ಪಂಚಮಸಾಲಿ ಸಮಾಜ 2ಎಗೆ ಸೇರಿಸಿ
ಕನ್ನಡಪ್ರಭ ವಾರ್ತೆ, ಗದಗ, ನ. 19
ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಅಂತೂರು-ಬೆಂತೂರು ಗ್ರಾಮದ ಅನ್ನದಾನೀಶ್ವರ ಮಠದಲ್ಲಿ ಕಿತ್ತೂರು ಚನ್ನಮ್ಮಳ 190ನೇ ವಿಜಯೋತ್ಸವ ಹಾಗೂ ಸಮಾಜ ಸಂಘಟನೆ ವತಿಯಿಂದ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
ಕಿತ್ತೂರ ಚನ್ನಮ್ಮಳ ವಿಜಯ ದಿನದಂದು ಮಹಿಳೆಯರೆಲ್ಲ ಸಮಾಜಕ್ಕೆ ಆದರ್ಶಪ್ರಾಯರಾಗಬೇಕು. ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಈಗಾಗಲೇ ಸಿಎಂಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದ ಚಟುವಟಿಕೆಗಾಗಿ ಸರ್ಕಾರದಿಂದ ನೆಲಮಂಗಲದಲ್ಲಿ 5 ಎಕರೆ ಜಾಗೆ ನೀಡಿದ್ದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಮಂಜುನಾಥ ಗುಡಿಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಶ್ವನಾಥ ಕುಲಕರ್ಣಿ, ಬಸವರಾಜ ಸಿದ್ಧಗೊಣ್ಣವರ, ಸ್ವರೂಪ ಮದ್ನೂರ ಮುಂತಾದವರನ್ನು ಸನ್ಮಾನಿಸಲಾಯಿತು. ಬೂದಪ್ಪ ಬಂಕದ, ಎಂ.ಎಸ್. ಮಲ್ಲಾಪುರ, ಎಂ.ಬಸಪ್ಪ, ಎಂ.ಎಸ್. ಚಿನ್ನೂರ, ಚಂದ್ರಣ್ಣ ಹುಣಸಿಕಟ್ಟಿ, ಎಂ.ಎಸ್.ಪಾಟೀಲ, ಮುದಕಪ್ಪ ಹೋಳಿ, ಮಹೇಶ ಕರಿಬಿಷ್ಠಿ, ಸುರೇಶ ಉಗಲಾಟ, ದೇವೇಂದ್ರಪ್ಪ ಮಜ್ಜಿಗುಡ್ಡ, ಬೂದಪ್ಪ ಶಿವಳ್ಳಿ, ಚಿಟ್ಟಿ ಗುರುಗಳು, ಕಲ್ಲಪ್ಪ ಮಣಕವಾಡ, ಈಶ್ವರಪ್ಪ ಕೊಪ್ಪಳ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷ ವೀರೇಶ ಮದ್ನೂರ ಸ್ವಾಗತಿಸಿದರು. ಬೂದೇಶ ಅಂಗಡಿ ನಿರೂಪಿಸಿದರು. ಬೂದೇಶ ಮಾಗಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

