ಗದಗ

ಗದಗ-ಗದ್ವಾಲ ರೇಲ್ವೆ ಮಾರ್ಗ ಕಾರ್ಯಗತಗೊಳಿಸಿ

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ನ. 25
ಗದಗ-ಗದ್ವಾಲ ರೈಲು ಮಾರ್ಗ ಕಾರ್ಯಗತಗೊಳಿಸಲು ಆಗ್ರಹಿಸಿ ಭಾನುವಾರ ನರೇಗಲ್ಲ ಹಾಗೂ ಹೋಬಳಿ ಜನತೆ ರೋಣ ಶಾಸಕ ಜಿ.ಎಸ್. ಪಾಟೀಲಗೆ ಮನವಿ ಸಲ್ಲಿಸಿದರು.
ಗದಗ-ವಾಡಿ ರೈಲು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಸಿ.ವಿ. ವಂಕಲಕುಂಟಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ಸರ್ಕಾರಿ ಯೋಜನೆಗಳಿಂದ ವಂಚಿತವಾಗಿರುವ ನರೇಗಲ್ಲ ಪಟ್ಟಣ ಸುಮಾರು ಅರ್ಧ ಶತಮಾನದ ಹಿಂದೆ ಕೇಂದ್ರ ಸರ್ಕಾರ ಗದಗ-ಗದ್ವಾಲ ರೈಲು ಮಾರ್ಗವನ್ನು ನರೇಗಲ್ಲ, ಗಜೇಂದ್ರಗಡ, ಇಲಕಲ್ಲ ಮಾರ್ಗವಾಗಿ ಸರ್ವೆ ಕಾರ್ಯ ಮಾಡಿದ್ದು, ಅದು ಯಾವುದೋ ಕಾರಣದಿಂದ ಕಾರ್ಯಗತವಾಗಲಿಲ್ಲ. ಆದರೆ, ಇತ್ತೀಚೆಗೆ ಮಂಜೂರಾದ ಗದಗ ವಾಡಿ ಮಾರ್ಗ ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.
2012ರಲ್ಲಿ ಕೇಂದ್ರ ಸರ್ಕಾರವು ಗದಗ-ವಾಡಿ ಹೊಸ ರೈಲು ಮಾರ್ಗವನ್ನು ಮಂಜೂರ ಮಾಡಿದೆ. ಈ ಮಾರ್ಗವು ಗದಗ ನರೇಗಲ್ಲ, ಗಜೇಂದ್ರಗಡ, ಇಲಕಲ್ಲ ಮಾರ್ಗವಾಗಿ ವಾಡಿ ತಲುಪಬೇಕಾಗಿತ್ತು. ಆದರೆ, ಈ ಮಾರ್ಗವನ್ನು ಗದಗ, ಬನ್ನಿಕೊಪ್ಪ, ಕುಕನೂರ, ಯಲಬುರ್ಗಾ ಮಾರ್ಗವಾಗಿ ವಾಡಿ ತಲುಪುವಂತೆ ಬದಲಾಯಿಸಲಾಯಿದೆ. ಅದಕ್ಕಾಗಿ ನರೇಗಲ್ಲ, ಗಜೇಂದ್ರಗಡ ಹಾಗೂ ಇಲಕಲ್ಲ ಭಾಗದ ಜನತೆ ಉಗ್ರ ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಇದೇ ಮಾರ್ಗವಾಗಿ ರೈಲು ಯೋಜನೆ ಕಾರ್ಯಗತವಾಗುವಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನರೇಗಲ್ ಜನತೆಯ ಒತ್ತಾಸೆಯಾಗಿರುವ ಗದಗ-ವಾಡಿ ರೈಲು ಮಾರ್ಗ ಚಾಲನೆಗೆ ಶಾಸಕರು ಒತ್ತಾಯಿಸುವ ಮೂಲಕ ನರೇಗಲ್ಲ ಜನತೆಯ ಬಹುದಿನಗಳ ಆಸೆಗೆ ಬೆಂಬಲವಾಗಿರಬೇಕೆಂದರು. ರೋಣ ಶಾಸಕ ಜಿ.ಎಸ್. ಪಾಟೀಲರ ಅನುಪಸ್ಥಿತಿಯಲ್ಲಿ ಅವರ ಸಹೋದರ ಕರ್ನಾಟಕ ಬೀಜ ನಿಗಮ ಮಂಡಳಿ ಸದಸ್ಯ ಹಾಗೂ ನೂತನ ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೇಲ್ವೆ ಹೋರಾಟ ಸಮಿತಿ ಸಂಚಾಲಕ ಅಶೋಕ ಬೇವಿನಕಟ್ಟಿ, ಎ.ವಿ. ಪಾಟೀಲ, ಬಿ.ಕೆ. ಪಾಟೀಲ, ಬಾಳಪ್ಪ ಸೋಮಗೊಂಡ, ಜಿ.ವಿ. ಬೆಲ್ಲದ, ಕಲ್ಮೇಶ ತೊಂಡಿಹಾಳ, ದುಂಡಪ್ಪ ನಾಶಿಪುಡಿ, ಈಶ್ವರ ಬೆಟಗೇರಿ, ನಿಂಗಪ್ಪ ಹೊನ್ನಾಪುರ, ಸುಂಕಪ್ಪ ನವಲಗುಂದ, ಎ.ಎ. ನವಲಗುಂದ, ನಜೀರಅಹಮ್ಮದ ಹದ್ಲಿ, ಪ್ರಭುಸ್ವಾಮಿ ಅರವಟಗಿಮಠ, ಯಲ್ಲಪ್ಪ ಮಣ್ಣೊಡ್ಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.