ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಟಿಪ್ಪುಸುಲ್ತಾನ್, ಕನಕದಾಸ ಜಯಂತಿ
ಗದಗ: ಮೈಸೂರು ಹುಲಿ ಟಿಪ್ಪುಸುಲ್ತಾನ್, ಕನಕದಾಸರ ಜಯಂತಿಯನ್ನು ನ. 20ರ ಸಂಜೆ 4ಕ್ಕೆ ನಗರದ ಮಹೇಂದ್ರಕರ ವೃತ್ತದ ಬಳಿಯ ಬಿ.ಎಸ್. ಸುಂಕದ ಅಸೋಸಿಯೆಟ್‌ನಿಂದ ಆಚರಿಸಲಾಗುವುದು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಸೊರಟೂರು ಹಿರೇಮಠದ ಫಕೀರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಎಫ್.ಬಿ. ಸುಂಕದ ಅಧ್ಯಕ್ಷತೆ ವಹಿಸುವರು. ನ್ಯಾಯಾಧೀಶ ಎಸ್.ಜಿ. ಪಲ್ಲೇದ, ಮೌಲಾನಾ ಇನಾಯತ್‌ಉಲ್ಲಾ ಫಿರ್‌ಜಾದೆ, ಶಿರಾಜಅಹ್ಮದ್ ಖಾಜಿ, ಜಾವೇದ ಸುಂಕದ, ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ನಿಸ್ಸಾರ್ ಅಹ್ಮದ ಖಾಜಿ, ಎಸ್.ಕೆ. ನದಾಫ, ಬೇಪಾರಿ, ಕವಿ ಸಿಜಿಬಿ ಹಿರೇಮಠ, ಬಸವಣ್ಣೆಯ್ಯ ಹಿರೇಮಠ ಉಪಸ್ಥಿತರಿರುವರು. ಇದೇ ಸಂದರ್ಭ ಆರ್.ಎಂ. ಶಿರೂರ, ಎಸ್.ಬಿ. ಮಾಳಶೆಟ್ಟಿ, ವಿ.ಬಿ. ಹುಬ್ಬಳ್ಳಿ, ನಗರಸಭೆ ಸದಸ್ಯ ಪೀರಸಾಬ ಕೌತಾಳ, ಖಮರ್‌ಸುಲ್ತಾನ್ ನಮಾಜಿರನ್ನು ಸನ್ಮಾನಿಸಲಾಗುವುದು.
ಇಂದಿರಾಗಾಂಧಿ ಜಯಂತಿ
ಗದಗ: ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು, ದೇಶಕ್ಕೆ ದಕ್ಷ ಸೇವೆಯನ್ನು ನೀಡಿದ ಅಪ್ರತಿಮ ಮಹಿಳೆಯಾಗಿದ್ದಾರೆ ಎಂದು ಗಣೇಶಸಿಂಗ್ ಬ್ಯಾಳಿ ಹೇಳಿದರು.  
ಮಂಗಳವಾರ ಬೆಟಗೇರಿಯ ಮಹಾರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವೈ.ಆರ್. ಹಿರೇಗೌಡರ ಮಾತನಾಡಿ, ಇಂದಿರಾಗಾಂಧಿ ಇವರ ಜೀವನ ಶೈಲಿಯನ್ನು ಮಕ್ಕಳಿಗೆ ಹೇಳುತ್ತಾ ದಿಟ್ಟ ಮಹಿಳೆಯ ಸೇವೆಯನ್ನು ಸ್ಮರಿಸಿದರು. ಕೆ.ಎಂ. ಮೂಲಿಮನಿ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ಸಿ.ಎಂ. ಮಾರನಬಸರಿ ನಿರೂಪಿಸಿದರು. ಎಚ್.ಎಸ್. ಬ್ಯಾಳಿ ವಂದಿಸಿದರು.
ಇಂದು ಕನಕದಾಸ ಜಯಂತಿ
ರೋಣ: ತಾಲೂಕು ಆಡಳಿತ ರೋಣ, ಕನ್ನಡ-ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸಂತ ಶ್ರೇಷ್ಠ ಕವಿ ಕನಕದಾಸ ಜಯಂತಿಯನ್ನು ನ. 20ರಂದು ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದರು, ವಿಪ ಸದಸ್ಯರು,, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಎಪಿಎಂಸಿ ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ ಉಪಸ್ಥಿತರಿರುವರು. ಜೆ.ಬಿ. ಕಲ್ಲನಗೌಡ್ರ ಅವರಿಂದ ಉಪನ್ಯಾಸ ಜರುಗಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಎ.ಜಿ. ಪಂಡಿತ ತಿಳಿಸಿದ್ದಾರೆ.
