ಗದಗ

ಎಸ್‌ಡಿಎಂಸಿ ರಚನೆ

Published On :

ನರೇಗಲ್ಲ: ಸಮೀಪದ ಕೋಚಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಎಸ್‌ಡಿಎಂಸಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಅಂದಾನಯ್ಯ ಮಾಲಗಿತ್ತಿಮಠ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಈರಮ್ಮ ಅಮಾತಿಗೌಡ್ರ ಆಯ್ಕೆಯಾದರು. ಸದಸ್ಯರಾಗಿ ಶಂಕರಗೌಡ ಅಯ್ಯನಗೌಡ್ರ, ರಾಜೇಸಾಬ ನದಾಫ, ಬಸವರಾಜ ಮಾಲಗಿತ್ತಿಮಠ, ರುದ್ರಯ್ಯ ಬಳಗೋಡಮಠ, ಬಸನಗೌಡ ಹಿರೇಗೌಡ್ರ, ಹುಚ್ಚುಸಾಬ್ ಹರ್ಲಾಪುರ, ರಮಜಾನಬಿ ಬಂಕಾಪುರ, ಶಕುಂತಲಾ ಅಯ್ಯನಗೌಡ್ರ, ಉಮಾದೇವಿ ಮಾಲಗಿತ್ತಿಮಠ, ಬಸಮ್ಮ ರಡ್ಡೇರ, ಕಸ್ತೂರೆವ್ವ ಅಯ್ಯನಗೌಡ್ರ ಆಯ್ಕೆಯಾದರು. ಪಪಂ ಮಾಜಿ ಸದಸ್ಯ ವಿ.ಕೆ. ರಡ್ಡೇರ, ಪಪಂ ಸದಸ್ಯ ಸುನೀಲ ಬಸವರಡ್ಡೇರ, ಆರ್.ವಿ. ಅಯ್ಯನಗೌಡ್ರ, ಎಸ್.ಎಸ್. ಅಯ್ಯನಗೌಡ್ರ, ಶಂಕರಗೌಡ ರಡ್ಡೇರ, ವಿ.ಬಿ. ಕಣಗಿನಹಾಳಮಠ, ಕ್ಲಷ್ಟರ ಸಿಆರ್‌ಪಿ ಕೆ.ಎಸ್. ಅಣಗೌಡ್ರ, ಮುಖ್ಯೋಪಾಧ್ಯಾಯ ಎ.ಎಸ್. ಮಲಕಸಮುದ್ರಮಠ ಮುಂತಾದವರು ಉಪಸ್ಥಿತರಿದ್ದರು.
ಇಂದಿರಾ ಗಾಂಧಿ ಜನ್ಮದಿನಾಚರಣೆ
ಗದಗ: ಗದಗ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈಚೆಗೆ ಗದಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ ಆಚರಿಸಲಾಯಿತು. ಗದಗ-ಬೆಟಗೇರಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರಣ್ಣ ಬಳಗಾನೂರ, ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ, ಪ್ರಧಾನ ಕಾರ್ಯದರ್ಶಿ ಬಿ.ಬಿ. ಅಸೂಟಿ, ಕಾಂಗ್ರೆಸ್ ಉಪಾಧ್ಯಕ್ಷ ಸುಜಾತಾ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಜಿ.ಎಂ. ದಂಡಿನ, ಚೆನ್ನವೀರ ಮಳಗಿ, ನಗರಸಭೆ ಸದಸ್ಯ ಅನಿಲ ಗರಗ, ಗದಗ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಶೋಕ ಮಂದಾಲಿ, ಕೆಪಿಸಿಸಿ ಅಲ್ಪಸಂಖ್ಯಾತರ ಜಂಟಿ ಕಾರ್ಯದರ್ಶಿ ಉಮರ್ ಫಾರುಖ ಹುಬ್ಬಳ್ಳಿ, ಗದಗ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿಕುಮಾರ ರಡ್ಡಿ        ಮತ್ತಿತರರು ಉಪಸ್ಥಿತರಿದ್ದರು.
ಸ್ವದೇಶಿ ಶಿಕ್ಷಣ ಅವಶ್ಯ
ನರೇಗಲ್ಲ: ಅತ್ಯಂತ ಅಮೂಲ್ಯ ಹಾಗೂ ವೈಜ್ಞಾನಿಕ ತಳಹದಿ ಹೊಂದಿದ್ದ ಭಾರತೀಯ ಶಿಕ್ಷಣ ಪದ್ದತಿಯಲ್ಲಿ ನಮ್ಮ ಸಂಸ್ಕೃತಿಗೆ ಒಗ್ಗದಂತಹ ಶೈಕ್ಷಣಿಕ ನೀತಿಯನ್ನು ನಾವು ಈಗ ಅಳವಡಿಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯೆಂದು ವಿಶ್ವ ಹಿಂದೂ ಪರಿಷತ್‌ನ ಮಂಜುನಾಥ ಹೆಗಡೆ ವಿಷಾದ ವ್ಯಕ್ತಪಡಿಸಿದರು. ಅವರು ಈಚೆಗೆ ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರ 125ನೇ ಜನ್ಮ ದಿನಾಚರಣೆ ನಿಮಿತ್ತ ಆಚರಿಸಲಾದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮಾತನಾಡಿದರು. ಅಶೋಕ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಗುರುಮಾತೆ ಆರ್.ಬಿ. ಕೀರ್ತಿಗೌಡರ, ಎನ್.ಆರ್. ಬಡಿಗಣ್ಣವರ, ಈರಮ್ಮ ಶಿಳ್ಳಿನ, ಭಾಗ್ಯಶ್ರೀ ಕುಲಕರ್ಣಿ, ವಿ.ವಿ. ನಿಟಾಲಿ, ಮುತ್ತಣ್ಣ ಚಿಗರಿ, ವೀರೇಶ ಕಲಾಲಬಂಡಿ ಇದ್ದರು. ಯಶೋದಾ ಹೊಂದಗಲ್ ಸ್ವಾಗತಿಸಿದರು. ಜೆ.ವಿ. ಕೆರಿಯವರ ನಿರೂಪಿಸಿದರು. ಜಿ.ಜಿ. ಪಾರ್ವತಿಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.