ದೊಡ್ಡಮೇಟಿ ಪುತ್ಥಳಿ ಜಿಲ್ಲಾಭವನ ಎದುರು ಸ್ಥಾಪಿಸಿ
ಕನ್ನಡಪ್ರಭ ವಾರ್ತೆ, ನರಗುಂದ, ನ. 19
ಕನ್ನಡ ರಾಜ್ಯದ ಅಖಂಡತೆಗಾಗಿ ಹೋರಾಟ ಮಾಡಿದ ದಿ. ಅಂದಾನಪ್ಪ ದೊಡ್ಡಮೇಟಿಯವರ ಪುತ್ಥಳಿಯು ಜಿಲ್ಲಾಭವನ ಎದುರಿಗೆ ಸ್ಥಾಪನೆಯಾಗಬೇಕು. ಇದರಿಂದ ಹೋರಾಟಗಾರರಿಗೆ ಗೌರವ ನೀಡಿದಂತಾಗುತ್ತದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ರಾಜೋತ್ಸವ ಅಂಗವಾಗಿ ಕನ್ನಡ ಜಾಗೃತಿ ಅಭಿಯಾನ ಮತ್ತು 220ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರಾಜ್ಯದ ಏಕೀಕರಣಕ್ಕಾಗಿ ಶ್ರಮಿಸಿದ ಹೋರಾಟಗಾರರ ಜೀವನ ಚರಿತ್ರೆ ಪಠ್ಯದಲ್ಲಿ ಬರಬೇಕು. ನಮ್ಮ ಜಿಲ್ಲೆಯಲ್ಲಿ ಏಕೀಕರಣಕ್ಕಾಗಿ ಹೋರಾಡಿ 1953ರಲ್ಲಿ ಭುವನೇಶ್ವರ ಪರಿಕಲ್ಪನೆ ನೀಡಿದ ಹೋರಾಟಗಾರ ದಿ. ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ಭವನ ಜಕ್ಕಲಿಯಲ್ಲಿ ನಿರ್ಮಾಣವಾಗಬೇಕು.
ಗದಗ ಜಿಲ್ಲಾಡಳಿತ ಭವನದ ಎದುರು ದೊಡ್ಡಮೇಟಿಯವರ ಪುತ್ಥಳಿ ಸ್ಥಾಪನೆಯಾದರೆ ಮಾತ್ರ ಅವರ ಶ್ರಮ ಸಾರ್ಥಕ ಮತ್ತು ಸ್ಮರಣೆಮಾಡಿದಂತಾಗುತ್ತದೆ ಎಂದರು.
ತಾಲೂಕಿನ ಜನಪದ ಕಲಾವಿದರಾದ ಯಲ್ಲಪ್ಪ ಗುಡಾರದ, ಕಲ್ಲಪ್ಪ ಸವದಿ ಅವರನ್ನು ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಿಯಾಂಕ ಕಲಾಲ, ಪೂಜಾ ಕುಲಕರ್ಣಿ, ಲಲಿತಾ ಡೊಳ್ಳಿನ, ಗಿರಿಜಾ ಹಾಲಪ್ಪನವರ, ಜ್ಯೋತಿ ಚಂದನ್ನವರ, ಈಶ್ವರ ಚವಡಿ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಕಸಪಾ ಪ್ರಧಾನ ಕಾರ್ಯದರ್ಶಿ ಶರಣು ಗೊಗೇರಿ, ಜಿಲ್ಲಾ ಕಸಪಾ ಅಧ್ಯಕ್ಷ ಡಾ. ಶಿವಣ್ಣ ಕುರಿ ಮಾತನಾಡಿದರು. ಎಸ್.ಬಿ. ಪಾಟೀಲ, ಷಹಜಾನ ಮುದಕವಿ, ರಾಜು, ಪಿ.ಸಿ. ಕಲಹಾಳ, ಐ.ಆರ್. ಹಡಗಲಿ, ಡಿ.ಎಚ್.ಅಜ್ಜಿ, ಬಿ.ವಿ. ಶಿರಿಯಪ್ಪಗೌಡರ, ಪಿ.ಎಸ್. ಅಣ್ಣಿಗೇರಿ, ವೈ.ಎಂ. ಹಡಪದ, ಕೆ.ಟಿ. ಪಾಟೀಲ, ದೊಡಲಿಂಗಪ್ಪನವರ ಮುಂತಾದವರು ಉಪಸ್ಥಿತರಿದ್ದರು.
ಮಹಾಂತೇಶ ಹಿರೇಮಠ ಸ್ವಾಗತಸಿದರು. ಆರ್.ಬಿ. ಚಿನವಾಲರ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

