ಪಡಿತರ ಚೀಟಿ: ಪ್ರಕ್ರಿಯೆಗೆ ಚಾಲನೆ
ಗದಗ: ಡಿಸೆಂಬರ್-2010ರ ಹಿಂದೆ ವಿತರಿಸಲಾದ ಕಾಯಂ ಪಡಿತರ ಚೀಟಿಗಳ ಫಲಾನುಭವಿಗಳ ಪೋಟೋ ಮತ್ತು ಬಯೋವುಟ್ರಿಕ್ (ಹೆಬ್ಬಟ್ಟಿನ ಗುರುತು) ಸೆರೆಹಿಡಿಯುವುದನ್ನು ಜುಲೈ-2013ನೇ ತಿಂಗಳಿಂದ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಮುಂದುವರೆದು ಡಿಸೆಂಬರ್-2010 ಹಿಂದೆ ವಿತರಿಸಲಾದ ಕಾಯಂ ಪಡಿತರ ಚೀಟಿದಾರರ ಬಯೋವುಟ್ರಿಕ್ ಮತ್ತು ಪೋಟೋ ಸೆರೆಹಿಡಿಯುವ ಪ್ರಕ್ರಿಯೆಯನ್ನು ಈಗ ಮರು ಚಾಲನೆಗೊಳಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿ ಒಟ್ಟು 99114 ಕಾಯಂ ಪಡಿತರ ಚೀಟಿದಾರರ ಬಯೋ-ಫೋಟೋ ಸೆರೆಹಿಡಿಯುವುದು ಇನ್ನು ಬಾಕಿ ಇರುತ್ತದೆ. ಅದರಂತೆ ನಗರ, ಪಟ್ಟಣ ಪ್ರದೇಶದ ಕಾರ್ಡುದಾರರಾಗಿದ್ದಲ್ಲಿ, ತಮ್ಮ ಅಥವಾ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮೊಬೈಲ್ ಸಂಖ್ಯೆಯಿಂದ (ಖಈಖಊಃ ಎಆಉ15105442) ಎಂದು ಟೈಪ್ ಮಾಡಿ 9212357123ಗೆ ಎಸ್ಎಂಎಸ್ ಮಾಡಬೇಕು. ಎಸ್ಎಂಎಸ್ಗೆ ಸಂದೇಶ ನೊಂದಾವಣಿ ಆದ ನಂತರ ನಿಮ್ಮ ಮೊಬೈಲ್ಗೆ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಸಂಖ್ಯೆ ಒಳಗೊಂಡ ಎಸ್ಎಂಎಸ್ ಸಂದೇಶ ಬರುತ್ತದೆ. (ಇದನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ) ಎಸ್ಎಂಎಸ್ ಮೂಲಕ ಸೆಕ್ಯುರಿಟಿ ಕೋಡ್ ಮತ್ತು ಪ್ರವೇಶ, ಟೋಕನ್ ಸಂಖ್ಯೆ ಪಡೆದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಸದಸ್ಯರೊಂದಿಗೆ ನಗರ, ಪಟ್ಟಣ ಪ್ರದೇಶದಲ್ಲಿ ಪ್ರಾರಂಭಿಸಲಾಗಿರುವ ಪಡಿತರ ಚೀಟಿ ಸೇವಾ ಕೇಂದ್ರಗಳಲ್ಲಿ ಭಾವಚಿತ್ರ ಮತ್ತು ಬಯೋವುಟ್ರಿಕ್ (ಹೆಬ್ಬಟ್ಟಿನ ಗುರುತು) ನೀಡಬೇಕು. ಈ ಕಾರ್ಯಕ್ಕಾಗಿ ಕಾಯಂ ಪಡಿತರ ಚೀಟಿದಾರರು ರು. 50ನ್ನು ಪಾವತಿಸಿ ರಸೀದಿಯನ್ನು ಪಡೆಯುವುದು. ಅದೇ ರೀತಿ ಗ್ರಾಮೀಣ ಪ್ರದೇಶದ ಕಾಯಂ ಪಡಿತರ ಚೀಟಿದಾರರು ಎಸ್ಎಂಎಸ್ ಸಂದೇಶವನ್ನು ಕಳಿಸುವ ಅವಶ್ಯಕತೆ ಇರುವುದಿಲ್ಲ. ಕಾರ್ಡ್ದಾರರು ನೇರವಾಗಿ ಆಯಾ ಗ್ರಾಮ ಪಂಚಾಯತ್ ಕಚೇರಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹೋಗಿ ಭಾವಚಿತ್ರ ಹಾಗೂ ಬಯೋವುಟ್ರಿಕ್ (ಹೆಬ್ಬಟ್ಟಿನ ಗುರುತು) ನೀಡಬೇಕು. ಈ ಕಾರ್ಯಕ್ಕಾಗಿ ಪಡಿತರ ಚೀಟಿದಾರರು ರು. 50ನ್ನು ಪಾವತಿಸಿ ರಸೀದಿಯನ್ನು ಪಡೆಯಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇಂದು ಮೌಲಾನಾ ಅಬುಲ ಕಲಾಂ ಜನ್ಮದಿನಾಚರಣೆ
ಗದಗ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನ. 11 ರಂದು ಬೆಳಗ್ಗೆ 10 ಗಂಟೆಗೆ ಮೌಲಾನಾ ಅಬುಲ ಕಲಾಂ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಪ್ರಾಚಾರ್ಯೆ ವೈ.ಆರ್. ಹಿರೇಗೌಡರ ವಹಿಸುವರು. ಕಾರಣ ಶಿಕ್ಷಣಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

