ವಿಶೇಷ ರೈಲು ಸೇವೆ ಪ್ರಾರಂಭ: ಸ್ವಾಗತ
ಗದಗ: ಈ ಮೊದಲು ನಮ್ಮ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಜನರಲ್ ಮ್ಯಾನೇಜರ್ ನೈರುತ್ಯ ರೇಲ್ವೆ ವಲಯ ಹುಬ್ಬಳ್ಳಿ ಇವರನ್ನು ನಾವು ಪತ್ರದ ಮೂಲಕ ಒತ್ತಾಯಿಸಿದ್ದೇವೆ. ನಮ್ಮ ಪತ್ರಕ್ಕೆ ಸ್ಪಂದಿಸಿ ಡಿಸೆಂಬರ-2013ರ ವರೆಗೆ ಪ್ರತಿ ಮಂಗಳವಾರ ಚಲಿಸುವ ಯಶವಂತಪುರ-ಅಹ್ಮದಾಬಾದ್ ವಿಶೇಷ ರೈಲು ಸೇವೆಯನ್ನು ಗದಗ ಮೂಲಕ ಪ್ರಾರಂಭಿಸಿದಕ್ಕಾಗಿ ಹಾಗೂ ಹೊಸದಾಗಿ ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ರಾಗಿ ಅಧಿಕಾರ ವಹಿಸಿಕೊಂಡ ರಾಜೀವ ಭಾರ್ಗವ ಇವರಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸ್ವಾಗತಿಸಲಾಯಿತು. ಮುಂಬರುವ ದಿನಗಳಲ್ಲಿ ರೇಲ್ವೆ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಒತ್ತಾಯಿಸಲಾಯಿತು. ಹಾಗೂ ಹೊಸದಾಗಿ ಗದಗ-ಮುಂಡರಗಿ-ಹಡಗಲಿ ಕೊಟ್ಟೂರ ಮತ್ತು ಹರಿಹರ ಮಾರ್ಗವನ್ನು ಮುಂಬರುವ ಮುಂಗಡ ಪತ್ರದಲ್ಲಿ ಮಂಜೂರ ಮಾಡಿಸಿ ರಚಿಸುವಂತೆ ರೇಲ್ವೆ ಸಚಿವರಿಗೆ ಹಾಗೂ ಜನರಲ್ ಮ್ಯಾನೇಜರ ನೈರುತ್ಯ ವಲಯ ಹುಬ್ಬಳ್ಳಿ ಇವರಿಗೆ ಒತ್ತಾಯಿಸಲಾಯಿತು. ನೂತನ ವಿಶೇಷ ರೈಲು ಮಂಗಳವಾರ ಬೆಳಗ್ಗೆ 10.45ಕ್ಕೆ ಯಶವಂತಪುರ ಬಿಟ್ಟು ಸಂಜೆ 7.20ಕ್ಕೆ ಹುಬ್ಬಳ್ಳಿಗೆ ಆಗಮಿಸಿ ನಂತರ ಗದಗ ನಗರಕ್ಕೆ ರಾತ್ರಿ 9ಕ್ಕೆ ಆಗಮಿಸುವುದು. ನಂತರ ಗದಗದಿಂದ ಸೊಲ್ಲಾಪುರ ಮಾರ್ಗವಾಗಿ ಬುಧವಾರ ಅಹ್ಮದಾಬಾದ್ ತಲುಪುವುದು. ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಎಲ್.ಸಿ .ಲಿಂಬಯ್ಯಸ್ವಾಮಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ, ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರ್ಮನ್ ಹಾಗೂ ನೈರುತ್ಯ ರೇಲ್ವೆ ವಲಯದ ಜಡ್ಐಸಿಸಿಸಿ ಸದಸ್ಯ ಜಿ.ಕೆ. ಆದಪ್ಪಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರೇಗಲ್ಲ: ಭೂಮಿಪೂಜೆ
ನರೇಗಲ್ಲ: ಸ್ಥಳೀಯ ಸಾಯಿ ನಗರದಲ್ಲಿ ಶಿರಡಿ ಸಾಯಿಬಾಬಾರ ಶಾಖಾ ಮಂದಿರವನ್ನು ನಿರ್ಮಿಸಲು ನಿಡಗುಂದಿ ಕೂಪ್ಪದ ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀಗಳು ಈಚೆಗೆ ಭೂಮಿಪೂಜೆ ನೆರವೇರಿಸಿದರು. ಪ್ರಕಾಶ ಸಂಗನಾಳ, ಉಮೇಶ ಸಂಕನಗೌಡ್ರ, ಮುತ್ತಣ್ಣ ಬೂದಿಹಾಳ, ವೀರೂಪಾಕ್ಷ ಸಂಗನಾಳ, ಬಸವರಾಜ ಒಳಕೊಟಿ, ರಮೇಶ ಬಂಡಿಹಾಳ, ಮಲ್ಲಣ್ಣ ಕುಷ್ಟಗಿ, ಜಗದೀಶ ಸಂಗನಾಳ ಈರಮ್ಮ, ಮೈಲಾರಪ್ಪ ಗೋಡಿ, ಮಲ್ಲಿಕಾರ್ಜುನ ಕುಷ್ಟಗಿ, ನಾಗವೇಣಿ, ರೇವತಿ ಸಂಗನಾಳ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