ಕನಕ ಜಯಂತಿ ಇಂದು
ಗದಗ: ಜಿಲ್ಲಾಡಳಿತ, ಜಿಪಂ, ವಿವಿಧ ಇಲಾಖೆ, ಸಮುದಾಯ ಸಂಘಟನೆಗಳ ಆಶ್ರಯದಲ್ಲಿ ನ. 20ರ ಬೆಳಗ್ಗೆ 11ಕ್ಕೆ ನಗರದ ಕನಕ ಭವನದಲ್ಲಿ ಕನಕದಾಸರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಸಂಸದರು, ಶಾಸಕರು, ವಿಪ ಸದಸ್ಯರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಕನಕ ಭವನ ಸಮಿತಿಯ ಗೌರವಾಧ್ಯಕ್ಷರು ಆಗಮಿಸುವರು. ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕೆ.ಬಿ. ತಳಗೇರಿ, ಕೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಶರಣಬಸವ ವೆಂಕಟಾಪುರ ಅವರು ಕನಕದಾಸರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡುವರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವಿ.ಜಿ. ತುರಮರಿ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಪ್ರಕಟಣೆ ಮೂಲಕ ಸ್ವಾಗತ ಕೋರಿದ್ದಾರೆ.
ಕನಕದಾಸರ ಭಾವಚಿತ್ರ ಪೂಜೆ
ಗದಗ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ನ. 20ರ ಬೆಳಗ್ಗೆ 9.30ಕ್ಕೆ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಭಾವಚಿತ್ರ ಪೂಜೆ, ಕಾಲೇಜಿನ ಉಪನ್ಯಾಸಕ ಎಸ್.ಆರ್. ವಾಲ್ಮೀಕಿ ಅವರು ಕನಕದಾಸರ ಕುರಿತು ಉಪನ್ಯಾಸ ನೀಡುವರು. ಅತಿಥಿಗಳಾಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಆಗಮಿಸುವರು.
ಇಂದು ಕನಕ ಜಯಂತಿ
ನರಗುಂದ: ದಾಸ ಶ್ರೇಷ್ಠ ಕನಕದಾಸರ 553ನೇ ಜಯಂತಿ ನ. 20ರಂದು ಜರುಗಲಿದೆ. ಬೆಳಗ್ಗೆ 9ಕ್ಕೆ ಪಟ್ಟಣದ ಕನಕ ವೃತ್ತದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಜರುಗಲಿದ್ದು, ಮೆರವಣಿಗೆಗೆ ಶಾಸಕ ಬಿ.ಆರ್. ಯಾವಗಲ್ಲ ಚಾಲನೆ ನೀಡುವರು. ನಂತರ 11ಕ್ಕೆ ಪಟ್ಟಣದ ಪುರಸಭೆ ಆವರಣದಲ್ಲಿ ಕಾರ್ಯಕ್ರಮ ಜರುಗಲಿದ್ದು, ಸಂಸದ ಪಿ.ಸಿ. ಗದ್ದಿಗೌಡರ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಾಧ್ಯಕ್ಷ ಗುರುದೇವಿ ಶಾನವಾಡಮಠ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ಶಾಂತಾ ದಂಡಿನ, ಎಂ.ಎಂ. ಮುಳ್ಳೂರ, ದ್ಯಾಮಣ್ಣ ಸವದತ್ತಿ, ಉಪನ್ಯಾಸಕ ಎಚ್.ಬಿ. ಅಸೂಟಿ, ತಹಸೀಲ್ದಾರ್ ಬಿ.ಬಿ. ನೀಲಣ್ಣವರ, ಪುರಸಭೆ ಅಧಿಕಾರಿ ಎಸ್. ರಾಜಶೇಖರ ಮುಂತಾದವರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಕಾರ್ಯಕ್ರಮ
ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನ. 20ರ ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಆದಿಶಕ್ತಿ ಜಾನಪದ ಕಲಾ ತಂಡ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ಎಂ.ಆರ್. ಪಾಟೀಲ, ದ್ಯಾಮಣ್ಣ ಮೆಗಲಮನಿ, ಗ್ರಾಪಂ ಸದಸ್ಯರು ಭಾಗವಹಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಕನಕ ಜಯಂತಿ
