ಸಾಹಿತ್ಯ, ಪತ್ರಿಕೆ ಪ್ರಭಾವಿ ಮಾಧ್ಯಮ
ಕನ್ನಡಪ್ರಭ ವಾರ್ತೆ, ಗದಗ, ನ. 24
ಸಮಾಜದಲ್ಲಿ ಶಾಂತಿ ನೆಲೆಸಲು ಸಾಹಿತ್ಯ ಮತ್ತು ಪತ್ರಿಕೆಗಳು ಪ್ರಭಾವಿ ಮತ್ತು ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎಂದು ಗದಗ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ ಅಭಿಪ್ರಾಯಪಟ್ಟರು.
ಇತ್ತೀಚಿಗೆ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಶಾಂತಿಗಾಗಿ ಸಾಹಿತ್ಯ ಕಾರ್ಯಕ್ರಮದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿದರು.
ಸದೃಢ ಸಮಾಜ, ನಾಡು ನಿರ್ಮಾಣದಲ್ಲಿ ಸಾಹಿತ್ಯ ಮತ್ತು ಪತ್ರಿಕೆ ಪ್ರಭಾವಿ ಮಾಧ್ಯಮಗಳು. ಈ ಮಾಧ್ಯಮಗಳು ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿವೆ. ಸಾಹಿತ್ಯ ಅನಾವರಣಗೊಳ್ಳುವ ಮೂಲಕ ಶಾಂತಿ, ಸುವ್ಯವಸ್ಥೆ, ಸುಂದರ ಸಮಾಜವನ್ನೂ ನಿರ್ಮಿಸಿವೆ. ಟಿವಿ ಹಾವಳಿಯಿಂದಾಗಿ ನಮ್ಮ ಮೂಲ ಜನಪದ ಸೊಗಡು ನಶಿಸುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, ಭಾರತೀಯ ಸಂಸ್ಕೃತಿಯನ್ನು ಸಮೃದ್ಧಿಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯದ ಮೂಲಕ ಸಂಸ್ಕೃತಿಯನ್ನು ಇಮ್ಮಡಿಗೊಳಿಸುವ, ವಿವಿಧತೆಯಲ್ಲಿ ಏಕತೆಯನ್ನು ರೂಪಿಸುವ ಸಾಹಿತ್ಯವಿಂದು ರೂಪುಗೊಳ್ಳಬೇಕಿದೆ ಎಂದರು.
ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ, ಜಯಶ್ರೀ ಪಾಟೀಲ ಹಾಗೂ ಶೈಲಜಾ ಕವಲೂರ ಹಾಗೂ ಅಧ್ಯಕ್ಷತೆ ವಹಿಸಿದ್ದ ತಾಹಿರಾಬೇಗಂ ಶಿರಹಟ್ಟಿ ಮಾತನಾಡಿದರು. ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಕಸ್ತೂರಿ ಹಿರೇಗೌಡರ, ಡಿ.ವಿ. ಬಡಿಗೇರ, ವಿವೇಕಾನಂದಗೌಡ ಪಾಟೀಲ, ಪ್ರಾ. ಕೆ.ಎಚ್. ಬೇಲೂರ, ವಿದ್ಯಾಧರ ದೊಡ್ಡಮನಿ, ರವಿಕುಮಾರ ರೆಡ್ಡಿ, ಶೇಖಣ್ಣ ಕವಳಿಕಾಯಿ, ವೀರಣ್ಣ ಬೇವಿನಮರದ, ಎಂ.ಎಸ್. ಚಿನ್ನೂರ, ಮಹೇಶ್ವರ ಶ್ರೀಗಳು, ಅಂದಾನಪ್ಪ ವಿಭೂತಿ, ಕೆ.ಐ. ಶೇಖ, ಎ.ಎಸ್. ಖವಾಸ, ಮುನ್ನಾ ಕಲ್ಮನಿ, ಎಂ.ಎನ್. ಮಕಾನದಾರ, ಜುನೇದ ಉಮಚಗಿ, ಅ.ದ. ಕಟ್ಟಿಮನಿ, ಚವಡಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

