ಗದಗ

ಬಸ್ ಸೌಲಭ್ಯಕ್ಕೆ ಆಗ್ರಹ

Published On :

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಪ್ರಾಥಮಿಕ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ನರಗುಂದಕ್ಕೆ ಮತ್ತು ಕೊಣ್ಣೂರ, ಶಿರೋಳ ಕಾಲೇಜ್‌ಗಳಿಗೆ ಹೋಗಿ ಬರಲು ಬಸ್‌ಗಳ ಕೊರತೆ ಇದ್ದು, ಈ ಬಗ್ಗೆ ಸಾಕಷ್ಟು ಬಾರಿ ನರಗುಂದ ವಿಭಾಗದ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಬಸ್ ಸೌಲಭ್ಯ ನೀಡದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಿತ್ಯ ಈ ರಸ್ತೆಯಲ್ಲಿ ನೂರಾರು ಬಸ್‌ಗಳು ಸಂಚರಿಸಿದರೂ ಯಾವುದೇ  ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ಮಾಡುವುದಿಲ್ಲ. ಗ್ರಾಮದಲ್ಲಿ ಹಾಯ್ದು ಹೋಗುವ ಪ್ರತಿಯೊಂದು ಬಸ್‌ಗಳ ನಿಲುಗುಡೆ ಮಾಡಬೇಕೆಂದು ಗ್ರಾಮಸ್ಥರಾದ ಪ್ರವೀಣ ಅಪೋಜಿ, ಈರಣ್ಣ ಗಾಡಿ, ಮಂಜುನಾಥ ಮೊರಬದ, ಹನುಮಂತ ಸಿದ್ಧನ್ನವರ, ಚಂದ್ರಗೌಡ ಹದ್ಲಿ, ಮಹಾದೇವಪ್ಪ ಐನಾಪುರ, ರಮೇಶ ಮೊರಬದ, ಉಳಿಯಪ್ಪ ಐನಾಪುರ, ರತ್ನವ್ವ ಮುನೇನಕೊಪ್ಪ ಮುಂತಾದವರು ತಿಳಿಸಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆ
ಗದಗ:  ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ವಿಡಿಎಸ್‌ಟಿ ಪಪೂ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪಪೂ ಮಹಾವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಜೆ.ಟಿ. ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿ ಅಭಿಷೇಕ ಕೊರ್ಲಹಳ್ಳಿ ಮತ್ತು ವೈಶಾಕ್ ಅಂಗಡಿ ಇವರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇಂದು ಅಭಿಯಾನ
ರೋಣ: ಜಮಾತೆ ಇಸ್ಲಾಮಿ ಹಿಂದ್ ರೋಣ ಘಟಕ ವತಿಯಿಂದ ಶಾಂತಿ ಪ್ರಕಾಶನ ರಜತ ಮಹೋತ್ಸವ ಅಂಗವಾಗಿ ಶಾಂತಿಗಾಗಿ ಸಾಹಿತ್ಯ ಅಭಿಯಾನ ಕಾರ್ಯಕ್ರಮ ನ. 10ರ ಬೆಳಗ್ಗೆ 10.30ಕ್ಕೆ ಪಟ್ಟಣದ ಹಳೆ ಸಂತೆ ಬಜಾರ್ ಜಾಗೆಯಲ್ಲಿ ಜರುಗಲಿದೆ. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಗುಲಗಂಜಿಮಠದ ಗುರುಪಾದ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಜನಾಬ ಎಂ.ಆರ್. ಬೇಗ ವಹಿಸುವರು. ಅಥಿತಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಹುಚ್ಚಪ್ಪ ನವಲಗುಂದ, ಶಿವಣ್ಣ ಪಲ್ಲೇದ, ಎಂ.ಎ. ಕೊಪ್ಪಳ, ಪುರಸಭೆ ಸದಸ್ಯ ಗುರುಪಾದೇಶ ರಡ್ಡೇರ, ಶಫಿಕ ಮೂಗನೂರ, ಯುವ ಮುಖಂಡ ವಿಶ್ವನಾಥ ಜಿಡ್ಡಿಬಾಗಿಲ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು. ನ. 10, 11 ರಂದು 2 ದಿನಗಳ ಕಾಲ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಜರುಗಲಿದೆ ಎಂದು ಇನಾಯತ್ ತರಪದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪಂಚಮಸಾಲಿ ಸಮಾಜ ಸಭೆ
ಬೆಟಗೇರಿ: ನ. 10ರ ಸಂಜೆ 7ಕ್ಕೆ ಬೆಟಗೇರಿಯ ಕುರಹಟ್ಟಿ ಪೇಟೆ ಓಣಿಯ ಅಜ್ಜನಗೌಡ ಹಿರೇಮನಿ ಪಾಟೀಲ ಇವರ ಮನೆಯ ಬಳಿ ಬೆಟಗೇರಿ ಘಟಕದ ಪಂಚಮಸಾಲಿ ಸಮಾಜದ ಮಾಸಿಕ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಸಮಾಜದಿಂದ ಮುಂದೆ ಕೈಗೊಳ್ಳಬಹುದಾದ ಯೋಜನೆಗಳು ಮತ್ತು ಕಾರ್ಯಗಳು ಹಾಗೂ ಇತರೆ ವಿಷಯಗಳನ್ನು ಚರ್ಚಿಸಲಾಗುವುದು. ಬೆಟಗೇರಿಯ 1 ರಿಂದ 10 ವಾರ್ಡ್‌ಗಳ ಸಮಾಜ ಬಾಂಧವರು, ಆಡಳಿತ ಮಂಡಳಿ, ಉತ್ಸವ ಸಮಿತಿ, ಯುವಘಟಕ, ಹಿರಿಯರ ಸಮಿತಿ ಹಾಗೂ ಮಹಿಳಾ ಘಟಕದ ಸರ್ವ ಸದಸ್ಯರು ಹಾಜರಿದ್ದು, ಸಲಹೆ ಸೂಚನೆ ನೀಡಬೇಕು ಎಂದು ಅಧ್ಯಕ್ಷ ಕಲ್ಯಾಣಪ್ಪ ಹೋಳಿ, ಕಾರ್ಯದರ್ಶಿ ಮಹೇಶ ಕರಬಿಷ್ಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.