ಗದಗ

ಹಿಂದೂಗಳ ರಕ್ಷಣೆಯೇ ಸಂಘದ ಉದ್ದೇಶ: ಅರುಣಕುಮಾರ್

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 12
ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಇದೀಗ 88 ವರ್ಷವಾಗಿದೆ. ರಾಷ್ಟ್ರಾದ್ಯಂತ ಹಿಂದೂ ಸಮಾಜವನ್ನು ರಕ್ಷಣೆ ಮಾಡುವಂತಹ ಕೆಲಸವನ್ನು ಸಂಘ ಚಾಚೂ ತಪ್ಪದೇ ಮಾಡುತ್ತ ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ವಿಭಾಗದ ಪ್ರಚಾರಕ ಅರುಣಕುಮಾರ ಹೇಳಿದರು.     
ಅವರು ಶನಿವಾರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಜಯದಶಮಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಪಥ ಸಂಚಲನದ ನಂತರ ಗಾಂಧಿ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು 40 ಸಾವಿರ ಗ್ರಾಮಗಳಲ್ಲಿ, 200 ದೇಶಗಳಲ್ಲಿ ಹಿಂದೂಗಳಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಸಂಘವನ್ನು ಸಂಘಟನೆ ಮಾಡಲಾಗುವುದು ಎಂದರು.
ವಿವೇಕ ಜಾಗೃತ ಬಳಗದ ಸಂಚಾಲಕ ಡಾ. ಪಿ.ಬಿ. ಹಿರೇಗೌಡ್ರ ಮಾತನಾಡಿ, ದೇಶದ ರಕ್ಷಣೆ ಹಾಗೂ ಹಿಂದೂ ಮನಸ್ಸುಗಳನ್ನು ಒಂದು ಮಾಡುವುದು ಇಂದು ಅವಶ್ಯವಾಗಿದೆ. ಇದಕ್ಕೆ ಎಲ್ಲರೂ ಕಂಕಣ ಬದ್ಧರಾಗಿ ನಿಲ್ಲಬೇಕಾಗಿದೆ ಎಂದರು.
ಎಸ್.ಆರ್. ರಿತ್ತಿ, ಮಂಜುನಾಥ ಇಟಗಿ, ಶಿವು ನವಲಗುಂದ, ಶ್ರೀನಿವಾಸ ಕಟ್ಟಿಮನಿ, ಮಲ್ಲಿಕಾರ್ಜುನ ಬಾರಕೇರ, ಯಲ್ಲಪ್ಪ ಅರ್ಕಸಾಲಿ, ಪ್ರಾಣೇಶ ಅರ್ಕಸಾಲಿ, ಮಾರುತಿ ಅಳವಂಡಿ, ಆನಂದ ರಾಮೇನಹಳ್ಳಿ ಭಾಗವಹಿಸಿದ್ದರು.
ನಾಗರಾಜ ಕೋಳಿ, ರಾಮು ಡೊಣ್ಣಿ, ಬಸಯ್ಯ ಇಟಗಿಮಠ, ಶಂಕರಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಕಾಲವಾಡ, ಮಾರುತಿ ಯಾವಗಲ್, ಸುರೇಶ ರಾಮೇನಹಳ್ಳಿ, ಶ್ರೀಕಾಂತ ಬಡಿಗೇರ, ಕೃಷ್ಣಾ ಗಾರವಾಡ, ಕೋಟೇಶ ಕುರಿ, ಕೃಷ್ಣಾ ರಾಮೇನಹಳ್ಳಿ, ಶ್ರೀನಿವಾಸ ಏಳಕೊಳ್ಳಿ, ಮಂಜುನಾಥ ಮುಧೋಳ, ಆನಂದ ರಾಮೇನಹಳ್ಳಿ, ದೇವಪ್ಪ ಇಟಗಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.