ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 24
ಶೈಕ್ಷಣಿಕ ಜ್ವಲಂತ ಸಮಸ್ಯೆಗಳ ಪರಿಹಾರ ಹಾಗೂ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ತಾಲೂಕು ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂ.ಕೆ. ಲಮಾಣಿ ಮಾತನಾಡಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಅನುದಾನರಹಿತ ಅವಧಿಯ ಸೇವೆಯನ್ನು ಎಲ್ಲ ಸೌಲಭ್ಯಗಳಿಗೆ ಪರಿಗಣಿಸುವಂತೆ ನ್ಯಾಯಾಲಯದ ಆದೇಶವಾಗಿದ್ದು, ಕೂಡಲೇ ಸೇವಾ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.
2006ರ ನಂತರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕವಾದ ಹಾಗೂ ಅನುದಾನಕ್ಕೊಳಪಟ್ಟ ಸಿಬ್ಬಂದಿಗೆ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಅಂಶದಾಯಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ವಿಸ್ತರಿಸಿ ಆಡಳಿತ ಮಂಡಳಿಗಳು ನೀಡಬೇಕಾದ ಶೇ. 10ರ ವಂತಿಗೆಯನ್ನು ಸರ್ಕಾರವೇ ಭರಿಸಬೇಕು.
ಸರ್ಕಾರಿ ಮತ್ತು ಖಾಸಗಿ ಶಾಲೆಗಳೆಂಬ ತಾರತಮ್ಯ ಹೋಗಲಾಡುವುದರೊಂದಿಗೆ ಯಾವುದೇ ನೌಕರ ತನ್ನ ಸೇವಾ ಅವಧಿಯಲ್ಲಿ ಮರಣ ಹೊಂದಿದರೆ ಅನುಕಂಪದ ಆಧಾರದ ಮೇಲೆ ತಕ್ಷಣ ನೌಕರಿ ಕೊಡಬೇಕು. ಸರ್ಕಾರಿ ನೌಕರಿಗೆ ನೀಡುವ ವೈದ್ಯಕೀಯ ಭತ್ಯೆಯನ್ನು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೂ ನೀಡಬೇಕು. ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳು ಶಾಶ್ವತ ಅನುದಾನರಹಿತ ಶಾಲೆಗಳಾಗಿದ್ದು, ಇಲ್ಲಿನ ಸಿಬ್ಬಂದಿಗೆ ಸೇವಾ ಭದ್ರತೆ ನೀಡುವ ಬಗ್ಗೆ ಕಾನೂನು ರೂಪಿತವಾಗಿದ್ದು, ಸೇವಾ ಸೌಲಭ್ಯ ನೀಡುತ್ತಿಲ್ಲ.
ಹುದ್ದೆಗೆ ನಿಗದಿ ಪಡಿಸಿದ ಮೂಲ ವೇತನವನ್ನು ಬಟವಡೆ ಮಾಡಬೇಕು. ಈ ಕೂಡಲೇ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ನಂತರ ಶಿರಸ್ತೇದಾರ್ ಎನ್.ಸಿ. ನದಾಫ್ಗೆ ಮನವಿ ಸಲ್ಲಿಸಲಾಯಿತು.
ಎನ್.ಬಿ. ಕಲಾವಂತ, ಎನ್.ಆರ್. ಕುಲಕರ್ಣಿ, ವಿ.ವಿ. ಅಮರಶೆಟ್ಟರ, ಡಿ.ಎಫ್. ಹಿತ್ತಲಮನಿ, ಎಸ್.ಎಂ. ಅಂಗಡಿ, ಪಿ.ಜಿ. ಯಲವಗಿ, ಎಂ.ಎ. ಪಲ್ಲೇದ, ಪಿ.ಪಿ. ನಿರ್ವಾಣಿ, ಪಿ.ಬಿ. ಮುಳ್ಳಳ್ಳಿ, ಎಂ.ಎನ್. ಗೋನಾಳ, ಎಫ್.ಎಸ್. ಮಠದ, ಎಸ್.ಎಂ. ಹೊಸಮನಿ, ವೈ.ಎಸ್. ಪಾಶಣ್ಣವರ, ಎಂ.ಎಂ. ನದಾಫ್, ಪಿ.ವಿ. ಹೊಸೂರ, ಎಸ್.ಎನ್. ಕುಂದಿ, ಪಿ.ಎನ್. ಕುಲಕರ್ಣಿ, ವಿಶಾಲಾಕ್ಷಿ ದೇಶಪಾಂಡೆ, ಎನ್.ಆರ್. ಉಡಚಗೊಂಡ, ಎಸ್.ಎಸ್. ಪಾಟೀಲ, ಜಿ.ಕೆ. ಕರಕಣ್ಣವರ, ಎಫ್.ಎಂ. ಹಳ್ಳೆಮ್ಮನವರ, ವಿ.ಪಿ. ಮನಸೂರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

