ಎಸ್ಎಸ್ಕೆ ಸಮಾಜದ ಜನತೆ ಶಿಕ್ಷಣವಂತರಾಗಲಿ
ಗಜೇಂದ್ರಗಡ: ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಎಸ್.ಎಸ್.ಕೆ. ಸಮುದಾಯ ಮಕ್ಕಳ ಮನದಲ್ಲಿ ಅಕ್ಷರ ಜ್ಯೋತಿ ಹೊತ್ತಿಸಿ, ಅನಕ್ಷರತೆ ತೊಲಗಿಸಲು ಮುಂದಾಗಬೇಕೆಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸ್ಥಳೀಯ ಜಗದಂಬಾ ದೇವಸ್ಥಾನ ಸಮುದಾಯ ಭವನದಲ್ಲಿ ಶನಿವಾರ ಎಸ್.ಎಸ್.ಕೆ. ಸಮಾಜ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿಂದೆ ರೋಣ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿದ್ದಾಗ ಲಭಿಸದ ಗೌರವ, ವಿಶ್ವಾಸ, ಪ್ರೀತಿ ಈಗ ತಮ್ಮಿಂದ ಕಾಣುತ್ತಿದ್ದೇನೆ. ಇದಕ್ಕೆ ಚಿರಋಣಿಯಾಗಿರುತ್ತೇನೆ. ಸಮುದಾಯ ಜನ ಸಾಕಷ್ಟು ಬದಲಾಗಿದ್ದಾರೆ. ಸಮಾಜದಲ್ಲಿ ಪರಿವರ್ತನೆ ಆಗಿದೆ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಸ್ವಾವಲಂಬಿ ಬದಕು ಸಾಗಿಸಲು ಸರ್ಕಾರದ ಯೋಜನೆಗಳು ಸಹಕಾರಿಯಾಗಿವೆ. ಆಧುನಿಕ ಯುಗದಲ್ಲಿ ವಿದ್ಯಾರ್ಜನೆಗೆ ಸರ್ಕಾರ ವಿವಿಧ ಮಾರ್ಗಗಳಿವೆ.
ಮಕ್ಕಳಿಗೆ ವಿದ್ಯೆ ಕಲಿಸಲು ಎಸ್.ಎಸ್.ಕೆ. ಸಮುದಾಯ ಮುಂದಾಗಬೇಕು. ಅನಕ್ಷರತೆ ದೇಶದ ಪ್ರಗತಿಗೆ ತೊಡಕಾಗಿದೆ. ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂದರು. ಸ್ವಾತಂತ್ರ್ಯ ಹೋರಾಟಗಾರ ವೆಂಕುಸಾ ಭಾಂಡಗೆ, ಕೆ.ಎಸ್. ಪವಾರ, ವೈದ್ಯ ಶಿವಣಸಾ ದಾನಿ, ವೀರಣ್ಣ ಸೊನ್ನದ, ವೀರಣ್ಣ ಶೆಟ್ಟರ್ ಮಾತನಾಡಿದರು. ಎಸ್.ಎಸ್.ಕೆ ಪಂಚಟ್ರಸ್ಟ್ ಕಮಿಟಿ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಅಧ್ಯಕ್ಷತೆ ವಹಿಸಿದ್ದರು. ಸಿದ್ದುಸಾ ರಾಯಬಾಗಿ, ಬಾಲರಾಜ ರಾಯಬಾಗಿ, ಸುರೇಂದ್ರಸಾ ರಾಯಬಾಗಿ, ಬಾಲಚಂದ್ರ ರಾಯಬಾಗಿ, ಡಾ. ರಘುನಾಥಸಾ ರಂಗ್ರೇಜಿ, ಓಂಕಾರಸಾ ಕಾಟವೆ, ಮೋಹನಸಾ ರಾಯಬಾಗಿ, ದತ್ತುಸಾ ಬಾಕಳೆ, ಎಲ್.ಕೆ. ಬದಿ, ಬಾಬು ರಾಯಬಾಗಿ, ಗಾಯತ್ರಿ ಮಹಿಳಾ ಮಂಡಳ ಸದಸ್ಯರು, ಎಸ್.ಎಸ್.ಕೆ. ತರುಣ ಸಂಘ, ಎಸ್.ಎಸ್.ಕೆ. ಹಿತ ರಕ್ಷಣಾ ಸಮಿತಿ, ರಾಘವೇಂದ್ರ ಪಾದಯಾತ್ರಾ ಸಮಿತಿ, ಹುಲಿಗೆಮ್ಮಾದೇವಿ ಪಾದಯಾತ್ರಾ ಸಮಿತಿ, ರಾಮಸೇವಾ ಸಮಿತಿ, ರಾಜಸ್ಥಾನ ವಿಷ್ಣು ಸಮಾಜ, ಆಂಜನೇಯ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

