ಗದಗ

ಮಲ್ಲಿಗೆ ಹೂ ಬೆಳೆ ಲಾಭದಾಯಕ

Published On :

ಗಜೇಂದ್ರಗಡ: ಕಡಿಮೆ ಖರ್ಚಿನಲ್ಲಿ ಬೆಳೆಯುವ ಮಲ್ಲಿಗೆ ಹೂವಿನ ಬೆಳೆ ಲಾಭದಾಯಕ ಬೆಳೆಯಾಗಿದೆ. ಈ ನಿಟ್ಟಿನಲ್ಲಿ ರೈತ ಮಹಿಳೆಯರು ತೋಟದಲ್ಲಿ ಮಲ್ಲಿಗೆ ಹೂ ಬೆಳೆದು ಆರ್ಥಿಕ ಸಬಲರಾಗಿ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಲಯ ಯೋಜನಾಧಿಕಾರಿ ಕೃಷ್ಣ ಟಿ. ಹೇಳಿದರು.
ಸ್ಥಳೀಯ ಗೊಂಗಡಶೆಟ್ಟಿಮಠರ ಹೂ ತೋಟದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಮಲ್ಲಿಗೆ ಹೂ ಬೆಳೆಯುವ ರೈತ ಕ್ಷೇತ್ರ ಪಾಠಶಾಲೆಯಲ್ಲಿ ಮಾತನಾಡಿದರು.
ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಬೆಳೆಗಳ ಜತೆಗೆ ಚೆಂಡು, ಗುಲಾಬಿ, ಮಲ್ಲಿಗೆ, ಸಂಪಿಗೆ, ಚೈನಾ ಆಸ್ಟರ್ನಂತಹ ಆಧುನಿಕ ತಳಿಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಈ ದಿಸೆಯಲ್ಲಿ ರೈತಾಪಿ ಮಹಿಳೆಯರು ಅಲ್ಪ ಖರ್ಚು ಮಾಡಿ, ಅಧಿಕ ಲಾಭ ತರುವ ವಿವಿಧ ತರಹದ ಹೂ ಬೆಳೆಯಲು ಮುಂದಾಗಿ ಎಂದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ ಭಾಂಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿ ಪರ ರೈತ ಬಸವರಾಜ ಗೊಂಗಡಶೆಡ್ಡಿಮಠ ಅವರು ಮಲ್ಲಿಗೆ ಹೂವಿನ ಕುರಿತು ಮಾಹಿತಿ ನೀಡಿದರು. ಗಜೇಂದ್ರಗಡ ವಲಯ ಮೇಲ್ವಿಚಾರಕ ಲೋಹಿತ ಎಚ್. ಹುಸೇನಬಿ ಕಟ್ಟಿಮನಿ, ಗೀತಾ ಮೂಲಿಮನಿ, ಕಾವ್ಯಾ ಗೊಂಗಡಶೆಟ್ಟಿಮಠ, ಶಿಲ್ಪಾ ತಳವಾರ, ಬಿಬಿಜಾನ ನದಾಫ, ಕಾಶಿಬಾಯಿ ದುಮ್ಮಾಳ, ರುದ್ರಪ್ಪ ಹೆಬ್ಬಳ್ಳಿ, ಶಿಲ್ಪಾ ಟಿ. ಶೋಭಾ, ಶಿಲ್ಪಾ ಜಾನಾಯಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.