎನ್. ಪಂಚಭಾವಿ, ಎಚ್.ಎಂ. ಮಡಿವಾಳರ, ಆರ್.ವಿ. ಶಿದ್ಲಿಂಗ, ವಿ.ಸಿ. ಹಂಚಿನಾಳ, ಆರ್.ವಿ. ಕೋರಿ, ಪಿ.ಟಿ. ನಾರಾಯಣಪುರ, ಎಚ್.ಬಿ. ದೊಡ್ಡಮನಿ, ಎಸ್.ಟಿ. ಶೇಷಗಿರಿ, ಬಿ.ಎಂ. ಶೆಲವಡಿ, ವಿ.ಡಿ. ಗೋಡಕೆ ಸಭೆಯಲ್ಲಿ ಉಪಸ್ಥಿತರಿದ್ದರು. ಬಿ.ಬಿ. ಹೂಗಾರ ಸ್ವಾಗತಿಸಿದರು. ರಾಜಶೇಖರ ಕರಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

