ಅಭಿವೃದ್ಧಿಗೆ ಸಹಕಾರ ಅಗತ್ಯ: ಮಿಥುನ್ ಪಾಟೀಲ
ರೋಣ: ಸಹಕಾರ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಹಕಾರಿ ಬಂಧುಗಳ ಪರಸ್ಪರ ಸಲಹೆ, ಮಾರ್ಗದರ್ಶನ, ಸಹಕಾರ ಅಗತ್ಯ ಎಂದು ಹಾವೇರಿ ಲೋಕಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಪಟ್ಟಣದ ಅಂಜುಮನ್ ಪ್ರೌಢ ಶಾಲೆ ಆವರಣದಲ್ಲಿ ಈಚೆಗೆ ತಾಜ್ ಅರ್ಬನ್ ಕೋ-ಆಫ್ ಕ್ರೆಡಿಟ್ ಸಹಕಾರ ಸಂಘದ ದಶಮಾನೋತ್ಸವ ಅಂಗವಾಗಿ ತಾಜ್ ಸಹಕಾರ ಸಂಘದ ಸಂಸ್ಥಾಪಕ ಆಡಳಿತ ಮಂಡಳಿ, ಆಡಳಿತ ಸಮಿತಿ ಆಶ್ರಯದಲ್ಲಿ ಹಜ್ ಯಾತ್ರಿಕರು, ಗಣ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಕಾರ ರಂಗದಲ್ಲಿ ಏಷ್ಯಾಖಂಡದಲ್ಲಿ ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದ ಸಹಕಾರಿ ಸಂಘದ ಭೀಷ್ಮ ಸಿದ್ಧನಗೌಡ ಪಾಟೀಲ ಅವರ ಕೊಡುಗೆ ಅಪಾರವಾಗಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಎ.ಎಂ. ಸಾಣಿ ಮಾತನಾಡಿದರು. ಮಿಥುನ್ ಪಾಟೀಲ, ಹಿರಿಯ ಪರ್ತಕರ್ತ ಎ.ಡಿ. ಇಟಗಿ, ಸಂಸ್ಥಾಪಕ ಅಧ್ಯಕ್ಷ ಎ.ಎಂ. ಸಾಣಿ ಹಾಗೂ ಹಜ್ ಯಾತ್ರಿಕರಾದ ಅಬ್ದುಲ್ ರಹಿಮಾನ ಮುಲ್ಲಾ, ಎಸ್.ಜಿ. ಇಲಕಲ್ಲ ಅವರನ್ನು ತಾಜ್ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಫಕೀರಸಾಬ್ ಕೋಲಕಾರ ಅಧ್ಯಕ್ಷತೆ ವಹಿಸಿದ್ದರು. ಎ.ಎಂ. ಹೊಸಮನಿ ಹಾಗೂ ಎಸ್.ಆರ್. ಹರ್ಲಾಪುರ ಉಪನ್ಯಾಸ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

