ಪ್ರೀತಿಯಿಂದ ಜನ ಸೇವೆ ಮಾಡಿ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ನ. 25
ಪ್ರೀತಿ ವಿಶ್ವಾಸದೊಂದಿಗೆ ಜನಸೇವೆ ಮಾಡಿದರೆ ಜನ ನಿಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂದು ಗ್ರಾಮಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಈಚೆಗೆ ಸ್ಥಳೀಯ 21ನೇ ವಾರ್ಡಿನ ಉಸುಗಿನ ಕಟ್ಟಿ ಹತ್ತಿರವಿರುವ ನಗರಸಭೆಯಿಂದ ಎಸ್.ಎಫ್.ಸಿ ಅನುದಾನದಲ್ಲಿ ನಿರ್ಮಿಸಿದ ಸುಲಭ ಶೌಚಾಲಯ ಉದ್ಘಾಟಿಸಿ ಮಾತನಾಡಿದರು.
ಬಡವರ ಬಹುದಿನಗಳ ಕನಸು ನನಸಾಗಿದೆ. ವಯಸ್ಸಾದವರಿಗೆ ಕಬೋಡಿಂಗ್ ಶೌಚಾಲಯ ಮತ್ತು ಮಹಿಳೆಯರಿಗೆ ಬಟ್ಟೆ ಒಗೆಯಲು ಡ್ರೆಸ್ಸಿಂಗ್ ಹಾಲ್ ಕಟ್ಟಿಸಬೇಕೆಂದು ನಗರ ಸಭೆಯ ಅಭಿಯಂತರಿಗೆ ಸಚಿವರು ಸೂಚಿಸಿದರು.
ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷ ರಾಮಣ್ಣ ಪಲದೊಡ್ಡಿ, ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಫಕ್ಕೀರಪ್ಪ ಹೆಬಸೂರ, ನಗರಸಭೆ ಸದಸ್ಯೆ ಕಮಾಲಾ ಹಾದಿಮನಿ, ರುದ್ರಮ್ಮ ಕೆರಕಲ್ಲಮಟ್ಟಿ, ನಿಂಗಪ್ಪ ಪಡಗದ, ಸಿದ್ದಣ್ಣ ಸತ್ಯಪ್ಪನವರ, ನಾಗಪ್ಪ ಗುಗ್ಗರಿ, ಪ್ರಭು ಬುರಬುರೆ, ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ಮುಲ್ಲಾ, ಮಾರ್ತಂಡಪ್ಪ ಹಾದಿಮನಿ, ಅಶೋಕ ಮಂದಾಲಿ, ಪರಪ್ಪ ಕಮತರ, ನಗರಸಭೆಯ ಆಯುಕ್ತ ಮೋಹನ ನಡುವಿನಮನಿ, ಕಾರ್ಯನಿರ್ವಾಹಕ ಅಭಿಯಂತರ ಎಲ್.ಜಿ. ಪತ್ತಾರ, ಎಚ್.ಎ.ಬಂಡಿವಡ್ಡರ, ಎ.ಎ. ಮನಿಯಾರ, ರವಿ ತಡಹಾಳ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

