ಜನಮನ ಸೆಳೆದ ಕಾವ್ಯ-ಕುಂಚ-ಗಾಯನ
ಗದಗ: ಕವಿಯ ಮನಸ್ಸಿನ ಭಾವನೆಗಳು ಕಾವ್ಯವಾಗಿ ಹೊಮ್ಮಿ ಕಾವ್ಯಕ್ಕೆ ಗಾಯಕ ರಾಗ ಸಂಯೋಜಿಸಿ, ಚಿತ್ರ ಕಲಾವಿದ ಕಾವ್ಯ ಗಾಯನ ಗ್ರಹಿಸಿ ಬಿಡಿಸುವ ಚಿತ್ರಗಳ ಸಮ್ಮಿಳತವೇ ಕಾವ್ಯ-ಕುಂಚ-ಗಾಯನದ ವೈಶಿಷ್ಟ್ಯ ಎಂದು ಗದಗ ಬೆಟಗೇರಿ ರೋಟರಿ ಕ್ಲಬ್ನ ಅಧ್ಯಕ್ಷ ಡಾ. ಪ್ರದೀಪ ಉಗಲಾಟದ ಹೇಳಿದರು.
ಮಂಗಳವಾರ ಗದುಗಿನ ರೋಟರಿ ಐಕೇರ್ ಸೆಂಟರ್ದಲ್ಲಿ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನುಡಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾವ್ಯ-ಕುಂಚ-ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯವು ಮನುಷ್ಯನ ಮನಸ್ಸಿಗೆ ಸಂಜೀವಿನಿ ಇದ್ದಂತೆ. ಕಲೆ, ಕಲಾವಿದ, ಗಾಯಕರು ಮನಸ್ಸಿನ ವಿವಿಧ ರೋಗ ದೂರ ಮಾಡಬಲ್ಲ ನೀಜವಾದ ವೈದ್ಯರಿದ್ದಂತೆ. ಅಂತಹ ಶಕ್ತಿ ಸಂಗೀತ, ಸಾಹಿತ್ಯ, ಚಿತ್ರಕಲೆಗೆ ಇದೆ ಎಂದರು. ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕವಿತಾ ಬಸವರಾಜ ದಂಡಿನ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ ತಿಂಗಳಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನುಡಿಹಬ್ಬ ಆಚರಿಸಲಿದ್ದು, ಅದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕವಿ ಡಾ. ಅಶೋಕ ಮತ್ತಿಗಟ್ಟಿ ಅವರ ಕಾವ್ಯಕ್ಕೆ ಹಿರಿಯ ಚಿತ್ರ ಕಲಾವಿದ ಪಿ.ಎ. ಕುಲಕರ್ಣಿ ಚಿತ್ರ ಬಿಡಿಸಿದರು. ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ರಾಗ ಸಂಯೋಜಿಸಿ ಹಾಡಿದರು. ಬ್ಯಾಳಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ, ಡಾ. ರಾಜಶೇಖರ ಬಳ್ಳಾರಿ, ಎ.ಎಂ. ಗೌಡರ, ಪ್ರೊ. ಐ.ಐ.ಪಟ್ಟಣಶೆಟ್ಟಿ, ಡಾ. ಜ್ಯೋತಿ ಕಾಮತ್, ಡಾ. ಮೀನಾಕ್ಷಿ ಮತ್ತಿಗಟ್ಟಿ, ಡಾ. ಎಸ್.ಕೆ. ನಾಲತ್ವಾಡಮಠ, ಶಿವಗಂಗ, ಕೆ.ಎನ್. ರೇವಣಕರ, ಎಸ್.ವಿ. ಹುಬ್ಬಳ್ಳಿ, ಶ್ರೀಧರ ಸುಲ್ತಾನಪುರ, ಎಸ್.ಎಲ್. ಹಕ್ಕಾಪಕ್ಕಿ, ಎಸ್.ಎಫ್. ಬೆನಕಣ್ಣವರ, ಪ್ರೇಮಾ ಮೇಟಿ, ಕಸ್ತೂರಿ ಹಿರೇಗೌಡರ, ನೀಲಾ ಉಗಲಾಟದ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