ಮುಂಡರಗಿ: ತಾಲೂಕು ಆಡಳಿತ ಮುಂಡರಗಿ, ವಿವಿಧ ಸಮುದಾಯಗಳ ಸಂಘಟನೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ ಭಕ್ತ ಕನಕದಾಸರ 526ನೇ ಜಯಂತ್ಯುತ್ಸವನ್ನು ನ. 20ರಂದು ಪಟ್ಟಣದ ಪುರಸಭೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಕೋಟೆಭಾಗದ ಆಂಜನೇಯ ದೇವಸ್ಥಾನದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ನಂತರ ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ಜರುಗಲಿದ್ದು, ರೋಣ ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸುವರು. ನಾಡೋಜ. ಡಾ. ಅನ್ನದಾನೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು.   ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ತಾಪಂ ಅಧ್ಯಕ್ಷ ತಾರೂಬಾಯಿ ಚವ್ಹಾಣ, ಉಪಾಧ್ಯಕ್ಷೆ ಅಕ್ಕಮಹಾದೇವಿ ಹಾರೋಗೇರಿ, ಜಿಪಂ ಸದಸ್ಯ ಬೀರಪ್ಪ ಬಂಡಿ, ಹೇಮಗಿರೀಶ ಹಾವಿನಾಳ, ಕಸ್ತೂರೆವ್ವ ಪಾಟೀಲ, ಪುರಸಭೆ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಭಕ್ತ ಕನಕದಾಸ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ಎಸ್.ಆರ್. ಶಿರಕೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಸಿ. ಹೆಬ್ಬಾಳ ನಿಧನ
ಮುಂಡರಗಿ: ಮುಂಡರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಣ್ಯ ವರ್ತಕರು, ರಡ್ಡಿ ಸಮಾಜದ ಮುಖಂಡ ಬಿ.ಸಿ. ಹೆಬ್ಬಾಳ (55) ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಈರ್ವರು ಪುತ್ರಿಯರು, ಸಹೋದರ, ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದರು.
ಸಂತಾಪ:  ಇವರ ನಿಧನಕ್ಕೆ ನಾಡೋಜ ಡಾ. ಅನ್ನದಾನ ಶ್ರೀಗಳು, ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಶಿವಕುಮಾರಗೌಡ ಪಾಟೀಲ, ಹೇಮಂತಗೌಡ ಪಾಟೀಲ, ನಾಗಪ್ಪ ಶೇಡದ, ಕೊಟ್ರೇಶ ಅಂಗಡಿ, ಹೇಮಗಿರೀಶ ಹಾವಿನಾಳ, ನಾರಾಯಣಪ್ಪ ಇಲ್ಲೂರ, ದೊಡ್ಡಬಸಣ್ಣ ಕಾಲವಾಡ, ಈಶ್ವರಪ್ಪ ಹಂಚಿನಾಳ, ಪಾಲಾಕ್ಷಿ ಗಣದಿಣ್ಣಿ, ಧ್ರುವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ಎಸ್.ವಿ. ಪಾಟೀಲ, ಬಸವಣ್ಣೆಪ್ಪ ಶಿವಶೆಟ್ಟರ, ಪವನ್ ಜೋಪ್ರಾ, ಆನಂದಗೌಡ ಪಾಟೀಲ, ಪಾರಸ್‌ಮಲ್ ಮೆಹೆತಾ, ಡಾ. ಬಿ.ಎಸ್. ಮೇಟಿ, ಅಮೀನ್‌ಸಾಬ ಬಿಸನಳ್ಳಿ, ವೀರಣ್ಣ ಮೇಟಿ, ಮುಧುಕೇಶ ಬೀಡನಾಳ, ವರ್ತಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಅಪಘಾತ: ವ್ಯಕ್ತಿ ಸಾವು
ಗದಗ: ನಗರದ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಭವನದ ಬಳಿ ಮಂಗಳವಾರ ಸಂಜೆ ಅಪರಿಚಿತ ಲಾರಿಯೊಂದು ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. ಮೃತನನ್ನು ಫಕ್ಕೀರೇಶ (41) ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳಪೆ ಬಿಟಿ ಹತ್ತಿ ವಿತರಣೆ: ರೈತರ ಪ್ರತಿಭಟನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.