ಗದಗ

ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ

Published On :

ಲಕ್ಷ್ಮೇಶ್ವರ: ಎಲ್ಲ ಪದವೀಧರ ಮತದಾರರು ಪ್ರಜ್ಞಾವಂತರಾಗಿದ್ದು ಈ ಬಾರಿ ಉತ್ತಮ ಆಯ್ಕೆಯನ್ನು ಮಾಡುತ್ತಾರೆ ಎಂದು ಅಖಿಲ ಕರ್ನಾಟಕ ಪದವೀಧರ ಒಕ್ಕೂಟ ಹಾಗೂ ರಾಜ್ಯ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಟಿ. ಈಶ್ವರ ತಿಳಿಸಿದ್ದಾರೆ.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2ನೇ ಹಂತದ ನೋಂದಣಿ ಅಭಿಯಾನವನ್ನು ಕಳೆದ 4 ದಿನಗಳಿಂದ ಕಾರವಾರ, ಹಾವೇರಿ, ಧಾರವಾಡ, ನರಗುಂದದಲ್ಲಿ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಮುಂಡರಗಿ, ಶಿರಹಟ್ಟಿ ರೋಣ ಗದಗದಲ್ಲಿ ಕೈಗೊಳ್ಳಲಾಗುವುದು ಎಂದರು.  ಕಾಂಗ್ರೆಸ್ ಪಕ್ಷದ ಬೆಂಬಲವಾಗಿ ಸಾಹಿತಿಗಳು, ವಕೀಲರು, ಶಿಕ್ಷಣ ಪರಿಣಿತರು, ಸರ್ಕಾರಿ, ಅರೆ ಸರ್ಕಾರಿ ಪದವೀಧರ ನೌಕರ ವರ್ಗದವರು, ಅಖಿಲ ಕರ್ನಾಟಕ ಪದವೀಧರ ಒಕ್ಕೂಟದ ಸುಮಾರು 39 ಸಾವಿರ ಸದಸ್ಯರು ಸಂಪೂರ್ಣ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪೋಟೊ, ಪ್ಲೆಕ್ಸ್, ಬ್ಯಾನರ್‌ಗಳನ್ನು ಮುಂದಿಟ್ಟುಕೊಂಡು, ಸುಳ್ಳು ಭರವಸೆ ನೀಡುತ್ತಿರುವುದನ್ನು ಗಮನಿಸುತ್ತಿರುವ ಪದವೀಧರರು ನೋಂದಣಿ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷದ ಜತೆ ಅತ್ಯಂತ ಉತ್ಸಾಹದಲ್ಲಿ ಭಾಗಿಯಾಗುತ್ತಿದ್ದಾರೆ. ನ. 15ರವರೆಗೆ ಚುನಾವಣಾ ಆಯೋಗ ಪದವಿ ಮತದಾರರ ನೋಂದಣಿಗೆ ಅವಧಿ ವಿಸ್ತರಿಸಿದ್ದು, 3ನೇ ಹಂತದಲ್ಲಿ ಕ್ಷೇತ್ರದಲ್ಲಿ ನೋಂದಣಿ ಕಾರ್ಯ ಕೈಗೊಂಡು ಇನ್ನೂ 4 ಸಾವಿರ ಮತದಾರರ ನೋಂದಣಿ ಮಾಡಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.