ಇಂದು ಉಪನ್ಯಾಸ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಘ, ದೊರೆಸ್ವಾಮಿ ವಿರಕ್ತಮಠದ ಸಂಯುಕ್ತ ಆಶ್ರಯದಲ್ಲಿ ಮದಗುಣಗಿ ಗ್ರಾಮದ ಅಜ್ಜೇಶ್ವರ ಶ್ರೀಗಳ ಮಠದಲ್ಲಿ ನ. 13 ರಂದು ಸಂಜೆ 7.30 ಗಂಟೆಗೆ ಶರಣರು ಕಂಡ ಸಮಾನತೆ ಕುರಿತು ಉಪನ್ಯಾಸ ಜರುಗಲಿದೆ. ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಗುರುಶಿದ್ಧಯ್ಯ ಹಿರೇಮಠ, ಗಂಗಯ್ಯ ಹಿರೇಮಠ, ತಾಪಂ ಸದಸ್ಯ ರುದ್ರವ್ವ ದೊಡಮನಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಚನ್ನಯ್ಯ ಸಂಗಳಮಠ, ಯಲ್ಲಪ್ಪ ದೊಡಮನಿ, ಮರಿಗೌಡ ಕಲೂತಿ, ಮಂಜುನಾಥಗೌಡ ಪಾಟೀಲ, ಕೆ.ಬಿ. ಮಡಿವಾಳರ, ಶೇಖರಗೌಡ ಕಲ್ಲನಗೌಡ್ರ, ಹನುಮಂತ ಮಜ್ಜಿಗುಡ್ಡ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ವಚನ ಸಾಹಿತ್ಯ ಕುರಿತು ಉಪನ್ಯಾಸ ಇಂದು
ನರಗುಂದ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆಶ್ರಯದಲ್ಲಿ ಚಿಕ್ಕನರಗುಂದ ಹೋಬಳಿ ಗ್ರಾಮವಾದ ಬೆನಕನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 13ರ ಮಧ್ಯಾಹ್ನ 2.30 ಗಂಟೆಗೆ ವಚನ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳ ಕುರಿತು ಕಾರ್ಯಕ್ರಮ ಜರುಗಲಿದೆ. ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಡಿ.ಎಸ್. ಪಾಟೀಲ, ಪ್ರೊ. ಎಸ್.ಬಿ. ಕುಷ್ಟಗಿ, ಆರ್.ಆರ್.ತಿಮ್ಮರಡ್ಡಿ, ಬಿ.ಎಸ್. ಹಣಜಿ, ಜಿ.ಟಿ. ಗುಡಿಸಾಗರ, ಲಕ್ಷ್ಮಣ ಸತ್ಯರಡ್ಡಿ, ನಂಜಯ್ಯಸ್ವಾಮಿ ಹೊಳಿಮಠ, ಎ.ಎ. ನದಾಫ, ಡಾ. ಸಿ.ವಿ. ಹಿರೇಮಠ, ಬಿ.ಆರ್. ಮಹಾದೇವಪ್ಪನವರ, ಸೋಮು ಹೊಂಗಲ, ಪ್ರಕಾಶ ಭೂಮಣ್ಣವರ, ಎಂ.ವಿ. ಕಟಗಿ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ಹಾವಣೂರ ಲೈನ್, ಸಂಗಮಲ್ಯಾಂಡ್ರಿ ಲೈನ್, ಹರ್ಲಾಪುರ ಜಂದಿಸಾಬ್ ಲೈನ್, ಮುದಕಟ್ಟಿ ಬಸಪ್ಪ ಲೈನ್, ನೆರೇಗಲ್ಲ ಶಾಂತಾಬಾಯಿ ಲೈನ್, ಅರಸಿದ್ದಿ ಲೈನ್, ಖೋಡೆ ಲೈನ್, ಅಂಪಿನಗಲ್ಲಿ, ಸುಣಗಾರ ಓಣಿ, ಡಂಬಳ ಲೈನ್, ಮಾಂತೇಶ ವೆಬ್ರೀಜ್, ಡಾ. ಶೆಟ್ಟರ ಲೈನ್, ನಾಲ್ವಡಗಲ್ಲಿ, ಜಿಗಜಿನ್ನಿ, ಜಯಕುಶಲದಾಸ ಕಂಪನಿ ಹಿಂಭಾಗ, ಮಟ್ಟಿ ಲೈನ್, ಶಿವಳ್ಳಿ ಲೈನ್, ಪಟ್ಟಣಶೇಟ್ಟರ್ ಲೈನ್, ಇಂಗಳಳ್ಳಿ ಲೈನ್, ಮಾಬುಸುಭಾನಿ ಕಟ್ಟಿ ಹಿಂಭಾಗ, ಬ್ಯಾಂಕ್ ರೋಡ್, ಗೌರಿ ಶಂಕರ ಲಾಡ್ಜ್, ಗಾಂಧಿಮಾರ್ಕೇಟ್, ಅಣ್ಣಿಗೇರಿ ಲೈನ್, ಆಜಾದ್ ರಸ್ತೆ, ರಾಚೋಟೇಶ್ವರ ನಗರ 3 ಭಾಗಗಳು, ತಾಜ ನಗರ, ಚವಡಿ ಲೈನ್, ಹನುಮಾನ ನಗರ ವಕೀಲರ ಮನೆ ಲೈನ್, ಮೇರವಾಡೆ ಲೈನ್, ಸರ್ವೋದಯ ಕಾಲೋನಿ, ಮಾನ್ವಿ ಲೈನ್, ಮಲ್ನಾಡದವರ ಲೈನ್, ಹುಡೇದ ಲೈನ್, ಗುಳಗುಂದಿ ಲೈನ್, ಚಿಮ್ಮಿ ಲೈನ್, ಬಾಣದರ ಲೈನ್, ತುಪ್ಪದ ಲೈನ್, ಅಕ್ಕಿ ಲೈನ್, ಚನ್ನಪ್ಪ ಲೈನ್, ಹಾರುಗೇರಿ ಲೈನ್, ಗೆಳಯರ ಬಳಗ, ಎಲಿಗಾರ ಪ್ಲಾಟ್, ಈಟಿಯವರ ಲೈನ್, ಬಾಲವಾಡಿ ಲೈನ್, ನೂರಾನಿ ಮಸುತಿ ಲೈನ್ ಈ ಭಾಗಗಳಲ್ಲಿ ಬುಧವಾರ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

