ಗದಗ

ಸುದ್ದಿ ಸಂಕ್ಷೇಪ

Published On :

ಭೂಮಿಪೂಜೆ
ಮುಂಡರಗಿ: ತಾಲೂಕಿನ ಬರದೂರ ಗ್ರಾಮದ ಎನ್.ಎನ್. ಗೋಡಿ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಸದಸ್ಯ ದೇವಪ್ಪ ಗದಗ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಪಾಠದ ಜತೆಗೆ ಆಟವೂ ಅಷ್ಟೇಮುಖ್ಯ. ಅಂತಹ ಆಟಕ್ಕೆ ಬೇಕಾಗುವ ಮೈದಾನವನ್ನು ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡುವ ಮೂಲಕ ಮಕ್ಕಳಿಗೆ ಉತ್ತಮವಾದ ಆಟದ ಮೈದಾನವನ್ನು ಒದಗಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ನಾಗವ್ವ ಉಪ್ಪಾರ, ರತ್ನವ್ವ ತೋಟಪ್ಪನವರ, ಗೌಸುಸಾಬ ದೋಟ್ಯಾಳ, ಮಲ್ಲಣ್ಣ ಗೌರಪುರ, ಜಯಣ್ಣ ನಾಡಗೌಡ್ರ, ಮಹಾದೇವಪ್ಪ ತೋಟಪ್ಪನವರ, ಸಂತೋಷ ಗೋಡಿ, ಪ್ರಕಾಶ ಸಜ್ಜನರ, ಬಸಪ್ಪ ಮೇಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಈಶ್ವರಪ್ಪ ಗೋಡಿ, ಮುಖ್ಯೋಪಾಧ್ಯಾಯ ಆರ್.ಬಿ. ಮುಳ್ಳೊಳ್ಳಿ, ತಾಲೂಕು ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಎಲ್.ಬಿ. ಹುಡೇದ, ಪಿಡಿಒ ಎಸ್.ಎಸ್. ಕವಲೂರ ಮುಂತಾದವರು ಉಪಸ್ಥಿತರಿದ್ದರು.
ಇಂದು ಆಯ್ಕೆ
ಗದಗ:  ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ, ಗದಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನ. 23ರ ಸಂಜೆ 4 ಗಂಟೆಗೆ ನಗರದ ಮುಳಗುಂದ ನಾಕಾದಲ್ಲಿರುವ ಹೊರಟ್ಟಿ ಸಭಾಭವನದಲ್ಲಿ ಗದಗ ಶಹರ ಹಾಗೂ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿ ಡಾ. ಬಸವರಾಜ ಧಾರವಾಡ, ಎಂ.ಎಸ್. ಕೊಟಗಿ ಉಪಸ್ಥಿತರಿರುವರು. ಕಾರಣ ಎಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಸಭೆಗೆ ಹಾಜರಿದ್ದು, ಸಂಘದ ಪದಾಧಿಕಾರಿಗಳು ಆಯ್ಕೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ.ಎಸ್. ಚಿನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ನೌಕರರ ಸಭೆ
ಶಿರಹಟ್ಟಿ:  ಪಟ್ಟಣದ ಬೆಳ್ಳಟ್ಟಿ ರಸ್ತೆಯಲ್ಲಿರುವ ಬಿ.ಆರ್.ಸಿ. ಪಕ್ಕದ ಡಾ. ಅಂಬೇಡ್ಕರ್ ಭವನದಲ್ಲಿ ನ. 24ರ ಬೆಳಗ್ಗೆ 11ಕ್ಕೆ ತಾಲೂಕು ಘಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸಂಘಟನಾ ಸಭೆ ಕರೆಯಲಾಗಿದೆ. ಸಭೆಗೆ ಜಿಲ್ಲಾ ಅಧ್ಯಕ್ಷ ಎಸ್.ಎನ್. ಬಳ್ಳಾರಿ ಹಾಗೂ ಪದಾಧಿಕಾರಿಗಳು ಆಗಮಿಸುವರು. ತಾಲೂಕಿನ ಸಮಸ್ತ ಎಸ್ಸಿ, ಎಸ್ಟಿ ನೌಕರ ಬಾಂಧವರು ಸಭೆಗೆ ಆಗಮಿಸಿ ತಮ್ಮ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಬೇಕೆಂದು ಸಂಘಟನೆಯ ಪರವಾಗಿ ಎಸ್.ಬಿ. ಸರ್ಜಾಪುರ ತಿಳಿಸಿದ್ದಾರೆ.
ಹನುಮವ್ವ ನಿಧನ
ಮುಳಗುಂದ:  ಪಟ್ಟಣದ ಕುರುಬಗೇರಿ ಓಣಿಯ ನಿವಾಸಿ ಹನುಮವ್ವ ಮಲ್ಲಪ್ಪ ಶಿರಹಟ್ಟಿ (76) ಗುರುವಾರ ರಾತ್ರಿ ನಿಧನರಾದರು. ಮೃತರಿಗೆ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗ ಇದೆ. ಇವರ ನಿಧನಕ್ಕೆ ಗ್ರಾ.ಸ. ಸಂಘದ ಅಧ್ಯಕ್ಷ ಎಂ.ಎ. ಬಟ್ಟೂರ, ಸಂಘದ ನಿರ್ದೇಶಕರು ಹಾಗೂ ಅಂಚೆ ಕಚೇರಿ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.