ಗದಗ

ತೋಂಟದಾರ್ಯ ಮಠಕ್ಕೆ ವೈಜನಾಥ ಪಾಟೀಲ ಭೇಟಿ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 15
ಕನ್ನಡದ ಜಗದ್ಗುರುಗಳೆಂದೇ ಪ್ರಖ್ಯಾತರಾದ ತೋಂಟದ ಸಿದ್ಧಲಿಂಗ ಶ್ರೀಗಳನ್ನು ಭೇಟಿ ಮಾಡಿದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ವೈಜನಾಥ ಪಾಟೀಲ, ಸಂವಿಧಾನದ 371 ಡಿ ಕಲಂ ಪ್ರಕಾರ ಆಂಧ್ರದ ಹಿಂದುಳಿದ ತೆಲಂಗಾಣಕ್ಕೆ ಕೇಂದ್ರ ಸರ್ಕಾರದವರು 1973 ರಲ್ಲಿ ವಿಶೇಷ ಸ್ಥಾನಮಾನ ನೀಡಿದರು. ಆಗಿನ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಸಂಸದರು ಲೋಕಸಭೆಯಲ್ಲಿ ಹೈದರಾಬಾದ ಕರ್ನಾಟಕದ ಗುಲಬರ್ಗ ವಿಭಾಗದ ಜಿಲ್ಲೆಗಳಿಗೂ ಈ ಸೌಲಭ್ಯ ವಿಸ್ತರಿಸಬೇಕೆಂದು ಧ್ವನಿ ಎತ್ತಿದ್ದರೆ ಇಂದಿನವರೆಗೂ 371 ಜೆ ಕಲಂ ಅನುಷ್ಠಾನವಾಗುವವರೆಗೂ ನಾವು ಕಾಯುವ ಪರಿಸ್ಥಿತಿ ಬರುತ್ತಿರಲಿಲ್ಲ.
ಅಂದಿನ ಕರ್ನಾಟಕದ ಸಂಸದರ ಉದಾಶೀನತೆಯಿಂದ ನಾವು ಇಲ್ಲಿಯವರೆಗೆ ಆ ಸೌಲಭ್ಯದಿಂದ ವಂಚಿತರಾಗಿ ಹಿಂದುಳಿಯಬೇಕಾಯಿತು. ಹೈದ್ರಾಬಾದ್ ಕರ್ನಾಟಕ ಪ್ರದೇಶ ಮತ್ತು ಉತ್ತರ ಕರ್ನಾಟಕ ಭಾಗ ದಕ್ಷಿಣ ಕರ್ನಾಟಕಕ್ಕಿಂತ ಬಹಳ ಹಿಂದುಳಿದ ಬಗ್ಗೆ ಮತ್ತು ನಂಜುಂಡಪ್ಪ ವರದಿ ಅನುಷ್ಠಾನದ ಬಗ್ಗೆ ಸದಾ ಧ್ವನಿ ಎತ್ತಿದ ತೋಂಟದ ಶ್ರೀಗಳ ಆಶೀರ್ವಾದ ಪಡೆಯಲು ತಾವು ಗದುಗಿಗೆ ಬಂದಿರುವುದಾಗಿ ತಿಳಿಸಿದರು.
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿ ಕಲಬುರ್ಗಿಯ ಡಾ. ಬಸವರಾಜ ಕುಮ್ಮನೂರು, ಪ್ರೊ. ಶಿವಶಂಕರ, ಕೊಪ್ಪಳದ ಡಾ. ಅಲ್ಲಮಪ್ರಭು ಬೆಟದೂರ, ಎಚ್.ಎಸ್. ಪಾಟೀಲ ಮತ್ತು ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.