ದೇಶ ರಕ್ಷಣೆಯ ಶಿಕ್ಷಣ ಅಗತ್ಯ: ನಂಜೇಗೌಡ
ರೋಣ: ಇಂದಿನ ಮಕ್ಕಳನ್ನು ದೇಶ ರಕ್ಷಣೆ ಮಾಡುವ ಗುರುತರವಾದ ಜವಾಬ್ದಾರಿಯುಳ್ಳ ಉತ್ತಮ ಪ್ರಜೆಯನ್ನಾಗಿ ನಿರ್ಮಿಸಬೇಕು. ಭಾವೈಕ್ಯತೆ, ದೇಶಾಭಿಮಾನ ಬೆಳೆಸುವ ಶಿಕ್ಷಣವನ್ನು ಇಂದಿನ ಶಿಕ್ಷಕರು ಮಕ್ಕಳಿಗೆ ನೀಡುವಂತಾಗಬೇಕು ಎಂದು ಪ್ರಥಮ ಸಿವಿಲ್ ನ್ಯಾಯಾಧೀಶ ನಂಜೇಗೌಡ ಎಂ.ಸಿ. ಹೇಳಿದರು.
ಅವರು ಗುರುವಾರ ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ರೋಣ, ನ್ಯಾಯವಾದಿಗಳ ಸಂಘ, ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಹೆಚ್ಚಿನ ಅಂಕ ಪಡೆದವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯಲ್ಲಿನ ನೈತಿಕ, ಸಾಂಸ್ಕೃತಿಕ ಸಾಧನೆ ತಿಳಿದು ಗೌರವಿಸಿ, ಅಂತಹ ವ್ಯಕ್ತಿಗೆ ಮೊದಲ ಪ್ರಾಧಾನ್ಯತೆ ನೀಡುವುದು ಮುಖ್ಯವಾಗಿದೆ. ಮಕ್ಕಳಿಗೆ ಸರಿಯಾದ ಕಾನೂನು ತಿಳಿವಳಿಕೆ ಇಲ್ಲದ್ದರಿಂದ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ. ಮಕ್ಕಳಿಗೆ ಸಂವಿಧಾನದಲ್ಲಿ ಜೀವಿಸುವ ಹಕ್ಕಿದೆ. ಮಕ್ಕಳ ಭವಿಷ್ಯದ ಜೀವನವನ್ನು ಸುಂದರ ಮತ್ತು ಉಜ್ವಲಗೊಳಿಸಲು ಶಿಕ್ಷಣ ಅತ್ಯಗತ್ಯವಾಗಿದೆ. ಆ ದಿಶೆಯಲ್ಲಿ ಯಾವುದೇ ಒತ್ತಡ ಹಾಕದೇ ಮುಕ್ತವಾಗಿ ಕಲಿಯುವ ಅವಕಾಶ ಕಲ್ಪಿಸಬೇಕು ಎಂದರು.
ನ್ಯಾಯವಾದಿ ಎಲ್.ಎನ್. ಬಾಣದ, ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಬಿ.ಕೆ. ಜಾಲಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ನಾರಾಯಣ ಆರಿ, ನ್ಯಾಯವಾದಿ ವಿ.ಡಿ. ಪಾವಾಸ್ಕರ, ಎಂ.ಬಿ. ವಕ್ರದ, ವಿ.ಬಿ. ಕಾಡಗಿಮಠ, ವೈ.ಎಂ. ಹುಡೇದ, ಎಸ್.ಬಿ. ಅಮರನಾಥ, ಎಸ್.ಎಸ್. ಬಿರನೂರ, ಎಸ್.ಎಸ್. ನಡುವಿನಮನಿ, ಎಂ.ಆರ್.ಬುರಡಿ, ಆರ್.ಎಚ್. ಕುಂಟೋಜಿ, ಝಡ್.ಎಂ. ನದಾಫ್, ಮೆಣಸಗಿ, ರಾಜೇಂದ್ರ ಉದ್ದಾರ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ತೇಜಶ್ವಿನಿ ಕುಷ್ಟಗಿ ಸ್ವಾಗತಿಸಿ, ವಂದಿಸಿದರು. ಮಹೇಶ ಕುರಿಯವರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

