ಇಂದು ಡಿಸಿಗೆ ಮನವಿ
ಗದಗ: ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ, ಗದಗ ಜಿಲ್ಲಾ ಘಟಕದಿಂದ ಶಿಕ್ಷಕರ ಸಮಸ್ಯೆಗಳ ಕುರಿತು ಹಂತ ಹಂತವಾಗಿ ಧರಣಿ ಸತ್ಯಾಗ್ರಹ, ತಹಸೀಲ್ದಾರ್ಗೆ ಮನವಿ ಅರ್ಪಿಸಿ ಸತ್ಯಾಗ್ರಹ ಮಾಡಿದ್ದು, ಈಗ ಕೊನೆಯ ಹಂತದ ಸತ್ಯಾಗ್ರಹ ನಡೆಸಿ ಡಿಸಿಗೆ ಮನವಿ ಅರ್ಪಿಸಲಾಗುವುದು. ಖಾಸಗಿ ಶಾಲೆಗಳ ಶಿಕ್ಷಕ ಶಿಕ್ಷಕೇತರರು ನ. 30 ರಂದು 12.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಹಾಜರಿದ್ದು, ಧರಣಿ ಸತ್ಯಾಗ್ರಹ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಅಯ್ಯನಗೌಡ ಪಾಟೀಲ್
ಗಜೇಂದ್ರಗಡ: ಸ್ಥಳೀಯ ಗಣ್ಯ ತಂಬಾಕು ವ್ಯಾಪಾರಸ್ಥರಾಗಿದ್ದ ಅಯ್ಯನಗೌಡ ಅಂದಾನಗೌಡ ಪಾಟೀಲ (ರೇವಡಿ) (55) ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಇವರ ನಿಧನಕ್ಕೆ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಆರ್.ಎಸ್. ಪಾಟೀಲ, ಐ.ಎಸ್. ಪಾಟೀಲ, ಶರಣಪ್ಪ ರೇವಡಿ, ಸೇರಿದಂತೆ ಅನೇಕ ಮಹನೀಯರು ಸಂತಾಪ ಸೂಚಿಸಿದ್ದಾರೆ.
ಹುಸೇನಬಿ ಮಜ್ಜಿಗುಡ್ಡ
ಮುಳಗುಂದ: ಪಟ್ಟಣದ ಚಿಂದಿಪೇಟಿ ಓಣಿಯ ನಿವಾಸಿ ಹುಸೇನಬಿ ಬುಡ್ಡೆಸಾಬ್ ಮಜ್ಜಿಗುಡ್ಡ (71) ಗುರುವಾರ ರಾತ್ರಿ ನಿಧನರಾದರು. ಮೃತರಿಗೆ ಮೂವರು ಪುತ್ರರು. ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಅಂದಾನಯ್ಯ ಕುರ್ತಕೋಟಿಮಠ, ಎಂ.ಎಸ್. ಪರ್ವತಗೌಡ, ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಸಾವಿತ್ರಿಬಾಯಿ ಪೂಜಾರ
ನರಗುಂದ: ಪಟ್ಟಣದ ದಂಡಾಪುರದ ಸಾವಿತ್ರಿಬಾಯಿ ಪೂಜಾರ (85) ಈಚೆಗೆ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

