ಕನಕದಾಸರ ತತ್ವಾದರ್ಶ ಸಾರ್ವಕಾಲಿಕ: ಜಾಲಿಹಾಳ
ಗಜೇಂದ್ರಗಡ: ಸರಳ ಸಾಹಿತ್ಯ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಅನಿಷ್ಠತೆ ತೂಲಗಿಸಿ, ಜನರಲ್ಲಿ ಜಾಗೃತಿಗೊಳಿಸಿದ ದಾಸಶ್ರೇಷ್ಠ ಕನಕದಾಸರ ತತ್ವಾದರ್ಶ ಸಾರ್ವಕಾಲಿಕ ಎಂದು ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಹೇಳಿದರು. ಅವರು ಸ್ಥಳೀಯ ಪುರಸಭೆಯ ಭವನದಲ್ಲಿ ಬುಧವಾರ ಕನಕದಾಸರ ಜಯಂತಿ ಪ್ರಯುಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕುಲ, ಕುಲ, ಕುಲವೆಂದು ಹೊಡೆದಾಡಿ ಸಮಾಜದಲ್ಲಿ ಸಂಘರ್ಷಕ್ಕೆ ರಹದಾರಿಯಾಗಿಸುವ ಬದಲು ಸಕಲ ಜೀವಾತ್ಮರೂ ಒಂದೇ ಎನ್ನುವುದನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ದಾಸ ಶ್ರೇಷ್ಠರಲ್ಲಿ ಕನಕದಾಸರು ಅಗ್ರ ಗಣ್ಯರು. ಇಂತಹ ಮಹಿಮರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಬಾಳಿದಾಗ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದರು. ಮುಖ್ಯಾಧಿಕಾರಿ ಕೆ.ಐ. ನಾಗನೂರ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ಹಾಲುಮತ ಸಮಾಜ ಮುಖಂಡ ಬಸವರಾಜ ವದೆಗೋಳ, ಶರಣಪ್ಪ ರೇವಡಿ, ಪ್ರಭು ಚವಡಿ, ಎಂ.ಎಸ್. ಹಡಪದ, ಶಿವಪ್ಪ ಸಂಕನೂರ, ವಿಜಯಕುಮಾರ ರಾಯಬಾಗಿ, ಬುಡ್ಡಪ್ಪ ಮೂಲಿಮನಿ, ಕಳಕಪ್ಪ ಗುಳೇದ, ವಿಜಯಲಕ್ಷ್ಮೀ ಚಟ್ಟೇರ, ಮಕ್ತುಂಭಿ ಹಣಗಿ, ಶಾರದಾ ರಾಠೋಡ, ಸುಜಾತಾ ಚುಂಚಾ, ಮುತ್ತಣ್ಣ ಚಟ್ಟೇರ, ವಿರೂಪಾಕ್ಷಪ್ಪ ಕುಂಬಾರ, ಸಿ.ಕೆ. ಕುಲಕರ್ಣಿ, ಪಿ.ಎನ್. ದೊಡ್ಡಮನಿ, ಮಹೇಶ ನಿಡಶೇಶಿ, ಬಸವರಾಜ ಬಳಗಾನೂರ, ಸಿ.ಡಿ. ದೊಡ್ಡಮನಿ ಉಪಸ್ಥಿತರಿದ್ದರು.
ವಿವಿಧೆಡೆ ಆಚರಣೆ: ಪಟ್ಟಣದ ಎಸ್.ಎಂ ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆ, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ, ಸರ್ಕಾರಿ ಉರ್ದು ಪ್ರೌಢಶಾಲೆ, ಸರ್ಕಾರಿ ಪಿಯುಸಿ, ಪದವಿ, ತಾಂತ್ರಿಕ, ಮಹಾವಿದ್ಯಾಲಯ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕನಕದಾಸರ 526ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಂಕಿಗೆ 5 ಬಣವೆ ಆಹುತಿ
ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದ ಹರ್ತಿ ರಸ್ತೆಯಲ್ಲಿ ಐದು ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ. ಸುಮಾರು ರು. 1.50 ಲಕ್ಷ ಮೌಲ್ಯದ ಮೇವಿನ ಬಣವಿಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ತಂಡ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

