ಗದಗ-ಹರಿಹರ ರೇಲ್ವೆ ಮಾರ್ಗಕ್ಕಾಗಿ ಆಗ್ರಹ
ಮುಂಡರಗಿ: ಗದಗದಿಂದ ಹರಿಹರಕ್ಕೆ ಮುಂಡರಗಿ-ಹೂವಿನಹಡಗಲಿ ಹರಪನಹಳ್ಳಿ ಮಾರ್ಗವಾಗಿ ನೂತನ ರೇಲ್ವೆ ಮಾರ್ಗವನ್ನು ಮಂಜೂರು ಪಡೆಯಲು, 2014ರ ರೇಲ್ವೆ ಮುಂಗಡ ಪತ್ರದಲ್ಲಿ ಸೇರಿಸಲು ಒತ್ತಾಯಿಸಿ ದೆಹಲಿ ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ನಡೆಸಲು ಎಲ್ಲ ಸಂಘಟನೆಗಳೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳುವುದಾಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಹೇಳಿದ್ದಾರೆ.
ಅವರು ಸೋಮವಾರ ಪಟ್ಟಣದ ಗಾಂಧಿ ಭವನದಲ್ಲಿ ಜರುಗಿದ ರೇಲ್ವೆ ಹೋರಾಟ ಸಮಿತಿಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರೇಲ್ವೆ ಸೌಲಭ್ಯ ಪಡೆದುಕೊಳ್ಳಬೇಕಾದರೆ ದೊಡ್ಡ ಪ್ರಮಾಣದ ಹೋರಾಟ ಅವಶ್ಯವಾಗಿದ್ದು, ಪಟ್ಟಣದ ಹಾಗೂ ತಾಲೂಕಿನ ಸಾರ್ವಜನಿಕರು, ವ್ಯಾಪಾರಸ್ಥರು, ಜನಪ್ರತಿನಿಧಿಗಳು ಎಲ್ಲರೂ ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲರೂ ಸೇರಿ ಹೋರಾಟದ ರೂಪು ರೇಷೆಗಳನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ. ದೆಹಲಿ ಪಾರ್ಲಿಮೆಂಟ್ ಎದುರು ಪ್ರತಿಭಟನೆ ನಡೆಸುವ ಉದ್ದೇಶದಿಂದ ಇನ್ನೂ ಹಲವಾರು ಬಾರಿ ಸಭೆಗಳನ್ನು ಕರೆದು ತೀರ್ಮಾನಿಸಲಾಗುವುದು ಎಂದರು. ಕೊಟ್ರಗೌಡ ಪಾಟೀಲ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವ ಹೋರಾಟಕ್ಕೆ ಎಂದೆಂದಿಗೂ ಬೆಂಬಲ ಇದ್ದೇ ಇರುತ್ತದೆ. ಇದಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವುದರಿಂದ ಹೋರಾಟಕ್ಕೆ ಹೆಚ್ಚು ಮಹತ್ವ ಬರುತ್ತದೆ ಎಂದರು.
ಸಭೆಯಲ್ಲಿ ಯಮನಪ್ಪ ಭಜಂತ್ರಿ, ದುರಗಪ್ಪ ಪೂಜಾರ, ಸಹದೇವಪ್ಪ ಭಜಂತ್ರಿ, ಬಸಪ್ಪ ವಡ್ಡರ, ಶಂಕರಗೌಡ ಪಾಟೀಲ, ಗುರಪ್ಪ ಹುಬ್ಬಳ್ಳಿ, ದೇವಪ್ಪ ಕಟ್ಟಿಮನಿ, ಮಂಜುನಾಥ ಇಟಗಿ, ದೇವಪ್ಪ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೋಹನ್ಗೌಡ ಪಾಟೀಲ ನಿರೂಪಿಸಿ, ಅಂದಾನಗೌಡ ಕುಲಕರ್ಣಿ ಸ್ವಾಗತಿಸಿ, ಬಿ.ಎಸ್. ಹೂಗಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

